ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಪುಂಗಿ ಹೆಸರುಪದ

   (ದೇ) ೧ (ಸಾಮಾನ್ಯವಾಗಿ ಹಾವಾಡಿಗರು ಊದುವ) ಸೋರೆ ಬುರುಡೆಯಿಂದ ಮಾಡಿದ ಒಂದು ಬಗೆಯ ವಾದ್ಯ ೨ ಪ್ರಭಾವ ಬೀರಿ ಮೋಹಗೊಳಿಸುವ ಯುಕ್ತಿ ೩ ಸೊನ್ನೆ, ಶೂನ್ಯ

  ಪುಂಚ ಹೆಸರುಪದ

   (<ದೇ. ತುಳು) ಹುತ್ತ

  ಪುಂಜ ಹೆಸರುಪದ

   (ದೇ) ೧ ಗಂಡು ಕೋಳಿ ೨ ಒಣಭೂಮಿ, ಖುಷ್ಕಿ ಭೂಮಿ ೩ ಮಗ್ಗದ ಹಾಸಿನಲ್ಲಿರುವ ರೇಷ್ಮೆಯ ಯಾ ನೂಲಿನ ಲಡಿ; (ಸಂ) ಗುಂಪು, ರಾಶಿ

  ಪುಂಜಿ ಹೆಸರುಪದ

   (ಸಂ) ಉಂಡೆ, ಮುದ್ದೆ

  ಪುಂಡರೀ(ಲೀ)ಕ ಹೆಸರುಪದ

   (ಸಂ) ೧ ಬಿಳಿಯ ತಾವರೆ ೨ ಬಿಳಿಯ ಕೊಡೆ, ಶ್ವೇತಚ್ಛತ್ರ ೩ ಹುಲಿ ೪ ಹಣೆಗೆ ಇಡುವ ಲಾಂಛನ, ಪುಂಡ್ರ ೫ ಕಪ್ಪೆ ೬ ಕಲ್ಪವೃಕ್ಷ ೭ ಆಗ್ನೇಯ ದಿಕ್ಕಿನ ದಿಗ್ಗಜ

  ಪುಂಡ್ರ ಹೆಸರುಪದ

   (ಸಂ) ೧ ಬಿಳಿಯ ಪಟ್ಟೆಗಳುಳ್ಳ ಒಂದು ಬಗೆಯ ಕೆಂಪು ಬಣ್ಣದ ಕಬ್ಬು ೨ ಹಣೆಗೆ ಇಟ್ಟುಕೊಳ್ಳುವ ಗಂಧ, ವಿಭೂತಿ, ತಿಲಕ ಮೊ. ಲಾಂಛನ ೩ (ಕಪ್ಪು, ಕಂದು ಮೊ. ಬಣ್ಣದ) ಕುದುರೆಯ ಮೇಲಿರುವ ಬಿಳಿಯ ಪಟ್ಟೆ ೪ ಒಂದು ದೇಶದ ಹೆಸರು ೫ ತಾವರೆ

  ಪುಂಶಿಲೆ ಹೆಸರುಪದ

   (<ಸಂ. ಪುಂಶಿಲಾ) ವಿಗ್ರಹ ನಿರ್ಮಾಣ ಕ್ಕಾಗಿ ಆಯ್ದುಕೊಳ್ಳುವ ಕಲ್ಲುಗಳಲ್ಲಿ ಒಂದು ಪ್ರಕಾರ, ಗಟ್ಟಿಕಲ್ಲು, ಗಂಡುಕಲ್ಲು

  ಪುಂಶ್ಚಲಿ(ಳಿ) ಹೆಸರುಪದ

   (ಸಂ) ಹಾದರಗಿತ್ತಿ, ಜಾರೆ

  ಪುಗಿಲು ಹೆಸರುಪದ

   (ದೇ) ೧ ಬಾಗಿಲು, ಪ್ರವೇಶದ್ವಾರ ೨ ಆಶ್ರಯ, ನೆಲೆ ೩ ಕಾಂತಿ, ಶೋಭೆ

  ಪುಗು ಎಸಕಪದ

   (ದೇ) ೧ ಒಳಸೇರು, ಪ್ರವೇಶಿಸು ೨ ಮುಟ್ಟು, ಸ್ಪರ್ಶಿಸು

  ಪುಗುಳು ಹೆಸರುಪದ

   (ದೇ) ಬೊಕ್ಕೆ, ಗುಳ್ಳೆ, ಹುಗುಳು

  ಪುಗ್ಗಾಯಿಲ ಹೆಸರುಪದ

   (ದೇ) ಗರ್ವಿಷ್ಠ, ಅಹಂಕಾರಿ

  ಪುಗ್ಗು ಹೆಸರುಪದ

   (ದೇ) ಸೊಕ್ಕು, ಗರ್ವ

  ಪುಗ್ಗು ಎಸಕಪದ

   (ದೇ) ಸುಟ್ಟು ಹೋಗು

  ಪುಗ್ಗೆ ಹೆಸರುಪದ

   (<ಮರಾ. ಪುಗಾ) ಕಡಲೆಹಿಟ್ಟಿನಿಂದ ಉಬ್ಬುವಂತೆ ಎಣ್ಣೆಯಲ್ಲಿ ಕರಿದು ಮಾಡಿದ ತಿಂಡಿ, ಬುರುಬುರಿ

  ಪುಚ್ಚವಣ ಹೆಸರುಪದ

   (<ಸಂ. ಪುಚ್ಛನ) ೧ ಪರೀಕ್ಷೆ ೨ ಪೌರುಷ, ಶಕ್ತಿ

  ಪುಚ್ಚಿ ಹೆಸರುಪದ

   (ದೇ) ೧ ಯೋನಿ ೨ ಗೋಲಿಯಾಟದಲ್ಲಿ ಗೋಲಿಯನ್ನು ತಳ್ಳುವ ಕುಳಿ

  ಪುಚ್ಛ ಹೆಸರುಪದ

   (ಸಂ) ೧ ಬಾಲ ೨ ಪಕ್ಷಿಗಳ ಪುಕ್ಕ ೩ ಹಿಂಭಾಗ ೪ ತುದಿ, ಕೊನೆ ೫ ಅನುಬಂಧ

  ಪುಚ್ಛಕ ಹೆಸರುಪದ

   (ಸಂ) ಅಷ್ಟಾವಧಾನದಲ್ಲಿ ಪ್ರಶ್ನೆ ಕೇಳುವವನು

  ಪುಟ ಹೆಸರುಪದ

   (ದೇ) ಪುಟಿಗೆ, ನೆಗೆತ; (<ಸಂ. ಪೃಷ್ಠ) ೧ ಬರೆಯುವ ಯಾ ಅಚ್ಚಿನ ಹಾಳೆಯ ಒಂದು ಮಗ್ಗುಲು, ಪಕ್ಕ ೨ ಮಡಿಕೆ, ಪದರ ೩ ದೊನ್ನೆ ೪ ಎಲೆಯಿಂದ ಮಾಡಿದ ಪೊಟ್ಟಣ ೫ ಆಳವಿಲ್ಲದ ಬಟ್ಟಲಂತಹ ಪಾತ್ರೆ ೬ ಕೈಗಳಂತೆ ಜೋಡಿಸಿ ಮಾಡಿದ ರಚನೆ ೭ ಮುಚ್ಚಳ ೮ ಕೌಪೀನ ೯ ಕಣ್ಣೆವೆ ೧೦ ಸಸ್ಯಗಳ ಹೊಡೆ ೧೧ ಭರಣಿ, ಸಂಪುಟ ೧೨ ಕುದುರೆಯ ಗೊರಸು ೧೩ ಜಾಜಿಕಾಯಿ ೧೪ ಮೂಗಿನ ಹೊರಳೆ ೧೫ ಮೂಸೆ ೧೬ ಔಷಧಗಳ ಸಿದ್ಧತೆಯಲ್ಲಿ ಒಂದು ಸಲ ಕುದಿಸುವುದು ೧೭ ಚಿನ್ನವನ್ನು ಬೆಂಕಿಯಲ್ಲಿಟ್ಟು ಶುದ್ಧಗೊಳಿಸಿ ಹೊಳಪು ಕೊಡುವಿಕೆ ಮತ್ತು ಅದರಿಂದುಂಟಾಗುವ ಹೊಳಪು

ಈ ತಿಂಗಳ ನಿಘಂಟು ಬಳಕೆ : 46210