ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಮಂದಾಗ್ನಿ ಹೆಸರುಪದ

   = ೧ ಹೆಚ್ಚು ಉರಿಯಿಲ್ಲದಿರುವ ಬೆಂಕಿ; ಪ್ರಖರವಾದ, ಶಾಖವಿಲ್ಲದಿರುವ ಬೆಂಕಿ ೨ ಗುಪ್ತವಾದ ಬೆಂಕಿ, ಸುಪ್ತಾಗ್ನಿ ೩ ಜಠರಾಗ್ನಿಯ ನಾಲ್ಕು ಸ್ಥಿತಿಗಳಲ್ಲಿ ಒಂದು, ಕಫದಿಂದ ಉಂಟಾಗುವ ವಿಕಾರ ೪ ಹಸಿವು ಇಲ್ಲದಿರುವಿಕೆ, ಅಜೀರ್ಣ

  ಮಂದಾನಿಲ ಹೆಸರುಪದ

   = ೧ ಮಂದಮಾರುತ ೨ (ಛಂದಸ್ಸಿನಲ್ಲಿ) ಒಂದು ವೃತ್ತದ ಹೆಸರು ಮಂದಾಸನ (<ಸಂ. ಮಂಜೂಷಾ /<ತೆಲು. ಮಂದಸ); ದೇವರ ವಿಗ್ರಹವನ್ನಿಡುವ ಮರ ಯಾ ಬಟ್ಟಲು, ಲೋಹದ ಮಂಟಪ

  ಮಂದಿ ಹೆಸರುಪದ

   (ದೇ) ಜನ, ಜನಸಮೂಹ; (<ಹಿಂ. ಮರಾ. ಮಂದೀ) ಬೆಲೆಯ ಕುಸಿತ, ಅಗ್ಗ, ಸೋವಿ

  ಮಂದಿ(ದೆ)ವಾಳ ಹೆಸರುಪದ

   (<ದೇ. ಮಂದಿ) ೧ ಜನ ಸಾಮಾನ್ಯ, ನಾಡಾಡಿ ೨ (ಅತಿ ಪರಿಚಯದಿಂದ ಉಂಟಾದ) ಸಲಿಗೆ, ಸದರ ೩ ಮದ, ಸೊಕ್ಕು, ಗರ್ವ ೪ ಸಡಗರ, ಸಂಭ್ರಮ

  ಮಂದಿರ ಹೆಸರುಪದ

   (ಸಂ) ೧ ಮನೆ, ನಿವಾಸ ಸ್ಥಳ ೨ ದೇವಾಲಯ, ಗುಡಿ ೩ ಹೆಂಡತಿಮಕ್ಕಳಿಂದ ಕೂಡಿದ ಸಂಸಾರ; ಕುಟುಂಬ

  ಮಂದಿಲ ಹೆಸರುಪದ

   (<ಮರಾ. ಮಂದೀಲ್) ಜರಿ ಅಂಚಿನ ರುಮಾಲು, ಪೇಟ

  ಮಂದಿವಾಳತನ ಹೆಸರುಪದ

   ಅತಿ ಸಲಿಗೆ, ಸದರ

  ಮಂದು ಹೆಸರುಪದ

   (ದೇ) ೧ ಆವರಣವಿಲ್ಲದ ನಿವೇಶನ, ಬಯಲು ೨ ಸಣ್ಣ ಹಳ್ಳಿಗಳ ಗುಂಪು

  ಮಂದುರ ಹೆಸರುಪದ

   (ಸಂ) ಕುದುರೆಯ ಲಾಯ, ಅಶ್ವಶಾಲೆ

  ಮಂದುರಿಗ ಹೆಸರುಪದ

   (<ಮಂದುರ + ಇಗ) ಕುದುರೆಯ ಲಾಯದ ಮೇಲ್ವಿಚಾರಕ, ಅಧಿಕಾರಿ, ಕಾಸ್ತಾರ

  ಮಂದೆ ಹೆಸರುಪದ

   (ದೇ) ೧ ಗುಂಪು, ಸಮೂಹ, ತಂಡ ೨ ದನ, ಕುರಿ ಮೊ. ಪ್ರಾಣಿಗಳ ಹಿಂಡು, ಗುಂಪು ೩ ಗೋಮಾಳ, ಹುಲ್ಲುಗಾವಲು

  ಮಂದೈಸು ಎಸಕಪದ

   (<ಮಂದ + ಇಸು) ೧ ದಟ್ಟವಾಗು, ಸಾಂದ್ರವಾಗು ೨ ಒಟ್ಟುಗೂಡು, ಗುಂಪಾಗು ೩ ಹೆಚ್ಚಾಗು, ಅಧಿಕವಾಗು

  ಮಂದ್ರ ಹೆಸರುಪದ

   (ಸಂ) ೧ ತಗ್ಗಾದ ಧ್ವನಿ, ಕೆಳದನಿ ೨ (ಧ್ವನಿಯ) ಗಂಭೀರತೆ, ಗಾಂಭೀರ್ಯ ೩ (ಸಂಗೀತದಲ್ಲಿ) ಮಂದ್ರ, ಮಧ್ಯ ಮತ್ತು ತಾರ ಎಂಬ ಮೂರು ಬಗೆಯ ಸ್ಥಾಯಿಗಳಲ್ಲಿ ಒಂದು, ತಗ್ಗಿನ ಸ್ಥಾಯಿ

  ಮಂದ್ರ ಪರಿಚೆಪದ

   (ಸಂ) (ಧ್ವನಿಗೆ ಸಂಬಂಧಿಸಿದಂತೆ) ಗಂಭೀರವಾದ, ಆಳವಾದ

  ಮಕ(ಖ)ಮಲ್ಲು ಹೆಸರುಪದ

   (<ಪಾರ. ಮಖ್ಮಲ್) ನಯವಾದ ಹೊರ ಮೈಯುಳ್ಳ ಒಂದು ಬಗೆಯ ದಪ್ಪ ಬಟ್ಟೆ, ವೆಲ್ವೆಟ್ಟು

  ಮಕರ ಹೆಸರುಪದ

   (ಸಂ) ೧ ಮೊಸಳೆ, ನಕ್ರ ೨ ಒಂದು ಜಾತಿಯ ಮೀನು ೩ ಕುಬೇರನ ನವನಿಧಿಗಳಲ್ಲಿ ಒಂದು ೪ ಮೀನಿನ ಗುರುತುಳ್ಳ ಧ್ವಜ ೫ ಜ್ಯೋತಿಷ್ಯದ ಹನ್ನೆರಡು ರಾಶಿಗಳಲ್ಲಿ ಒಂದು; (<ಮರಾ. ಮಖರ್) ೧ ದೇವತಾ ಮೂರ್ತಿ, ನವದಂಪತಿಗಳು, ಮೈನೆರೆದ ಹುಡುಗಿ ಮುಂ.ವರನ್ನು ಕುಳ್ಳಿರಿಸಿ ಆರತಿಯೆತ್ತಲು ರಚಿಸಿದ ಮಂಟಪ

  ಮಕರಂದ ಹೆಸರುಪದ

   (ಸಂ) ಹೂವಿನರಸ, ಬಂಡು, ಮಧು, ಜೇನು

  ಮಕರಕುಂಡಲ ಹೆಸರುಪದ

   ಮೊಸಳೆ ಯಾ ಮೀನಿನ ಆಕಾರದ ಒಂದು ಬಗೆಯ ಕಿವಿಯ ಆಭರಣ

  ಮಕರಟೆಕ್ಕೆ ಹೆಸರುಪದ

   ಮೈಸೂರಿನ ರಾಜರ ಮೆರವಣಿಗೆ ದರ್ಬಾರುಗಳಲ್ಲಿ ಸೇವಕರು ಎತ್ತಿ ಹಿಡಿಯುತ್ತಿದ್ದ ಬಿರುದಿನ ಸಂಕೇತಗಳಲ್ಲಿ ಒಂದು, ಮೀನಧ್ವಜ

  ಮಕರವೃತ್ತ ಹೆಸರುಪದ

   ಭೂಮಿಯ ಮೇಲೆ ಭೂಮಧ್ಯ ರೇಖೆಯ ದಕ್ಷಿಣಕ್ಕೆ ಸೂರ್ಯನು ಸಂಚರಿಸುವುದನ್ನು ಸೂಚಿಸಲು ಎಳೆದಿರುವಂತೆ ಭಾವಿಸಿರುವ ರೇಖೆ

ಈ ತಿಂಗಳ ನಿಘಂಟು ಬಳಕೆ : 34584