ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಮೆಂಟಿಕೆ ಹೆಸರುಪದ

   (ದೇ) (ಹೆಂಗಸರು) ಕಾಲು ಬೆರ ಳಿಗೆ ಹಾಕಿಕೊಳ್ಳುವ ಒಂದು ಬಗೆಯ ಆಭರಣ; ಕಾಲುಂಗುರ

  ಮೆಂಡು ಹೆಸರುಪದ

   (ದೇ) ಆಧಿಕ್ಯ, ಹೆಚ್ಚಳ

  ಮೆಕ್ಕಲು ಹೆಸರುಪದ

   (ದೇ) ಬೆಟ್ಟದ ಮೇಲಿನಿಂದ ಹರಿಯುವ ನದಿಗಳ ಮೇಲಿನಿಂದ ದೂಡಿಕೊಂಡು ಹೊತ್ತು ತರುವ ಮೇಲು ಮಣ್ಣು, ರೇವೆ ಮಣ್ಣು

  ಮೆಕ್ಕೆ ಹೆಸರುಪದ

   (ದೇ) ೧ ಬೆಳೆ ಹುಲುಸಾಗಿ ಬೆಳೆಯದ ಎತ್ತರವಾದ ಜಮೀನು ೨ ಒಂದು ಬಗೆಯ ಜೋಳ ೩ ಒಂದು ಬಗೆಯ ಬಳ್ಳಿ ಮತ್ತು ಅದರ ಕಾಯಿ

  ಮೆಚ್ಚಿಕೆ(ಗೆ) ಹೆಸರುಪದ

   (ದೇ) ೧ ಇಷ್ಟ, ಪ್ರೀತಿ ೨ ಒಪ್ಪಿಗೆ, ತೃಪ್ತಿ ೩ ಹೊಗಳಿಕೆ, ಕೊಂಡಾಟ

  ಮೆಚ್ಚಿಸು ಎಸಕಪದ

   (ದೇ) ೧ ಒಡಂಬಡಿಸು, ಒಪ್ಪಿಸು ೨ ಸಂತೋಷಗೊಳಿಸು, ಹರ್ಷಗೊಳಿಸು

  ಮೆಚ್ಚು ಹೆಸರುಪದ

   (ದೇ) ೧ ಒಲುಮೆ, ಪ್ರೀತಿ, ಇಷ್ಟ ೨ ಇಷ್ಟವಾದುದು, ಪ್ರಿಯವಾದುದು ೩ ಇಷ್ಟಪಟ್ಟು ಕೊಡುವ ಕಾಣಿಕೆ, ಬಹುಮಾನ ೪ ಒಪ್ಪಿಗೆ, ಸಮ್ಮತಿ ೫ ಹೊಗಳಿಕೆ, ಪ್ರಶಂಸೆ

  ಮೆಚ್ಚು ಎಸಕಪದ

   (ದೇ) ೧ ಒಲಿ, ಪ್ರೀತಿಸು ೨ ಇಷ್ಟವಾಗು, ಸೇರು ೩ (ದೇವರು, ಋಷಿ ಮುಂ.ವರು) ಅನುಗ್ರಹಿಸು, ಪ್ರಸನ್ನವಾಗು ೪ ಒಪ್ಪು, ಸಮ್ಮತಿಸು ೫ ಕೊಂಡಾಡು, ಹೊಗಳು

  ಮೆಚ್ಚುಗೆ ಹೆಸರುಪದ

   (<ದೇ. ಮೆಚ್ಚು + ಗೆ) ೧ ಪ್ರೀತಿ, ವಿಶ್ವಾಸ, ಅಭಿಮಾನ ೨ ತೃಪ್ತಿ, ಸಂತೋಷ ೩ ಹೊಗಳಿಕೆ, ಕೊಂಡಾಟ, ಪ್ರಶಂಸೆ

  ಮೆಟ್ಟ(ಟ್ಟಿ)ಲು ಹೆಸರುಪದ

   (ದೇ) ೧ ಪಾವಟಿಗೆ, ಸೋಪಾನ ೨ ಹಂತ, ಮಜಲು

  ಮೆಟ್ಟಕ್ಕಿ ಹೆಸರುಪದ

   (ದೇ) ಮದುವೆಯಲ್ಲಿ ವಧೂವರರು ಮೆಟ್ಟಿ ನಿಲ್ಲಲು ಬಿದಿರಿನ ತಟ್ಟೆಯಲ್ಲಿರಿಸಿದ ಅಕ್ಕಿ

  ಮೆಟ್ಟು ಹೆಸರುಪದ

   (ದೇ) ೧ ತುಳಿತ ೨ ಚಪ್ಪಲಿ, ಪಾದರಕ್ಷೆ ೩ ಒಂದು ಹೆಜ್ಜೆಯಷ್ಟರ ಅಳತೆ, ಒಂದು ಪಾದದ ಪ್ರಮಾಣ ೪ ನರ್ತನದಲ್ಲಿ ಇಡುವ ಹೆಜ್ಜೆ, ಸ್ಥಳ ೫ ಜಾಡು, ದಾರಿ, ಹಾದಿ ೬ ಕಾಲುಂಗುರ ೭ ತಂತೀ ವಾದ್ಯಗಳಲ್ಲಿ ಸ್ವರಸ್ಥಾನವನ್ನು ಗುರುತಿಸಲು ಅಳವಡಿಸಿರುವ ಮನೆ

  ಮೆಟ್ಟು ಎಸಕಪದ

   (ದೇ) ೧ ಹೆಜ್ಜೆ ಇಡು, ನಡೆ ೨ ಕಾಲಿನಿಂದ ತುಳಿ, ಪಾದದಿಂದ ಒತ್ತು ೩ ಪಾದರಕ್ಷೆಯನ್ನು ಧರಿಸಿಕೊಳ್ಳು ೪ ಕುಂದಣಿಸು, ಕೆಚ್ಚು ೫ (ಸಸಿ) ನಾಟು ೬ (ಪ್ರಾಣಿ, ಪಕ್ಷಿ ಮೊ.ವು) ನೆರೆ, ಸಂಭೋಗಿಸು ೭ (ಪಿಶಾಚಿ, ದೆವ್ವ ಮುಂ.ವು) ಅಮಕು, ಹಿಡಿ ೮ ಬರೆದಿರು, ಲಿಖಿತವಾಗು ೯ (ನರ್ತನದಲ್ಲಿ) ಹೆಜ್ಜೆ ಹಾಕು ೧೦ ಸೋಲಿಸು, ಮರುಳಾಗಿಸು ೧೧ ಧ್ವಂಸಗೊಳಿಸು, ನಾಶಮಾಡು

  ಮೆಟ್ರೆ ಹೆಸರುಪದ

   (ದೇ) ಕುತ್ತಿಗೆಯ ಮುಂಭಾಗ, ಗಂಟಲು

  ಮೆಡ ಹೆಸರುಪದ

   (ದೇ) ಕತ್ತು, ಕುತ್ತಿಗೆ

  ಮೆಡಶಿರ ಹೆಸರುಪದ

   ತಲೆಯ ಕೆಳಭಾಗ, ಹೆಕ್ಕತ್ತು

  ಮೆಡ್ಡಗಣ್ಣು ಹೆಸರುಪದ

   (ದೇ) ೧ ಮಾಲುಗಣ್ಣು, ಓರೆಯಾಗಿರುವ ಕಣ್ಣು ೨ ದಪ್ಪದಾದ ಗುಡ್ಡೆಗಣ್ಣು

  ಮೆತು ಹೆಸರುಪದ

   (ದೇ) ಮೃದು, ಕೋಮಲ

  ಮೆತ್ತು ಎಸಕಪದ

   (ದೇ) ೧ ಬಳಿ, ಲೇಪಿಸು ೨ ತುರುಕು, ಗಿಡಿ ೩ ಅಂಟಿಕೊಳ್ಳು, ಹತ್ತಿಕೊಳ್ಳು ೪ ರಚಿಸು, ನಿರ್ಮಿಸು ೫ (ಆಯುಧ, ಬಾಣ ಮೊ.ವುಗಳಿಂದ) ಚುಚ್ಚು, ನಾಟು ೬ ಕವಿ, ಆವರಿಸು

  ಮೆತ್ತೆ ಹೆಸರುಪದ

   (ದೇ) ೧ ಮೃದುವಾದ ಹಾಸು, ಸುಪ್ಪತ್ತಿಗೆ ೨ ಮೃದುವಾದ ದಿಂಬು

ಈ ತಿಂಗಳ ನಿಘಂಟು ಬಳಕೆ : 41141