|
ಪ್ರೊ. ಜಿ. ವೆಂಕಟಸುಬ್ಬಯ್ಯ ಅವರ ಪ್ರಿಸಂ ಕನ್ನಡ-ಕನ್ನಡ (ಕ್ಲಿಷ್ಟಪದ) ನಿಘಂಟು ತಂತ್ರಜ್ಞಾನ ನಾಮಪದ (ಸಂ) ಪ್ರಯೋಗ ಪರಿಜ್ಞಾನ, ಶಾಸ್ತ್ರೀಯ ಜ್ಞಾನ
ತಂತ್ರಿ ನಾಮಪದ (ಸಂ) ೧ ತಂತ್ರಶಾಸ್ತ್ರವನ್ನು ಬಲ್ಲವನು ೨ ಉಪಾಯಗಾರ ೩ ಎಳೆ, ನೂಲು ೪ ತಂತಿ, ಲೋಹದ ಕಂಬಿ
ತಂದರಿ ನಾಮಪದ (<ಸಂ. ತಂದ್ರಿ) ೧ ತೂಕಡಿಕೆ, ಜೊಂಪು ೨ ದಣಿವು, ಬಳಲಿಕೆ
ತಂದಲ್(ಲು) ನಾಮಪದ (ದೇ) ೧ ತುಂತುರ ಹನಿ, ಶೀಕರ ೨ ಜೋನೆ, ಸೋನೆ
ತಂದ್ರಿ ನಾಮಪದ (ಸಂ) ೧ ಆಲಸ್ಯ, ಜಡತೆ ೨ ಮಂಪರು, ಜೊಂಪು ೩ ಗುಂಗು, ತಲ್ಲೀನತೆ
ತಂಪು ನಾಮಪದ (ದೇ) ೧ ತಣಿವು, ಶೈತ್ಯ ೨ ತೃಪ್ತಿ, ಸಂತುಷ್ಟಿ ೩ ನೆರಳಿನ ತಂಪಾದ ಪ್ರದೇಶ ೪ ಹಿಮ, ಮಂಜು
ತಂಬಟಿಗ ನಾಮಪದ (<ಸಂ. ತಾಮ್ರ (ತಾಂಬ್ರ + ಅಟಿಗ)) ತಾಮ್ರದ ಕೆಲಸ ಮಾಡುವವನು
ತಂಬಲ ನಾಮಪದ
ತಂಬಿ(ಬು)ಗೆ ನಾಮಪದ (ದೇ) ಹಿತ್ತಾಳೆ ಯಾ ತಾಮ್ರದ ಸಣ್ಣ ಪಾತ್ರೆ, ಚಂಬು, ಚರಿಗೆ ತಂಬಿಟ್ಟು (<ದೇ. ತಂಪು + ಪಿಟ್ಟು > ಸಂ. ಪಿಷ್ಠ)
ತಂಬಿ(ಬು)ಗೆ ನಾಮಪದ (ದೇ) ಹುರಿಗಡಲೆ, ಅಕ್ಕಿ ಮೊ.ವುಗಳ ಹಿಟ್ಟಿನಿಂದ ಮಾಡುವ ಒಂದು ಬಗೆಯ ಸಿಹಿ ತಿಂಡಿ
ತಂಬು(ಬೂ) ನಾಮಪದ
ತಂಬುಲ ನಾಮಪದ (<ಸಂ. ತಾಂಬೂಲ) ೧ ಅಡಿಕೆ, ಕ್ರಮುಕ ೨ ವೀಳೆಯ, ಅಡಿಕೆ ಮತ್ತು ಎಲೆ ೩ ಅಗಿದು ಉಗುಳುವ ಕವಳ - ತಾಂಬೂಲ ೪ ತಂಬುಲಿಗರು ಕೊಡಬೇಕಾದ ತೆರಿಗೆ - ಸುಂಕ
ತಂಬುಳಿ ನಾಮಪದ (<ದೇ. ತಂಪು) ಬೆಂದ ತರಕಾರಿಗೆ ಮಜ್ಜಿಗೆ ಸೇರಿಸಿ ಕುದಿಸದೆ ಮಾಡುವ ಒಂದು ಬಗೆಯ ಮೇಲೋಗರ
ತಕತ್ತು ನಾಮಪದ
ತಕರಾರು ನಾಮಪದ (ಅರಾ) ೧ ಆಕ್ಷೇಪಣೆ, ದೂರ ೨ ಅಡ್ಡಿ, ವಿರೋಧ
ತಕರಾರು ನಾಮಪದ ಅರ್ಜಿ ೧ ಕೆಳಗಿನ ಕೋರ್ಟಿನ ತೀರ್ಪನ್ನು ಪ್ರತಿಭಟಿಸಿ ಸಲ್ಲಿಸಿದ—ಅರ್ಜಿ, ಮೇಲರ್ಜಿ ೨ (ನ್ಯಾಯಾಲಯಕ್ಕೆ) ಒಬ್ಬನು ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಸಲ್ಲಿಸಿದ ಅರ್ಜಿ
ತಕಲಿ ನಾಮಪದ (<ಹಿಂ. ತಕಲೀ) ನೂಲನ್ನು ತೆಗೆಯುವ ಒಂದು ಉಪಕರಣ
ತಕಲೀಪು ನಾಮಪದ (<ಅರ. ತಕಲೀಫ್) ತೊಂದರೆ, ಕಷ್ಟ
ತಕಾವಿ ನಾಮಪದ (<ಅರ. ತಕಾವೀ) ಸರ್ಕಾರವು ರೈತರಿಗೆ ಕೊಡುವ ಸಾಲದ ಹಣ, ಮುಂಗಡ ಹಣ
ತಕ್ಕ(ಕ್ಕಿ)ಲು ನಾಮಪದ (ದೇ) ವ್ಯವಸಾಯಕ್ಕೆ ಯೋಗ್ಯವಾದ ಭೂಮಿ
|