|
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಇಂಗ್ಲಿಷ್-ಕನ್ನಡ ನಿಘಂಟು fly-over ನಾಮಪದ
flying squad ನಾಮಪದ ಹಾರುಪಡೆ, ವೇಗದಳ, ವೇಗವಾಗಿ ಧಾವಿಸುವ ಪೋಲೀಸು ಪಡೆ
flying squadron - ಸಂಚಾರ ದಳ, ವೇಗದಿಂದ ಬೆಂಬತ್ತುವ ಪೊಲೀಸ್ ತಂಡ
flying visit ನಾಮಪದ ಅವಸರದ ಭೇಟಿ, ಕ್ಷಣಮಾತ್ರದ ಭೇಟಿ
foam ನಾಮಪದ 1) ನೊರೆ, ಬುರುಗು 2) ಸ್ಪಂಜಿನಂತೆ ತೂತು ತೂತಾಗಿರುವ, ಹಗುರವಾದ ರಬ್ಬರ್‌ನಂಥ ವಸ್ತು
foam ಕ್ರಿಯಾಪದ 1) ನೊರೆ ಸೂಸು, ನೊರೆಯಾಡು, ಬುರುಗಾಗು, ಬುದ್ಬುದಿಸು 2) ಸಿಟ್ಟಾಗು ರೇಗಿಬೀಳು
focal ಗುಣವಾಚಕ 1) ನಾಭಿಯ, ನಾಭಿಕೇಂದ್ರಿತ 2) ನಾಭಿಯಲ್ಲಿ ಸೇರುವ
focal point ನಾಮಪದ ಕೇಂದ್ರಬಿಂದು, ಆಕರ್ಷಣೆಯ ಕೇಂದ್ರ
focus ನಾಮಪದ 1) ನಾಭಿ, ಬಿಂದು, ಕಿರಣಗಳು ವಿಕಿರಣಗೊಳ್ಳುವಂತೆ ಕಾಣುವ ಬಿಂದು (ಬೆಳಕಿನ ಕಿರಣ, ಶಬ್ದದ ಅಲೆ) ಸಂಧಿಸುವ ಬಿಂದು 2) ಮುಖ್ಯಸ್ಥಾನ, ಕೇಂದ್ರಬಿಂದು
focus ಕ್ರಿಯಾಪದ 1) ಬಿಂದುವಿನತ್ತ ಹೋಗುವಂತೆ ಮಾಡು, ಕೇಂದ್ರೀಕರಿಸು 2) ದೃಷ್ಟಿಯನ್ನು, ಗಮನವನ್ನು-ಒಂದೇ ಕಡೆ ಹರಿಸು
fodder ನಾಮಪದ ದನಕರುಗಳ ಮೇವು, ಒಣಹುಲ್ಲು, ಬೂಸಾ ಇತ್ಯಾದಿ
foe ನಾಮಪದ ಶತ್ರು, ವೈರಿ, ದ್ವೇಷಿ, ಹಗೆ, ಎದುರಾಳಿ, ವಿರೋಧಿ, ಅರಿ
foetus ನಾಮಪದ
fog ನಾಮಪದ 1) ದಟ್ಟವಾದ ಮಂಜು, ಕಾವಳ 2) ಮಂಜಿನಿಂದುಂಟಾದ ಮಸುಕು, ಕಾವಳದ ಮಬ್ಬು
fog bound ಗುಣವಾಚಕ ದಟ್ಟವಾದ ಮಂಜಿನಿಂದ ಸಂಚರಿಸ ಲಾಗದ
foggy ಗುಣವಾಚಕ 1) ದಟ್ಟವಾದ ಮಂಜು ಕವಿದ, ಮೋಡ ಕವಿದ, ಕತ್ತಲೆಗವಿದ 2) ಅಸ್ಪಷ್ಟ, ಮಸುಕಾದ, ಮಂಕಾದ
foible ನಾಮಪದ ಕುಂದುಕೊರತೆ, ಊನ, ದೌರ್ಬಲ್ಯ, ನ್ಯೂನತೆ, ಐಬು
foil ಕ್ರಿಯಾಪದ ವ್ಯರ್ಥಗೊಳಿಸು, ವಿಫಲಗೊಳಿಸು, ಉದ್ದೇಶ ಭಂಗಮಾಡು
foil ನಾಮಪದ 1) ಲೋಹದ ತೆಳುಹಾಳೆ, ವರ್ತಿರೇಕು 2) ಕಾಂತಿವರ್ಧಕ, ವೈದೃಶ್ಯದಿಂದ ಪ್ರಭೆ ಹೆಚ್ಚಿಸುವ ವಸ್ತು, ವ್ಯಕ್ತಿ
foist ಕ್ರಿಯಾಪದ 1) ಅಪವಾದವನ್ನು ತಲೆಗೆ ಕಟ್ಟು, ತಗಲು ಹಾಕು 2) ಆರೋಪಿಸು, ಆರೋಪ ಹೊರಿಸು
|