ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಅಭಿವೃದ್ಧಿ ಹೆಸರುಪದ

   (ಸಂ) ಏಳಿಗೆ, ಶ್ರೇಯಸ್ಸು

  ಅಭಿವ್ಯಂಜಿಸು ಎಸಕಪದ

   (<ಸಂ. ಅಭಿವ್ಯಂಜನ) ಸ್ಪಷ್ಟವಾಗಿ ತೋರು

  ಅಭಿವ್ಯಕ್ತಿ ಹೆಸರುಪದ

   (ಸಂ) ೧ ಪ್ರಕಟವಾಗುವುದು ೨ ಹೇಳಿಕೆ

  ಅಭಿಶಾಪ ಹೆಸರುಪದ

   (ಸಂ) ೧ ಉಗ್ರಶಾಪ ೨ ಅನ್ಯಾಯವಾದ ಆರೋಪಣೆ

  ಅಭಿಷಿಕ್ತ ಹೆಸರುಪದ

   (ಸಂ) ಅಭಿಷೇಕ ಹೊಂದಿದ ವ್ಯಕ್ತಿ, ರಾಜ, ದೊರೆ

  ಅಭಿಷೇಕ ಹೆಸರುಪದ

   (ಸಂ) ದೇವರಿಗೆ ಮಾಡಿಸುವ ಹಾಗು ಪಟ್ಟ ಕಟ್ಟುವಾಗ ಮಾಡಿಸುವ ಮಂಗಳಸ್ನಾನ

  ಅಭಿಸಾರ ಹೆಸರುಪದ

   (ಸಂ) ಪ್ರಿಯರ ಭೇಟಿಗಾಗಿ ಸಂಕೇತ ಸ್ಥಾನಕ್ಕೆ ಹೋಗುವುದು

  ಅಭಿಸಾರಿಕೆ ಹೆಸರುಪದ

   (ಸಂ) ಪ್ರಿಯನನ್ನು ಕೂಡಲು ಸಂಕೇತ ಸ್ಥಾನಕ್ಕೆ ಹೋಗುವ ಹೆಣ್ಣು

  ಅಭೀಪ್ಸೆ ಹೆಸರುಪದ

   (ಸಂ) ಬಯಕೆ

  ಅಭೀಷ್ಟ ಹೆಸರುಪದ

   (ಸಂ) ಇಷ್ಟವಾದುದು, ಬಯಸಿದುದು

  ಅಭೂತಪೂರ್ವ ಹೆಸರುಪದ

   (ಸಂ) ಹಿಂದೆಂದೂ ನಡೆಯದಿರುವುದು

  ಅಭ್ಯಂಗ(ನ) ಹೆಸರುಪದ

   (ಸಂ) ೧ ಲೇಪನ ದ್ರವ್ಯ ೨ ಎಣ್ಣೆಯನ್ನು ಸವರಿಕೊಂಡು ಮಾಡುವ ಸ್ನಾನ

  ಅಭ್ಯಂಜನ ಹೆಸರುಪದ

   (ಸಂ) ೧ ಲೇಪನ ದ್ರವ್ಯ ೨ ಎಣ್ಣೆ ಮಜ್ಜನ

  ಅಭ್ಯಂತರ ಹೆಸರುಪದ

   (ಸಂ) ೧ ಅಂತರಾಳ ೨ ಅಡ್ಡಿ ೩ ಆಕ್ಷೇಪಣೆ ೪ ಕಾಲದ ಅವಧಿ

  ಅಭ್ಯರ್ಥಿ ಹೆಸರುಪದ

   (ಸಂ) ಉಮೇದುವಾರ, ಅರ್ಜಿದಾರ

  ಅಭ್ಯಾಗತ ಹೆಸರುಪದ

   (ಸಂ) ೧ ಅನಿರೀಕ್ಷಿತವಾಗಿ ಬಂದ ಅತಿಥಿ ೨ ಆತಿಥ್ಯ, ಅತಿಥಿ ಸತ್ಕಾರ

  ಅಭ್ಯಾಗತ ಪರಿಚೆಪದ

   (ಸಂ) ಹೊರಗಿನಿಂದ ಬಂದ

  ಅಭ್ಯಾಗಮ ಹೆಸರುಪದ

   (ಸಂ) ೧ ಬರುವಿಕೆ ೨ ಯುದ್ಧ

  ಅಭ್ಯಾಸ ಹೆಸರುಪದ

   (ಸಂ) ೧ ರೂಢಿ ೨ ವ್ಯಾಸಂಗ ೩ ಪುನರುಚ್ಚಾರಣೆ ೪ ಹೊಸದಾಗಿ ಕಲಿತ ಪಾಠಗಳನ್ನು ರೂಢಿಸಿಕೊಳ್ಳುವುದಕ್ಕಾಗಿ ಕೊಡುವ ಸಾಧನ ಪಾಠ

  ಅಭ್ಯುತ್ಥಾನ ಹೆಸರುಪದ

   (ಸಂ) ೧ ಏಳಿಗೆ, ಅಭಿವೃದ್ಧಿ ೨ ಗೌರವಕ್ಕಾಗಿ ಎದ್ದು ನಿಲ್ಲುವುದು

ಈ ತಿಂಗಳ ನಿಘಂಟು ಬಳಕೆ : 40194