ಕಣ್ಣಾಡಿಸು | ಸಹಾಯ

ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ
ಇಂಗ್ಲಿಷ್ ಕನ್ನಡ ಎಲ್ಲೆಡೆ ಹುಡುಕು
ಉದಾ: ಅಭಿಜ್ಞಾನ - ಅಭಿ% - %ಜ್ಞಾನ

ಜಿ.ವಿ. ಕನ್ನಡ ನಿಘಂಟು

    ಕುಂಡ ಹೆಸರುಪದ

      (ಸಂ) ೧ ಹೋಮಕಾರ್ಯಕ್ಕಾಗಿ ನೆಲದಲ್ಲಿ ಮಾಡಿದ ಕುಣಿ, ಗುಣಿ ೨ ಮಣ್ಣಿನ ಪಾತ್ರೆ, ಮಡಕೆ ೩ ಮಣ್ಣು ತುಂಬಿ ಸಣ್ಣ ಸಸಿಗಳನ್ನು ಬೆಳಸುವ ಮಣ್ಣಿನ ಪಾತ್ರೆ ೪ ಕೊಳ, ಜಲಾಶಯ, ಕುಂಟೆ ೫ ಹೊಟ್ಟೆ, ಉದರ ೬ ಹಾದರಕ್ಕೆ ಹುಟ್ಟಿದ ಮಗ

    ಕುಂಡಗೋಲ(ಳ)ಕ ಪರಿಚೆಪದ

      ೧ ಹುಳಿಗಂಜಿ, ಅಂಜಲಿ ೨ ಹಾದರಕ್ಕೆ ಹುಟ್ಟಿದವನು ೩ ವಿಧವೆಗೆ ಬೇರೆಯವನಿಂದ ಹುಟ್ಟಿದವನು

    ಕುಂಡಲ(ಳ) ಹೆಸರುಪದ

      (ಸಂ) ೧ ಕಿವಿಯ ಆಭರಣ ೨ ಕುಣಿಕೆ ಹಗ್ಗದ ಮಲಕು ೩ ಬರಹದಲ್ಲಿ ಬಳಸುವ ಆವರಣ ಚಿಹ್ನೆ, ಕಂಸ ೪ ವರ್ತುಲ, ಸುತ್ತು

    ಕುಂಡಲಿ(ಳಿ) ಹೆಸರುಪದ

      (<ಸಂ. ಕುಂಡಲಿನ್) ೧ ಸುರುಳಿ ಸುತ್ತಿಕೊಂಡ ಹಾವು ೨ ಒಂದು ಮೂಲಿಕೆ ೩ ದುಂಬಿ, ಭ್ರಮರ ೪ ಕುಂಡಲಿನಿ ೫ ಜಾತಕದಲ್ಲಿ ಹನ್ನೆರಡು ಮನೆಗಳ ರೇಖಾಕೃತಿ, ಜಾತಕ

    ಕುಂಡಲಿ(ಳಿ) ಪರಿಚೆಪದ

      (<ಸಂ. ಕುಂಡಲಿನ್) ೧ ವರ್ತುಲಾಕಾರವಾದ ೨ ಕುಂಡಲಗಳಿಂದ ಅಲಂಕೃತವಾದ

    ಕುಂಡಲಿಗ ಹೆಸರುಪದ

      (<ಕುಂಡಲಿ) ದುಂಬಿ, ಭ್ರಮರ

    ಕುಂಡಲಿನಿ ಹೆಸರುಪದ

      (ಸಂ) ೧ ಯೋಗಶಾಸ್ತ್ರದಲ್ಲಿ ಸರ್ಪರೂಪವಾಗಿ ರೂಪಿಸಲ್ಪಟ್ಟಿರುವ ಪ್ರಕೃತಿಶಕ್ತಿ, ದುರ್ಗೆಯ ಒಂದು ರೂಪ ೨ ಯೋಗದ ಷಟ್ಪದಾರ್ಥದಲ್ಲಿ ಒಂದು

    ಕುಂಡಿ(ಡೆ) ಹೆಸರುಪದ

      (ದೇ) ೧ ನಿತಂಬ, ಪಿರ್ರೆ, ಅಂಡು ೨ ಪಾತ್ರೆ ಮೊ. ವುಗಳ ತಳ, ಅಡಿಭಾಗ

    ಕುಂತಲ(ಣ, ಹೆಸರುಪದ

      ಳ) (ಸಂ) ೧ ತಲೆಗೂದಲು, ಕೇಶ ೨ ಒಂದು ಬಗೆಯ ಕೇಶಬಂಧ ೩ ಒಂದು ದೇಶದ ಹೆಸರು

    ಕುಂದ ಹೆಸರುಪದ

      (ದೇ) ಬೆಟ್ಟ, ಗುಡ್ಡ; (ಸಂ) ೧ ಒಂದು ಜಾತಿಯ ಮಲ್ಲಿಗೆ, ಮೊಲ್ಲೆ ೨ ಒಂದು ಬಗೆಯ ಸುಗಂಧದ ಸಸ್ಯ ೩ ಕುಬೇರನ ನವನಿಧಿಗಳಲ್ಲಿ ಒಂದು