ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಡಿ. ಎನ್. ಶಂಕರ ಭಟ್ ಇಂಗ್ಲಿಷ್-ಕನ್ನಡ ನಿಘಂಟು

  dentifrice ಹೆಸರುಪದ

   ಹಲ್ಲುಪುಡಿ

  dentist ಹೆಸರುಪದ

   ಹಲ್ಲುಮಾಂಜುಗ

  dentistry ಹೆಸರುಪದ

   ಹಲ್ಲರಿಮೆ

  denture ಹೆಸರುಪದ

   ಇಟ್ಟಹಲ್ಲು, ಕಟ್ಟುಹಲ್ಲು

  denude ಎಸಕಪದ

   ಬತ್ತಲೆಯಾಗು, ಬಟ್ಟೆಬಿಚ್ಚು, ಸುಗಿ, ಸುಲಿ

  denunciation ಹೆಸರುಪದ

   ತಪ್ಪು ಹೊರಿಸುವಿಕೆ, ತೆಗಳಿಕೆ

  deny ಎಸಕಪದ

   ಅಲ್ಲಗಳೆ (ನೀನು ನನ್ನ ಮಾತನ್ನು ಅಲ್ಲಗಳೆಯಬಾರದು), ಸವೆಗಳೆ

  deodorize ಎಸಕಪದ

   ನಾತಕಳೆ, ಕಂಪುಕಳೆ

  depart ಎಸಕಪದ

   ೧ ತೊಲೆ (ತೊಲಗು - ನೀವಿಲ್ಲಿ ನಿಲ್ಲದೆ ತೊಲಗಿ ಎಂದರು), ತೆರಳು (ಅವನಲ್ಲಿಂದ ಆಗಲೇ ತೆರಳಿದ್ದ), ಹೊರಟು ಹೋಗು, ಕಾಲುಕೀಳು (ಅವನು ಹೆದರಿ ಅಲ್ಲಿಂದ ಕಾಲುಕಿತ್ತ) ೨ ಸರಿ (ಪಕ್ಕಕ್ಕೆ ಸರಿ)

  departed ಪರಿಚೆಪದ

   ೧ ಹೊರಟುಹೋದ ೨ ತೀರಿಹೋದ

  department ಹೆಸರುಪದ

   ಕವಲು

  department store ಹೆಸರುಪದ

   ಕವಲಂಗಡಿ

  departure ಹೆಸರುಪದ

   ಹೋಗುಹ (ಈ ಗಾಡಿಯ ಹೋಗುಹ ಎಶ್ಟು ಹೊತ್ತಿಗೆ?), ತೆರಳಿಕೆ, ಬಿಡುವುದು, ಹೊರಡುಹ

  depend ಎಸಕಪದ

   ನಂಬಿರು (ನಾವೆಲ್ಲರೂ ನಿಮ್ಮನ್ನೇ ನಂಬಿದ್ದೇವೆ), ನೆಚ್ಚು (ಆತನನ್ನು ನೆಚ್ಚಿ ಇಲ್ಲಿಗೆ ಬಂದು ತಪ್ಪು ಮಾಡಿದೆವು)

  dependable ಪರಿಚೆಪದ

   ನಂಬಿಗಸ್ತ, ನಂಬಬಲ್ಲ, ನಂಬತಕ್ಕ (ಆತ ನಂಬತಕ್ಕ ಆಳಲ್ಲ), ತೇಳಿದ

  dependent ಹೆಸರುಪದ

   ಹೊರಕುಳಿ (ನಿಮಗೆ ಹೊರಕುಳಿಗಳೆಶ್ಟು ಮಂದಿ?)

  deplete ಎಸಕಪದ

   ಬರಿದುಮಾಡು, ಬರಿದಾಗು

  deplore ಎಸಕಪದ

   ಹಲುಬು, ಗೋಳಾಡು

  deploy ಎಸಕಪದ

   ಚದರಿನಿಲ್ಲು, ಹರಡಿನಿಲ್ಲು (ಪಡೆಯನ್ನು ಚದರಿನಿಲ್ಲಿಸಿದ)

  deport ಎಸಕಪದ

   ೧ ಹೊರಹಾಕು (ಆತನನ್ನು ನಾಡಿನಿಂದ ಹೊರಹಾಕಲಾಗಿದೆ), ಹೊರಗಟ್ಟು ೨ ನಡೆದುಕೊಳ್ಳು

ಈ ತಿಂಗಳ ನಿಘಂಟು ಬಳಕೆ : 36415