|
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ಲಪ್ಪಟ್ಟೆ ನಾಮಪದ (<ಹಿಂ. ಮರಾ. ಲಪೇಟಾ) ತಲೆಗೆ ಯಾ ಸೊಂಟಕ್ಕೆ ಸುತ್ತಿಕೊಳ್ಳುವ ಬಟ್ಟೆ, ಲಪೇಟ
ಲಫಂಗ ನಾಮಪದ (<ಹಿಂ. ಮರಾ ಲಫಂಗಾ) ಪುಂಡ, ದುರಾಚಾರಿ, ಪೋಕರಿ
ಲಬ್ಧ ನಾಮಪದ (ಸಂ) ೧ ಪಡೆದುದು, ಪ್ರಾಪ್ತಿ ೨ ಗಣಿತದಲ್ಲಿ ಲೆಕ್ಕಾಚಾರದ ಪ್ರಕ್ರಿಯೆಗಳ ಮೂಲಕ ಬರುವ ಉತ್ತರ
ಲಭಿಸು ಕ್ರಿಯಾಪದ (<ಸಂ. ಲಾಭ + ಇಸು) ಪ್ರಾಪ್ತವಾಗು, ದೊರಕು
ಲಭ್ಯ ನಾಮಪದ (ಸಂ) ೧ ದೊರೆತುದು, ಪ್ರಾಪ್ತಿ ೨ ಅದೃಷ್ಟ
ಲಭ್ಯ ಗುಣವಾಚಕ (ಸಂ) ೧ ಹೊಂದಬಹುದಾದ, ಪಡೆಯಬಹುದಾದ ೨ ಉಚಿತವಾದ, ಯೋಗ್ಯವಾದ ೩ ತಿಳಿಯಲಾಗುವ
ಲಯ ನಾಮಪದ (ಸಂ) ೧ ಹಾಳು ೨ ಪ್ರಳಯ ೩ ತನ್ಮ ಯತೆ, ಲೀನವಾಗುವಿಕೆ ೪ ನಿದ್ರಿಸುವಿಕೆ ೫ ಗತಿ, ಗಮನ ೬ ಸಂಗೀತದಲ್ಲಿ ತಾಳ, ತಾಳಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣ ೭ (ಛಂದಸ್ಸಿನಲ್ಲಿ) ಛಂದೋಬದ್ಧವಾದ ಗಣಗಳ ನಡುವೆ ಬರುವ ಸಮಾನವಾದ ಕಾಲಪ್ರಮಾಣದ ನಡೆ
ಲಲನೆ ನಾಮಪದ (<ಸಂ. ಲಲನಾ) ೧ ಹೆಂಗಸು, ಸ್ತ್ರೀ ೨ ಹೆಂಡತಿ, ಪತ್ನಿ
ಲಲಾಟ ನಾಮಪದ
ಲಲಾಟನೇತ್ರ ನಾಮಪದ ೧ ಹಣೆಯಲ್ಲಿರುವ ಕಣ್ಣು ೨ ಹಣೆಯಲ್ಲಿ ಕಣ್ಣುಳ್ಳವನು, ಶಿವ
ಲಲಾಟಪಟ್ಟಿ ನಾಮಪದ ೧ ಹಣೆ, ನೊಸಲು ೨ ತಲೆಬರಹ, ಶೀರ್ಷಿಕೆ ೩ ಹಣೆಗೆ ಅಲಂಕಾರಕ್ಕಾಗಿ ಕಟ್ಟುವ - ಪಟ್ಟಿ, ಆಭರಣ
ಲಲಾಟರೇಖೆ ನಾಮಪದ ೧ ಆಯುಷ್ಯವನ್ನು ಸೂಚಿಸು ವುದೆಂದು ನಂಬಲಾದ ಹಣೆಯ ಮೇಲಿನ ಗೆರೆ ೨ ಹಣೆ ಬರಹ, ಅದೃಷ್ಟ
ಲಲಾಟಲಿಖಿತ ನಾಮಪದ
ಲಲಾಟಿಕೆ ನಾಮಪದ (<ಸಂ. ಲಲಾಟಿಕಾ) ೧ ಮುಂದಲೆಯಲ್ಲಿ ಧರಿಸುವ ಒಂದು ಬಗೆಯ ಆಭರಣ, ಬೈತಲೆ ಮಣೆ ೨ ಹಣೆಯ ಮೇಲೆ ಧರಿಸುವ ತಿಲಕ, ಬೊಟ್ಟು
ಲಲಾಮ ನಾಮಪದ (ಸಂ) ೧ ಮುಂದಲೆಯ ಆಭರಣ, ಬೈತಲೆಮಣೆ ೨ ತಿಲಕ, ಬೊಟ್ಟು ೩ ತಿಲಕ ಪ್ರಾಯವಾದುದು, ಶ್ರೇಷ್ಠವಾದುದು ೪ ಒಡೆಯ, ಸ್ವಾಮಿ ೫ ಬಾವುಟ, ಧ್ವಜ ೬ ತುದಿ, ಅಗ್ರ
ಲಲಿತ ನಾಮಪದ (ಸಂ) ೧ ಸ್ತ್ರೀಯ ಶೃಂಗಾರ ಭಾವಗಳಲ್ಲಿ ಒಂದು ೨ ಚೆಲುವು, ಸೌಂದರ್ಯ ೩ ಮನೋಹರವಾದುದು, ಆಕರ್ಷಕವಾದುದು ೪ ಮೂವತ್ತು ಬಗೆಯ ನೃತ್ಯ ಹಸ್ತಗಳಲ್ಲಿ ಒಂದು ೫ ರಗಳೆ ಛಂದಸ್ಸಿನಲ್ಲಿ ಒಂದು ಬಗೆ ೬ ಒಂದು ರಾಗದ ಹೆಸರು
ಲಲಿತ ಗುಣವಾಚಕ (ಸಂ) ೧ ಚೆಲುವಾದ, ಸುಂದರವಾದ ೨ ಕೋಮಲವಾದ ೩ ವಿನೋದದ, ಲೀಲೆಯ
ಲಲಿತಕಲೆ ನಾಮಪದ = ಮನಸ್ಸಿಗೆ ಆನಂದವನ್ನುಂಟು ಮಾಡುವ ಕಾವ್ಯ, ಸಂಗೀತ, ಚಿತ್ರ ಶಿಲ್ಪ ಮುಂ. ಕಲೆಗಳು
ಲಲಿತೆ ನಾಮಪದ (<ಸಂ. ಲಲಿತಾ) ೧ ಹೆಂಗಸು, ಸ್ತ್ರೀ ೨ ವಿಲಾಸಿನಿ, ಸುಂದರಿ ೩ ಒಂದು ಅನುಪ್ರಾಸದ ಹೆಸರು ೪ ಒಂದು ಅಲಂಕಾರದ ಹೆಸರು ೫ ಒಂದು ರಾಗದ ಹೆಸರು
ಲಲ್ಲೆ ನಾಮಪದ (ದೇ) ೧ ಮುದ್ದು, ಪ್ರೀತಿ ೨ ವಿನೋದ, ಸರಸ
|