ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಸೊನ್ನಲಿಗೆ ಹೆಸರುಪದ

   (ದೇ) ೧ ದುಂಡಾಗಿರುವುದು, ವೃತ್ತಾ ಕಾರವಾಗಿರುವುದು ೨ ದುಂಡಾಗಿರುವ ಬಟ್ಟಲು, ಕಲಶ ಮುಂ.ವು ೩ ದೇವಾಲಯದ ಗೋಪುರದಲ್ಲಿರುವ ಲೋಹದ ಗುಂಡನೆಯ ಶಿಖರ, ಕಲಶ

  ಸೊಪ್ಪಡಗು ಎಸಕಪದ

   (ದೇ) ನಿಶ್ಶಕ್ತಿಯುಂಟಾಗು, ಶಕ್ತಿ ಗುಂದು

  ಸೊಪ್ಪಡಸು ಎಸಕಪದ

   (ದೇ) ನಿಶ್ಶಕ್ತಗೊಳ್ಳು, ಸತ್ವಹೀನವಾಗು

  ಸೊಪ್ಪಾಗು ಎಸಕಪದ

   (ದೇ) ೧ ಶಕ್ತಿಗುಂದು, ಸೊರಗು ೨ ಕೆದರು, ಅಸ್ತವ್ಯಸ್ತವಾಗು ೩ ಮುದುರು, ಸುಕ್ಕಾಗು ೪ ಬಾಡು, ಕಂದು ೫ ನುಗ್ಗಾಗು, ಶಿಥಿಲಗೊಳ್ಳು ೬ ಮಂಕಾಗು, ಹೊಳಪಿಲ್ಲದಿರು

  ಸೊಪ್ಪಿಸು ಎಸಕಪದ

   (ದೇ) ೧ ಪುಡಿ ಮಾಡು, ಚೂರ್ಣಿಸು ೨ ನಾಶಮಾಡು, ಹುಡಿಯೆಬ್ಬಿಸು ೩ ಶಕ್ತಿಗುಂದಿಸು, ಮೆತ್ತಗಾಗುವಂತೆ ಮಾಡು

  ಸೊಪ್ಪು ಹೆಸರುಪದ

   (ದೇ) ೧ ಎಲೆ, ಪರ್ಣ ೨ ತರಕಾರಿಯಾಗಿ ಬಳಸುವ ದಂಟು, ಚಕ್ಕೋತ, ಮೊ. ಸಸ್ಯತೊಪ್ಪಲು ೩ ನಿಶ್ಶಕ್ತಿ, ಆಲಸ್ಯ, ಕುಗ್ಗಿದ ಸ್ಥಿತಿ ೪ (ಚಿಂತೆ, ಮುಪ್ಪು ಮುಂ.ವುಗಳಿಂದ) ಮುಖದ ಮೇಲೆ ಮೂಡುವ ಗೆರೆ, ಸುಕ್ಕು ೫ ಸಪ್ಪುಳ, ಶಬ್ದ

  ಸೊಪ್ಪು ಎಸಕಪದ

   (ದೇ) ೧ ತಡೆ, ನಿವಾರಿಸು ೨ ಸದೆಬಡಿ, ನಾಶಗೊಳಿಸು

  ಸೊಪ್ಪುಹಾಕು ಎಸಕಪದ

   = (ಆಲಂ) ಬೆಲೆಕೊಡು, ಲಕ್ಷಿಸು, ಗಮನಿಸು

  ಸೊಪ್ಪೆ ಹೆಸರುಪದ

   (ದೇ) ಜೋಳ ಮುಂ.ವುಗಳ ತೆನೆಯನ್ನು ಕತ್ತರಿಸಿದ ಮೇಲೆ ಉಳಿಯುವ ಗಿಡದ ಭಾಗ, ದಂಟು

  ಸೊಬಗ ಹೆಸರುಪದ

   (<ಸಂ. ಸುಭಗ) ಚೆಲುವ, ಸುಂದರ

  ಸೊಬಗು ಹೆಸರುಪದ

   (<ಸಂ. ಸುಭಗ) ೧ ಅಂದ, ಚೆಲುವು ೨ ಅತಿಶಯ, ಹೆಚ್ಚುಗಾರಿಕೆ

  ಸೊರ(ರು) ಹೆಸರುಪದ

   (ದೇ) (ಕರೆಯುವ ಹಸು, ಎಮ್ಮೆ ಮುಂ.ವು) ಕೆಚ್ಚಲಿನಿಂದ ಹಾಲನ್ನು ಇಳಿಯಬಿಡುವಿಕೆ, ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳುವಿಕೆ

  ಸೊರ(ರು)ಬಿಡು ಎಸಕಪದ

   (ದೇ) (ಕರೆಯುವ ಎಮ್ಮೆ, ಹಸು ಮುಂ.ವು) ಕೆಚ್ಚಲು ತುಂಬಿ ಹಾಲನ್ನು ಸುರಿಸು, ತೊರೆಬಿಡು

  ಸೊರಗು ಎಸಕಪದ

   (ದೇ) ೧ ಬಾಡು, ಬತ್ತು ೨ ಕೃಶವಾಗು, ಕ್ಷೀಣಗೊಳ್ಳು ೩ ಕಂಗಾಲಾಗು, ಬಸವಳಿ ೪ ಹೆಚ್ಚಾಗು, ತೀವ್ರವಾಗು, ಉಲ್ಬಣಿಸು

  ಸೊರಟು ಹೆಸರುಪದ

   (ದೇ) ಡೊಂಕಾಗಿರುವುದು, ಸೊಟ್ಟಾಗಿರುವುದು

  ಸೊರಹು ಹೆಸರುಪದ

   (ದೇ) ೧ ಅತಿಯಾಗಿ ಮಾತನಾಡುವಿಕೆ, ಗಳಹುವಿಕೆ ೨ (ಕರೆಯುವ ಹಸು, ಎಮ್ಮೆ ಮೊ.ವುಗಳ) ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳುವಿಕೆ, ಹಾಲಿಳಿಯುವಿಕೆ

  ಸೊರಹು ಎಸಕಪದ

   (ದೇ) ೧ ಸೊರಗು, ಬತ್ತು ೨ ಅತಿಯಾಗಿ ಮಾತನಾಡು, ಗಳಹು

  ಸೊರೆ ಎಸಕಪದ

   (ದೇ) ೧ ಕೆಚ್ಚಲಿನಲ್ಲಿ ಹಾಲು ತುಂಬಿಕೊಳ್ಳು, ಸೊರಬಿಡು ೨ ಹೆಚ್ಚು, ಅಧಿಕವಾಗು

  ಸೊರ್ಕು ಹೆಸರುಪದ

   (ದೇ) ೧ ಅಮಲು, ಮತ್ತು ೨ ಹೆಮ್ಮೆ, ಗರ್ವ ೩ ಮೈಮರೆವು, ವಿಸ್ಮೃತಿ ೪ ಮತ್ತು ಬರಿಸುವ ಔಷಧ, ಸೊಕ್ಕು, ಮದ್ದು ೫ ಮದೋದಕ, ಮದಜಲ ೬ ಹಿಗ್ಗು, ಸಂತೋಷ ೭ ಗತ್ತು, ಠೀವಿ ೮ ಹೆಚ್ಚಳ, ಅತಿಶಯ ೯ ಶಕ್ತಿ, ಕಸುವು

  ಸೊರ್ಕು ಎಸಕಪದ

   (ದೇ) ೧ ಅಮಲೇರು, ಮತ್ತುಬರು ೨ ಬೀಗು, ಗರ್ವಿಸು ೩ ಮೈಮರೆ, ವಿಸ್ಮೃತಿಗೊಳ್ಳು ೪ ಜಡವಾಗು, ಆಲಸ್ಯಹೊಂದು ೫ ಸಂತೋಷಗೊಳ್ಳು, ಉಬ್ಬು

ಈ ತಿಂಗಳ ನಿಘಂಟು ಬಳಕೆ : 36419