ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಅನುವರ್ತನ ಹೆಸರುಪದ

   (ಸಂ) ೧ ಅನುಸರಣೆ ೨ ಸಮ್ಮತಿ ಸೂಚಿಸುವುದು ೩ ಪರಿಣಾಮ

  ಅನುವಾದ ಹೆಸರುಪದ

   (ಸಂ) ೧ ಭಾಷಾಂತರ ೨ ವ್ಯಾಖ್ಯಾನ ೩ ಸಮ್ಮತಿ

  ಅನುವಾದ) ಹೆಸರುಪದ

   ಅಕ್ರಮವಾಗಿ ನಡೆಸುವ ವ್ಯಾಪಾರ, ಕಳ್ಳತನದ ವ್ಯಾಪಾರ

  ಅನುವು ಹೆಸರುಪದ

   (ದೇ) ೧ ಸೊಗಸು ೨ ರೀತಿ ೩ ಅವಕಾಶ ೪ ಕುಶಲ ೫ ಸ್ನೇಹ ೬ ಸಾಮರ್ಥ್ಯ

  ಅನುವೃತ್ತಿ ಹೆಸರುಪದ

   (ಸಂ) ಪುನರಾವರ್ತನೆ

  ಅನುಶಯ ಹೆಸರುಪದ

   (ಸಂ) ೧ ಸಮೀಪ, ಸಂಬಂಧ ೨ ಬಹಳ ಕಾಲದಿಂದ ಬಂದ ಹಗೆತನ ೩ ಪಶ್ಚಾತ್ತಾಪ ೪ ಉದ್ವೇಗ ೫ ಕೋಪ ೬ ಪೂರ್ವಜನ್ಮದ ದುಷ್ಕರ್ಮ ೭ ಪರೋಪಜೀವಿ

  ಅನುಶಾಸನ ಹೆಸರುಪದ

   (ಸಂ) ೧ ನಿರ್ದೇಶನ ೨ ಉಪದೇಶ ೩ ಶಿಕ್ಷೆ

  ಅನುಶೀಲನ ಹೆಸರುಪದ

   (ಸಂ) ಪರಿಶೀಲನೆ, ವಿಮರ್ಶೆ

  ಅನುಷ್ಠಾನ ಹೆಸರುಪದ

   (ಸಂ) ಆಚರಣೆ

  ಅನುಸಂಧಾನ ಹೆಸರುಪದ

   (ಸಂ) ೧ ಪರಿಶೀಲನೆ ೨ ಏರ್ಪಾಡು ೩ ಧ್ಯಾನ ೪ ಓರಣವಾಗಿ ಇರಿಸುವುದು ೫ ಹೆದೆಗೆ ಬಾಣ ಹೂಡುವುದು

  ಅನುಸರಣೆ ಹೆಸರುಪದ

   (ಸಂ) ೧ ಅನುಸರಿಸಿ ನಡೆಯುವುದು ೨ ವಿಧೇಯತೆ ೩ ಪದ್ಧತಿ ೪ ನಡವಳಿಕೆ ೫ ಸಲುಗೆ

  ಅನುಸೂಚಿ ಹೆಸರುಪದ

   (ಸಂ) ತಪ್ಸೀಲು, (ವಿವರ) ಪಟ್ಟಿ

  ಅನುಸ್ವಾರ ಹೆಸರುಪದ

   (ಸಂ) ಬಿಂದುರೂಪದ ವರ್ಣ, ಸ್ವರ ವರ್ಣದ ನಂತರವೇ ಉಚ್ಚರಿಸಬಹುದಾದ ವರ್ಣ

  ಅನೂಚಾನ ಹೆಸರುಪದ

   (ಸಂ) ಪರಂಪರೆಯಾಗಿ ನಡೆದು ಬಂದ ಪದ್ಧತಿ

  ಅನೂಚಾನ ಪರಿಚೆಪದ

   (ಸಂ) ವ್ಯಾಸಂಗಶೀಲನಾದ

  ಅನೂಪ ಹೆಸರುಪದ

   (ಸಂ) ೧ ನೀರು ಸಮೃದ್ಧಿಯಾಗಿರುವ ಪ್ರದೇಶ ೨ ಜೌಗು ಪ್ರದೇಶ ೩ ನದಿಯ ತೀರ ೪ ಬೆಟ್ಟದ ತಪ್ಪಲು ೫ ಕೆರೆ

  ಅನೂಪ ಪರಿಚೆಪದ

   (ಸಂ) ನೀರು ಸಮೃದ್ಧಿಯಾದ

  ಅನೃತ ಹೆಸರುಪದ

   (ಸಂ) ೧ ಸುಳ್ಳು ೨ ಕೃಷಿ, ವ್ಯವಸಾಯ

  ಅನ್ನ ಹೆಸರುಪದ

   ಸಂತರ್ಪಣೆ ಬಹುಜನಕ್ಕೆ ನೀಡುವ ಅನ್ನದಾನ; (ಸಂ) ೧ ಆಹಾರ ೨ ಬೇಯಿಸಿದ ಅಕ್ಕಿ ೩ ವಿಷ್ಣು; (<ಸಂ. ಅನ್ಯ) ಬೇರೆಯವನು

  ಅನ್ನಋಣ ಹೆಸರುಪದ

   ಹಂಗು

ಈ ತಿಂಗಳ ನಿಘಂಟು ಬಳಕೆ : 20065