ಕನ್ನಡ ಗಣಕ ಪರಿಷತ್ ಕೀಲಿಮಣೆ

(ಕರ್ನಾಟಕ ರಾಜ್ಯ ಸರ್ಕಾರದಿಂದ ಅಂಗೀಕೃತವಾದ ಕೀಲಿಮಣೆ ವಿನ್ಯಾಸ)


 

ಗಮನಿಸಿ:

ಕಗಪ ಕೀಲಿಮಣೆಯ ಲಕ್ಷಣಗಳು:

ಕಗಪ (ಕನ್ನಡ ಗಣಕ ಪರಿಷತ್ತು) ಕೀಲಿಮಣೆಯು ಒಂದು ಕನ್ನಡ ಅಕ್ಷರಕ್ಕೆ ಒಂದೇ ಕೀಲಿ ಎಂಬ ಮೂಲತತ್ವವನ್ನು ಹೊಂದಿದ್ದು, ಕನ್ನಡ ಭಾಷೆಯಲ್ಲಿನ ಸ್ವರಗಳು, ವ್ಯಂಜನಗಳು, ಸ್ವರ ಚಿನ್ಹೆಗಳು, ಒತ್ತಕ್ಷರಗಳು ಎಲ್ಲವನ್ನೂ ಇಂಗ್ಲಿಷಿಗಾಗಿ ಇರುವ ೨೬ ಕೀಲಿಗಳಿಗೆ ಅಳವಡಿಸಲಾಗಿದೆ.

 

ಸ್ವರಗಳು:

ಪ್ರತಿಯೊಂದು ಸ್ವರಕ್ಕೂ ಪ್ರತ್ಯೇಕವಾದ ಕೀಲಿಯನ್ನು ಹೊಂದಿಸಲಾಗಿದೆ. ಸ್ವರದ ಹಿಂದೆ ಮತ್ತೊಂದು ಸ್ವರ, ಖಾಲಿ ಜಾಗ, ಅಥವಾ ವ್ಯಂಜನವಲ್ಲದ ಬೇರೊಂದು ಅಕ್ಷರವಿದ್ದಾಗ ಮಾತ್ರ ಸ್ವರವು ತನ್ನ ಮೂಲರೂಪವನ್ನು ಉಳಿಸಿಕೊಂಡಿರುತ್ತದೆ.

 

ಉದಾಹರಣೆ:

a A i I u U R RX e E Y o O V

ಅ ಆ ಇ ಈ ಉ ಊ ಋ ೠ ಎ ಏ ಐ ಒ ಓ ಔ

 

avnu VxDiynfnu kuwidnu.

ಅವನು ಔಷಧಿಯನ್ನು ಕುಡಿದನು.

 

vixualf bEsikf oMdu anfvyik tMtfrAMS.

ವಿಷುಅಲ್ ಬೇಸಿಕ್ ಒಂದು ಅನ್ವಯಿಕ ತಂತ್ರಾಂಶ.


 

ಯೋಗವಾಹಗಳು:

M ಕೀಲಿಯನ್ನು ಅನುಸ್ವಾರಕ್ಕೂ, H ಕೀಲಿಯನ್ನು ವಿಸರ್ಗಕ್ಕೂ ಉಪಯೋಗಿಸಬೇಕು.

 

aMbr, aMtHkrN

ಅಂಬರ, ಅಂತಃಕರಣ


 

ವ್ಯಂಜನಗಳು:

ಪ್ರತಿಯೊಂದು ವ್ಯಂಜನಕ್ಕೂ ಪ್ರತ್ಯೇಕವಾದ ಕೀಲಿಯನ್ನು ಹೊಂದಿಸಲಾಗಿದೆ. ವ್ಯಂಜನಗಳಿಗೆ ಸಂಬಂಧಿಸಿದ, ``k, K, g, G'' ಇತ್ಯಾದಿ ಕೀಲಿಗಳನ್ನು ಒತ್ತಿದಾಗ `ಅ' ಕಾರವು ಅಂತರ್ಗತವಾದ ವ್ಯಂಜನಗಳು ಮೂಡುತ್ತವೆ.

 

ಉದಾಹರಣೆ:

k K g G z

ಕ ಖ ಗ ಘ ಞ

 

c C j J Z

ಚ ಛ ಜ ಝ ಙ

 

q Q w W N

ಟ ಠ ಡ ಢ ಣ

 

t T d D n

ತ ಥ ದ ಧ ನ

 

p P b B m

ಪ ಫ ಬ ಭ ಮ

 

y r l v S x s h L

ಯ ರ ಲ ವ ಶ ಷ ಸ ಹ ಳ

 

``ಕ್, ಖ್, ಗ್, ಘ್'' ಇತ್ಯಾದಿ ಮೂಲವ್ಯಂಜನಗಳು ಬೇಕಾದಲ್ಲಿ ಆಯಾ ವ್ಯಂಜನ ಕೀಲಿಯನ್ನು ಒತ್ತಿದ ನಂತರ ಹಲಂತ್ (f) ಕೀಲಿಯನ್ನು ಒತ್ತಬೇಕು.

 

ಉದಾಹರಣೆ:

kf, Kf, gf, Gf

ಕ್, ಖ್, ಗ್, ಘ್

 

ಕೆಲವೊಮ್ಮೆ ಪದದ ಮಧ್ಯೆ ವ್ಯಂಜನದ ನಂತರ ಕೀಲಿಸುವ ಸ್ವರವನ್ನು ಮೂಲರೂಪದಲ್ಲೇ ಉಳಿಸಿಕೊಳ್ಳಬೇಕಾಗಬಹುದು. ಇಂತಹ ಸಂದರ್ಭಗಳಲ್ಲಿ `ಅ' ಕೀಲಿಯನ್ನು ``ತಡೆಕೀಲಿ''ಯಾಗಿ ಉಪಯೋಗಿಸಬೇಕು. ಪ್ರತಿ ವ್ಯಂಜನದೊಡನೆ `ಅ' ಕಾರವು ಅಂತರ್ಗತವಾಗಿರುವುದರಿಂದ ಯಾವುದೇ ವ್ಯಂಜನವನ್ನು ಒತ್ತಿದನಂತರ `ಅ' ಕೀಲಿಯನ್ನು ಒತ್ತಿದರೆ ಅವೆರೆಡೂ ಸೇರುವ ಸಂಭವ ಇಲ್ಲ. ಆದ್ದರಿಂದ ಒಂದು ವ್ಯಂಜನ ಮತ್ತು ನಿರ್ದಿಷ್ಟ ಸ್ವರದ ನಡುವೆ `ಅ' ಕೀಲಿಯನ್ನು ಒತ್ತಿದಾಗ ಆ ವ್ಯಂಜನ ಮತ್ತು ಸ್ವರವು ಸೇರಿ ಗುಣಿತಾಕ್ಷರವಾಗದೆ ಅವೆರೆಡೂ ತಮ್ಮ ಮೂಲ ರೂಪಗಳನ್ನು ಉಳಿಸಿಕೊಳ್ಳುತ್ತವೆ.

 

ಉದಾಹರಣೆ:

iMwiyinfPo = ಇಂಡಿಯಿನ್ಫೊ

iMwiyainfPo = ಇಂಡಿಯಇನ್ಫೊ


 

ಗುಣಿತಾಕ್ಷರಗಳು:

ಸ್ವರ ಚಿನ್ಹೆಗಳಿಗೆ (ಮಾತ್ರಾ) ಪ್ರತ್ಯೇಕವಾದ ಕೀಲಿಗಳಿಲ್ಲ. ಯಾವುದೇ ಪದದಲ್ಲಿ ವ್ಯಂಜನದ ನಂತರ ಸ್ವರವು ಬಂದ ಕೂಡಲೇ ಸ್ವರವು ತನ್ನ ಮೂಲರೂಪವನ್ನು ಕಳೆದುಕೊಂಡು ಸ್ವರಚಿನ್ಹೆಯಾಗಿ ಬದಲುಗೊಂಡು ವ್ಯಂಜನದ ಜೊತೆಗೆ ಸೇರಿ ಗುಣಿತಾಕ್ಷರವಾಗಿಬಿಡುತ್ತದೆ.

 

ಉದಾಹರಣೆ:

k kA ki kI ku kU kR kRX ke kE kY ko kO kV kM kH

ಕ ಕಾ ಕಿ ಕೀ ಕು ಕೂ ಕೃ ಕೄ ಕೆ ಕೇ ಕೈ ಕೊ ಕೋ ಕೌ ಕಂ ಕಃ

 

kUwi bALON. sEri duwiyON.

ಕೂಡಿ ಬಾಳೋಣ. ಸೇರಿ ದುಡಿಯೋಣ.


 

ಸಂಯುಕ್ತಾಕ್ಷರಗಳು:

ಎರಡು ಅಥವಾ ಹೆಚ್ಚಿನ ವ್ಯಂಜನಗಳು ಸೇರಿದಾಗ ಸಂಯುಕ್ತಾಕ್ಷರ ಉಂಟಾಗುತ್ತದೆ. ಕಗಪ ಕೀಲಿಮಣೆಯಲ್ಲಿ ಒಂದು ವ್ಯಂಜನಕ್ಕೆ ಸಂಬಂಧಿಸಿದ ಕೀಲಿಯನ್ನು ಒತ್ತಿದ ಅನಂತರ ಮತ್ತೊಂದು ವ್ಯಂಜನವನ್ನು ಒತ್ತಿದರೆ ಆ ಎರಡು ವ್ಯಂಜನಗಳು ಸೇರಿಕೊಂಡು ಒತ್ತಕ್ಷರವಾಗುವುದಿಲ್ಲ. ಬದಲಿಗೆ ಅವೆರೆಡೂ `ಅ' ಕಾರಾಂತ ಗುಣಿತಾಕ್ಷರಗಳಾಗುತ್ತವೆ. ಎರಡು ವ್ಯಂಜನಗಳು ಸೇರಿ ಸಂಯುಕ್ತಾಕ್ಷರವಾಗಬೇಕಾದರೆ ಅವುಗಳ ಮಧ್ಯೆ `ಹಲಂತ್' (f) ಕೀಲಿಯನ್ನು ಉಪಯೋಗಿಸಬೇಕು.

 

ಉದಾಹರಣೆ:

amfm, uxfqfr, SfrI, lkfxfmi, sftfrI

ಅಮ್ಮ, ಉಷ್ಟ್ರ, ಶ್ರೀ, ಲಕ್ಷ್ಮಿ, ಸ್ತ್ರೀ

 

ಪದದ ಮಧ್ಯೆ ಮೂಲವ್ಯಂಜನವನ್ನು ಪಡೆಯಬೇಕಾದರೆ ಹಲಂತ್ (f) ಕೀಲಿಯನ್ನು ಎರಡು ಸಲಾ ಬಳಸಬೇಕು.

 

ಉದಾಹರಣೆ:

lAyrffgLu, sAPfqffvErf, inffsfyAqf

ಲಾಯರ್‌ಗಳು, ಸಾಫ್ಟ್‌ವೇರ್‍, ಇನ್‌ಸ್ಯಾಟ್


 

ನುಕ್ತಾ (X) ಕೀಲಿಯ ಬಳಕೆ:

X ಕೀಲಿಯನ್ನು ``ನುಕ್ತಾ'' ಕೀಲಿಯೆಂದು ಪರಿಗಣಿಸಲಾಗಿದೆ. j, P ಕೀಲಿಗಳ ನಂತರ X ಕೀಲಿಯನ್ನು ಬಳಸುವುದರ ಮೂಲಕ ``ಜ಼, ಫ಼'' ಅಕ್ಷರಗಳನ್ನು ಪಡೆಯಬಹುದು.

 

ಉದಾಹರಣೆ:

jXf, jX, jXA, jXO

ಜ಼್, ಜ಼, ಜ಼ಾ, ಜ಼ೋ

 

PXf, PX, PXA, PXO

ಫ಼್, ಫ಼, ಫ಼ಾ, ಫ಼ೋ

 

X ಕೀಲಿಯನ್ನು 'ರ' `ಳ' ಕೀಲಿಗಳ ನಂತರ X ಬಳಸುವುದರ ಮೂಲಕ ಹಳಗನ್ನಡ ಅಕ್ಷರಗಳಾದ `ಱ', `ೞ' ಗಳನ್ನು ಪಡೆಯಬಹುದು.

 

ಉದಾಹರಣೆ:

rXf, rX, rXA, rXO

ಱ್, ಱ, ಱಾ, ಱೋ

 

LXf, LX, LXA, LXO

ೞ್, ೞ, ೞಾ, ೞೋ

 

ಕನ್ನಡದಲ್ಲಿ `ೠ' ಅಕ್ಷರದ ಬಳಕೆ ಬಹಳ ಕಡಿಮೆ. ಕಗಪ ಕೀಲಿಮಣೆಯಲ್ಲಿ ಇದನ್ನು RX ಎಂದು ಪಡೆಯಬಹುದು.

 

ಉದಾಹರಣೆ:

RX, akRXr

ೠ, ಅಕೄರ


 

ಲೇಖನ ಚಿನ್ಹೆಗಳು:

( ) [ ] { } + - * / = _ | ? ! " ` ' . , : ; \ ~ @ # $ % ^ & ಕೀಲಿಗಳು ಅವೇ ಚಿನ್ಹೆಗಳಿಗೆ ಉಪಯೋಗಿಸಲ್ಪಡುತ್ತವೆ.