ತಿರುವಿಹಾಕು | ಸಹಾಯ(help)

ಇಂಗ್ಲಿಷ್ ಕೀಲಿಮಣೆ ಕನ್ನಡ ಕೀಲಿಮಣೆ ಎಲ್ಲೆಡೆ ಹುಡುಕು
ಉದಾ:   ಅಭಿಜ್ಞಾನ   ಅಭಿ%   %ಜ್ಞಾನ   house%card%
ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ

ಪ್ರೊ. ಜಿ. ವೆಂಕಟಸುಬ್ಬಯ್ಯ ಕನ್ನಡ-ಕನ್ನಡ ನಿಘಂಟು

  ಮೊನೆ ಹೆಸರುಪದ

   (ದೇ) ೧ ತುದಿ, ಕೊನೆ ೨ ಹರಿತವಾದುದು, ಚೂಪಾದುದು ೩ ತೀಕ್ಷ್ಣತೆ, ಚುರುಕು ೪ ಶೌರ್ಯ, ಕಲಿತನ ೫ ಮುಂಭಾಗ, ಅಗ್ರಭಾಗ ೬ ದಳ, ಸೈನ್ಯ ೭ ಯುದ್ಧ ೮ ಅಡ್ಡಿ, ವಿರೋಧ

  ಮೊನೆ ಪರಿಚೆಪದ

   (ದೇ) ಹರಿತವಾದ, ತೀಕ್ಷ್ಣವಾದ

  ಮೊನೆಗಾತಿ ಹೆಸರುಪದ

   ಜಗಳವಾಡುವ ಸ್ವಭಾವದವಳು, ಜಗಳಗಂಟಿ

  ಮೊನೆಗಾರ ಪರಿಚೆಪದ

   ೧ ಯುದ್ಧ ಮಾಡುವವನು, ಯೋಧ ೨ ಮೈಸೂರು ಅರಸರಿಗಿದ್ದ ಒಂದು ಬಿರುದು

  ಮೊನೆನಗೆ ಹೆಸರುಪದ

   ಮುಗುಳುನಗೆ, ಮಂದಹಾಸ ಮೊಬಲಗು (<ಅರ. ಮುಬ್ಲಘ್ >ಹಿಂ. ಮುಬಲಿಗ್); ಹಲವು ಅಂಶಗಳನ್ನು ಕೂಡಿದಾಗ ಬರುವ ಒಟ್ಟು ಹಣ, ರಕಮು

  ಮೊರ ಹೆಸರುಪದ

   (ದೇ) ಕಾಳು, ರಾಗಿ ಮುಂ.ವನ್ನು ಹಸನು ಮಾಡಲು ಬಳಸುವ ಸಾಧನ; ಶೂರ್ಪ

  ಮೊರಟು ಹೆಸರುಪದ

   (ದೇ) ಮುರುಟಿದುದು, ಸುರುಟಿದುದು

  ಮೊರಡಿ ಹೆಸರುಪದ

   (ದೇ) ೧ ದಿಣ್ಣೆ, ಗುಡ್ಡ, ಕಲ್ಲಿನ ರಾಶಿ

  ಮೊರಬ್ಬ ಹೆಸರುಪದ

   (<ಅರ. ಮುರಬ್ಬಾ) ಮಾವು, ನೆಲ್ಲಿ ಮುಂ. ಕಾಯಿಗಳನ್ನು ಪಾಕದಲ್ಲಿ ಹಾಕಿ ತಯಾರಿಸುವ ಒಂದು ಬಗೆಯ ಖಾದ್ಯ; ಗುಳಂಬ

  ಮೊರೆ ಹೆಸರುಪದ

   (ದೇ) ೧ ದುಂಬಿಯ ಧ್ವನಿ, ಝೇಂಕಾರ ೨ ಗೋಳಾಟ, ಹುಯ್ಯಲು ೩ ದೂರು, ಅಹವಾಲು ೪ ನಂಟಸ್ತಿಕೆ, ಸಂಬಂಧ ೫ ನಂಟ, ಬಂಧು ೬ ಆಸರೆ, ಆಶ್ರಯ

  ಮೊರೆ ಎಸಕಪದ

   (ದೇ) ೧ (ತುಂಬಿಯಂತೆ) ಧ್ವನಿ ಮಾಡು, ಝೇಂಕರಿಸು ೨ ಸಣ್ಣದನಿಯಲ್ಲಿ ಶಬ್ದ ಮಾಡು, ಕಿರುಗುಟ್ಟು ೩ ವಾದ್ಯದಂತೆ ಶಬ್ದ ಮಾಡು, ಧ್ವನಿಸು ೪ ಗರ್ಜಿಸು, ಅಬ್ಬರಿಸು ೫ ಚೀರು, ಆರ್ತನಾದ ಮಾಡು

  ಮೊರೆಹೊಗು ಎಸಕಪದ

   = ಆಶ್ರಯಿಸು, ಶರಣಾಗು

  ಮೊಲೆಯೂಡು ಎಸಕಪದ

   (ದೇ) ಮಗುವಿಗೆ ಎದೆಹಾಲು ಕುಡಿಸು, ಸ್ತನ್ಯಪಾನ ಮಾಡಿಸು

  ಮೊಳ ಹೆಸರುಪದ

   (ದೇ) ಮೊಳಕೈಯಿಂದ ಹಸ್ತದ ತುದಿಯವರೆಗಿನ ಅಳತೆ, ಎರಡು ಗೇಣು

  ಮೊಳಕೆ ಹೆಸರುಪದ

   (ದೇ) ೧ ಅಂಕುರ, ಕುಡಿ ೨ ಪ್ರಾರಂಭ

  ಮೊಳಗು ಹೆಸರುಪದ

   (ದೇ) ೧ (ವಾದ್ಯದ) ಧ್ವನಿ, ಸದ್ದು ೨ (ಮೋಡಗಳ) ಗುಡುಗುಡು ಎಂಬ ಶಬ್ದ, ಆರ್ಭಟ ೩ ಒಂದು ಬಗೆಯ ಮರ

  ಮೊಳಗು ಎಸಕಪದ

   (ದೇ) ೧ (ವಾದ್ಯಗಳು) ಧ್ವನಿಮಾಡು, ಶಬ್ದ ಮಾಡು ೨ ಮೆರೆ, ವಿಜೃಂಭಿಸು

  ಮೊಳೆ ಹೆಸರುಪದ

   (ದೇ) ೧ ಕುಡಿ, ಮೊಳಕೆ ೨ ಮೂಲವ್ಯಾಧಿಯಲ್ಲಿ, ಗುದ ಪ್ರದೇಶದಲ್ಲಿ ಮೊಳಕೆಯಾಕಾರದಲ್ಲಿ ಕಾಣಿಸಿಕೊಳ್ಳುವ ದುರ್ಮಾಂಸ ೩ ಮೊಡವೆ ಮುಂ. ಗುಳ್ಳೆಗಳ ತುದಿ ೪ ಚೂಪಾದ ತುದಿಯುಳ್ಳ ಲೋಹದ ಉಪಕರಣ, ಆಣಿ ೫ ನಾಣ್ಯ ಮುಂ. ಲೋಹವಸ್ತುಗಳ ಮೇಲೆ ಅಕ್ಷರಗಳನ್ನು ಕೊರೆಯುವ ಚೂಪಾದ ಸಾಧನ, ಕಂಠ ೬ ಮುದ್ರಣ ಕಾರ್ಯದಲ್ಲಿ ಬಳಸುವ ಅಕ್ಷರಗಳ ಗುರುತಿರುವ ಲೋಹದ ಸಾಧನ, ಅಚ್ಚಿನ ಮೊಳೆ ೭ ಅಭಿವ್ಯಕ್ತಿ, ತೋರಿಕೆ

  ಮೊಳೆ ಎಸಕಪದ

   (ದೇ) ೧ಚಿಗುರು, ಅಂಕುರಿಸು ೨ ಮೂಡು, ಉದಯಿಸು

  ಮೊಳೆನುಡಿ ಎಸಕಪದ

   ಚಮತ್ಕಾರದ ಮಾತು, ಹದಿರು

ಈ ತಿಂಗಳ ನಿಘಂಟು ಬಳಕೆ : 36423