|
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಮೂಲೆ ನಾಮಪದ (ದೇ) ೧ ಎರಡು ದಿಕ್ಕುಗಳ ನಡುವಿನ ದಿಕ್ಕು, ವಿದಿಕ್ಕು ೨ ಅಂಚು, ಕೊನೆ ೩ ಬಾಗು ೪ ಕಟ್ಟಡಗಳ ರಚನೆಯಲ್ಲಿ ಎರಡು ಗೋಡೆಗಳು ಸೇರುವ ಜಾಗ ೫ ಅಪ್ರಸಿದ್ಧವಾದ ಜಾಗ, ಯಾರೂ ಹೋಗದ ದೂರದ ಸ್ಥಳ
ಮೂಲೆಗುಂಪು ನಾಮಪದ
ಮೂಲೆಮಟ್ಟ ನಾಮಪದ ಕಟ್ಟಡ ನಿರ್ಮಾಣದಲ್ಲಿ ಸಮ ಕೋನಗಳನ್ನು ನಿರ್ಮಿಸಲು ಯಾ ಪರೀಕ್ಷಿಸಿಸಲು ಬಳಸುವ ಸಲಕರಣೆ
ಮೂಲ್ಯ ನಾಮಪದ (ಸಂ) ೧ ಬೆಲೆ, ಧಾರಣೆ ೨ ಆದರ್ಶ, ತತ್ವ ೩ ಅಸಲು, ಬಂಡವಾಳ ೪ ಉಪಯುಕ್ತವಾದುದು, ಬೆಲೆಯುಳ್ಳದು
ಮೂಳ ನಾಮಪದ (ದೇ) ೧ ಕಿವಿಯು ಹರಿದುಹೋದವನು, ಕಿವಿಹರುಕ ೨ ತಿಳಿಗೇಡಿ, ಮೂಢ
ಮೂಳೆ ನಾಮಪದ (ದೇ) ೧ (ದೇಹದಲ್ಲಿರುವ) ಎಲುಬು, ಅಸ್ಥಿ
ಮೂಳೆ ನಾಮಪದ (<ದೇ. ಮೂಳ + ಎ) ತಿಳಿಗೇಡಿ ಹೆಂಗಸು, ದಡ್ಡೆ
ಮೂಷಕ ನಾಮಪದ
ಮೂಷಿಕ ನಾಮಪದ
ಮೂಷೆ ನಾಮಪದ (<ಸಂ. ಮೂಷಾ) ೧ ಹೆಣ್ಣು ಇಲಿ ೨ (ಚಿನ್ನ, ಬೆಳ್ಳಿ ಮುಂ.) ಲೋಹಗಳನ್ನು ಕರಗಿಸುವ ಪಾತ್ರೆ, ಮೂಸೆ
ಮೂಸಂಡಿ ನಾಮಪದ (ದೇ) ಸಂಕೋಚ ಸ್ವಭಾವದ ವ್ಯಕ್ತಿ, ಅಂಜುಕುಳಿ, ಮುಖಹೇಡಿ
ಮೂಸಂಡಿ ಗುಣವಾಚಕ (ದೇ) ಹೇಡಿಯಾದ, ಅಂಜುಕುಳಿಯಾದ
ಮೂಸು ಕ್ರಿಯಾಪದ (ದೇ) ವಾಸನೆಯನ್ನು ನೋಡು, ಆಘ್ರಾಣಿಸು
ಮೂಸು ನಾಮಪದ (ದೇ) ಒಂದು ಜಾತಿಯ ಕೋತಿ, ಮುಸು
ಮೂಸೆ ನಾಮಪದ (<ಸಂ. ಮೂಷಾ) (ಚಿನ್ನ, ಬೆಳ್ಳಿ ಮುಂ.) ಲೋಹಗಳನ್ನು ಕರಗಿಸಲು ಬಳಸುವ ಸಾಧನ, ಕೋವೆ
ಮೃಗ ನಾಮಪದ (ಸಂ) ೧ ಚತುಷ್ಪಾದಿ ಪ್ರಾಣಿ, ಪಶು ೨ (ಕಾಡಿನಲ್ಲಿರುವ) ದುಷ್ಟ ಜಂತು, ಹಿಂಸ್ರ ಪ್ರಾಣಿ ೩ ಒಂದು ಬಗೆಯ ಜಿಂಕೆ, ಕಸ್ತೂರಿ ಮೃಗ ೪ ಒಂದು ಬಗೆಯ ಆನೆ ೫ ಇಪ್ಪತ್ತೇಳು ನಕ್ಷತ್ರಗಳಲ್ಲಿ ಒಂದು, ಮೃಗಶಿರಾ ನಕ್ಷತ್ರ
ಮೃಗಜಲ ನಾಮಪದ
ಮೃಗತೃಷ್ಣೆ ನಾಮಪದ
ಮೃಗನಾಭಿ ನಾಮಪದ ೧ ಒಂದು ಬಗೆಯ ಸುಗಂಧ ದ್ರವ್ಯ, ಕಸ್ತೂರಿ ೨ ಕಸ್ತೂರಿಯೆಂಬ ಸುಗಂಧ ದ್ರವ್ಯವನ್ನು ತನ್ನ ಹೊಕ್ಕುಳಲ್ಲಿ ಉತ್ಪತ್ತಿ ಮಾಡುವ ಒಂದು ಬಗೆಯ ಪ್ರಾಣಿ, ಕಸ್ತೂರಿ ಮೃಗ
ಮೃಗರಿಪು ನಾಮಪದ
|