ಕನ್ನಡಲೋಕ

ಕನ್ನಡ ಇಂಗ್ಲಿಷ್

೧೦ ಮುಂದೆ›


ಕಾಶ್ಮೀರಿ ಉಪ್ಚಾ..!
ಪ್ರತಿಸ್ಪಂದನ – https://pratispandana.wordpress.com - ಬುಧವಾರ ೦೮:೪೦, ಮಾರ್ಚ್ ೨೨, ೨೦೧೭

Kashmiri Noon Chai is salted pink tea. A write up about special tea. ಓದನ್ನು ಮುಂದುವರೆಸಿ ... ಮುಂದೆ ಓದಿ


ಪೀರಾಯರ ಒಂದು ಕಥಾನಕ – ನೀಳ್ಗತೆ ಭಾಗ ೪
ನಿಲುಮೆ - ಬುಧವಾರ ೦೩:೨೭, ಮಾರ್ಚ್ ೨೨, ೨೦೧೭

– ಮು. ಅ. ಶ್ರೀರಂಗ, ಬೆಂಗಳೂರು ಪೀರಾಯರು ಎದ್ದಾಗ ಎಂಟು ಗಂಟೆಯಾಗಿತ್ತು. ರಾತ್ರಿ ಕೃಷ್ಣಾಚಾರ್ಯ ಮಲಗಿದ್ದ ಹಾಸಿಗೆ ನೀಟಾಗಿ ಸುತ್ತಿ ಇಟ್ಟಿತ್ತು. ರಾಯರು ಮುಖ ತೊಳೆದು ಬಂದು ಅಂದಿನ ಪೇಪರ್ ಹಿಡಿದು ಕೂತರು. ಕಾಫಿ ತಂದ ರಾಯರ ಹೆಂಡತಿ ‘ಕೃಷ್ಣಾಚಾರ್ಯರು ಏಳು ಗಂಟೆಗೆ ಎದ್ದು ಮನೆಗೆ ಹೋದ್ರು.. ತಿಂಡಿ ತಿಂದು ಹೋಗಿ ಎಂದು ನಾನು ಬಲವಂತ ಮಾಡಿದರೂ ಇನ್ನೊಂದು ಸಲ ಬರ್ತೀನಿ’ ಅಂದ್ರು.. ‘ನನ್ನನ್ನು ನೀನು ಎಬ್ಬಿಸಬಾರದಿತ್ತೇ?’ ‘ಅವರೇ ಬೇಡ, ನಿದ್ದೆ ಮಾಡಲಿ. ನಿನ್ನೆ ರಾತ್ರಿ ನಾವು ಹಳೆ ಸಂಗತಿಗಳನ್ನೆಲ್ಲಾ […]... ಮುಂದೆ ಓದಿ


ಬೆಳಗಿನ ತಿಂಡಿಗೆ ಮಾಡಿನೋಡಿ ಮಂಡಕ್ಕಿ ಚಿತ್ರಾನ್ನ
ಹೊನಲು - ಮಂಗಳವಾರ ೧೧:೩೦, ಮಾರ್ಚ್ ೨೧, ೨೦೧೭

– ಪ್ರತಿಬಾ ಶ್ರೀನಿವಾಸ್. ಬೇಕಾಗುವ ಸಾಮಾಗ್ರಿಗಳು: ಮಂಡಕ್ಕಿ – 2 ದೊಡ್ಡ ಲೋಟ (2 ಪಾವಿನಶ್ಟು) ಈರುಳ್ಳಿ – 2 ಟೊಮೊಟೊ – 1 (ದೊಡ್ಡ ಗಾತ್ರದ್ದು) ಹಸಿಮೆಣಸು – 4-5 ಜೀರಿಗೆ – 1/4 ಚಮಚ ಶೇಂಗಾಬೀಜ – 3 ಚಮಚ ಸಾಸಿವೆ – 1/4 ಚಮಚ ಲಿಂಬೆಹಣ್ಣು – 1/2 ಕರಿಬೇವು – 8-10... Read More ›... ಮುಂದೆ ಓದಿ


ಮನಸೇ ಕೊರಗದಿರು ಹೀಗೆ…
ಹೊನಲು - ಮಂಗಳವಾರ ೦೯:೩೦, ಮಾರ್ಚ್ ೨೧, ೨೦೧೭

– ಸುರಬಿ ಲತಾ. ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಗೆಲುವೇ ಎಂದಿಗು ನಿನಗೆ ಸಹಿಸು ನೀನು ಬೇಗೆ ಇವೆಲ್ಲವೂ ಕಡಲ ಅಲೆಯಂತೆ ಕ್ಶಣಿಕದ ನೋವು ನಲಿವಂತೆ ಇರಬೇಕು ನಗು ನಗುತ ಕಹಿಯನ್ನು ಮರೆಯುತ ಮನಸೇ ಕೊರಗದಿರು ಹೀಗೆ ಎದೆಯು ಬಿರಿಯುವ ಹಾಗೆ ಸಾದಿಸು ನೀನು ಚಲದಿಂದ ಗೆಲ್ಲು ನೀನು ಬಲದಿಂದ ಆಗಲೇ ಎಲ್ಲರೂ ನಿನಗೆ... Read More ›... ಮುಂದೆ ಓದಿ


ಪವಿತ್ರ ಶಿಲುಬೆ
ಸಿ ಮರಿಜೋಸೆಫ್ - ಮಂಗಳವಾರ ೧೨:೫೨, ಮಾರ್ಚ್ ೨೧, ೨೦೧೭

... ಮುಂದೆ ಓದಿ


ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿದಾಗಲೇ ಅನುಮಾನ ಹುಟ್ಟೋದು!
ನೆಲದ ಮಾತು - ಮಂಗಳವಾರ ೧೧:೧೭, ಮಾರ್ಚ್ ೨೧, ೨೦೧೭

ಸ್ವತಃ ಎಡಚ ಲೇಖಕ, ಭಾರತದ ಇತಿಹಾಸವನ್ನು ತನಗೆ ಬೇಕಾದಂತೆ ತಿರುಚಿದ ಬಿಪಿನ್ ಚಂದ್ರರೇ ಹೇಳುತ್ತಾರೆ, ‘ಭಗತ್ ಮತ್ತು ಅವನ ಗೆಳೆಯರು ಮಾರ್ಕ್ಸ್ ವಾದದಲ್ಲಿ ಪಂಡಿತರೇನೂ ಆಗಿರಲಿಲ್ಲ. ಹಾಗಂತ ಏನೂ ತಿಳಿದವರಲ್ಲ ಎನ್ನುವಂತೆಯೂ ಇರಲಿಲ್ಲ. ಅವರು ತಾವೇ ಎಲ್ಲೆಡೆ ಅಡ್ಡಾಡಿ ಭಾರತದ ಕ್ರಾಂತಿಯ ಸಮಸ್ಯೆಗಳನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡುತ್ತಿದ್ದರು’ ಅಂತ. ಅರ್ಥವಾಯಿತಲ್ಲ! ಭಗತ್ರಿಗೆ ಭಾರತೀಯ ಕ್ರಾಂತಿಕಾರ್ಯದ ಸಮಸ್ಯೆಗಳನ್ನು ಅರಿಯಲ್ಲು ಕಮ್ಯುನಿಸಂನ ಪಾಂಡಿತ್ಯ ಬೇಕಿರಲಿಲ್ಲ. ಬಿಪಿನ್ ಚಂದ್ರರು ಮುಂದುವರಿಸಿ ಹೇಳುತ್ತಾರೆ, ‘ಅವರ ಸಮಾಜವಾದದ ಅರ್ಥೈಸಿಕೊಳ್ಳುವಿಕೆಯಲ್ಲಿ ಮತ್ತು ಆಚರಣೆಯಲ್ಲಿ ವಿರೋಧಾಭಾಸಗಳಿತ್ತು. ಅವರು … Continue reading ಇದ್ದಕ್ಕಿದ್ದಂತೆ ಪ್ರೀತಿ ಉಕ್ಕಿದಾಗಲೇ ಅನುಮಾನ ಹುಟ್ಟೋದು! ... ಮುಂದೆ ಓದಿ


ನಿವೇದನೆ
:ಮೌನಗಾಳ: - ಮಂಗಳವಾರ ೦೩:೨೮, ಮಾರ್ಚ್ ೨೧, ೨೦೧೭

ಸೀದಾ ಹೆದ್ದಾರಿಯ ಮೇಲೇ ಸಾಗುತ್ತವೆ ರಾತ್ರಿಯ ಬಸ್ಸುಗಳುಆದರೆ ಹಗಲಿನ ಬಸ್ಸುಗಳಿಗೆ ಪ್ರತಿ ನಗರ ಬಂದಾಗಲೂಹೆದ್ದಾರಿಯಿಂದ ಕೆಳಗಿಳಿದು ನಗರದ ಒಳಹೊಕ್ಕುಮುಖ್ಯನಿಲ್ದಾಣಕ್ಕೆ ಭೇಟಿಯಿತ್ತೇ ಬರುವ ದರ್ದುರಾತ್ರಿಯಲ್ಲಿ ಕಣ್ಣು ಕುಕ್ಕುವ ವಾಹನಗಳುಹಗಲಲ್ಲಿ ಮೈಮೇಲೇ ಬರುತ್ತವೆ ಓತಪ್ರೋತದಿಗಿಲು ಹುಟ್ಟಿಸುತ್ತವೆ ಅಪ್ಪಳಿಸುವ ಬಿಸಿಲ ಝಳದಂತೆಹಗಲ ಪಯಣದಲ್ಲಿ ಮೈಮರೆವಿನ ನಿದ್ರೆಯಿಲ್ಲತಾನಿಳಿವ ನಿಲ್ದಾಣ ಬಂತೇ ಬಂತೇ ಬಂತೇಎಂಬ ಆತಂಕದಲ್ಲೇ ಕಿಟಕಿಯಿಂದ ಹೊರಗೆ ನೋಡುತ್ತಚಲಿಸುವ ಬೋರ್ಡುಗಳಲ್ಲಿನ ವಿಳಾಸ ಓದಲು ಯತ್ನಿಸುತ್ತಸಣ್ಣ ಚೀಟಿಯಲ್ಲಿ ಕಾಕಲಿಪಿಯಲ್ಲಿ ಬರೆದ ಪದಗಳಿಗೆಹೊಂದಾಣಿಕೆಯಾಗುವ ಯಾವ ಶಬ್ದ ಕಂಡರೂಹೌಹಾರಿ ಪಕ್ಕ ಕುಳಿತವನ ಬಳಿ ವಿಚಾರಿಸಿವಿಶ್ವಾಸ ಸಾಕಾಗದೆ ಕಂಡಕ್ಟರ್ ಬಳಿಯೂ ಕೇಳಿಆದರೂ ಗಡಿಬಿಡಿಯಲ್ಲಿ ತಪ್ಪು ನಿಲ್ದಾಣದಲ್ಲೇ ಇಳಿದಿದ್ದಾನೆಮಹಾನಗರದ ಹೊಸಾ ಗಲಿಬಿಲಿ ಅತಿಥಿಬ್ಯಾಟರಿ ಮುಗಿದ ಮೊಬೈಲು, ನೆನಪಿಲ್ಲದ ಗೆಳೆಯನ ನಂಬರುಭ್ರಮಿತನಂತೆ ನೋಡುತ್ತಿದ್ದಾನೆ ಅತ್ತ ಇತ್ತ ಸುತ್ತ ಮುತ್ತಚೀಟಿಯ ಮಡಿಕೆಗಳ ಮತ್ತೆಮತ್ತೆ ಬಿಡಿಸುತ್ತಾಗೂಡಂಗಡಿಗಳ ದಾರಿಹೋಕರ ಸೆಕ್ಯುರಿಟಿ ಗಾರ್ಡುಗಳಬಳಿ ಹೋಗಿ ಆತಂಕದ ಕಣ್ಣಲ್ಲಿ ಒಣಗಿದ ದನಿಯಲ್ಲಿಯಾಚಿಸುತ್ತಿದ್ದಾನೆ ಅತಂತ್ರ ವಿಧಾನಸಭೆಯ ಮತಾಕಾಂಕ್ಷಿಆಟೋವಾಲಾಗಳಿಗೋ ಇವನ ನಡಿಗೆಯಲ್ಲೇ ಪತ್ತೆಯಾಗಿದೆಕುರಿಗೆ ಯದ್ವಾತದ್ವಾ ರೇಟು ಹೇಳಿ ಇನ್ನಷ್ಟು ದಿಕ್ಕು ತಪ್ಪಿಸಿಕಟ್ಟಡಗಳ ಮಧ್ಯದ ಸಣ್ಣ ಒಣಿಯಲ್ಲಿಳಿಯುತ್ತಿದ್ದಾನೆ ಸಂಜೆಸೂರ್ಯಎತ್ತಲೋ ಸಾಗುತ್ತಿರುವ ಕವಿತೆಯ ರಕ್ಷಿಸಲು ಬರುವತಿರುವಿನಂತೆ ಎದುರಾಗುತ್ತಿದ್ದಾರೆ ಒಬ್ಬ ವಾಕಿಂಗ್ ಅಂಕಲ್ಕನ್ನಡದಲ್ಲಿ ಉತ್ತರಿಸುತ್ತಿದ್ದಾರೆ ಕಳವಳದ ಕಂದನಿಗೆಸುಲಭಗೊಳಿಸುತ್ತಿದ್ದಾರೆ ತಿಳಿಯಾಗಿ ಬಿಡಿಸಿ ದಾರಿಯ ಚಿತ್ರಕುಲುಕುತ್ತಿದ್ದಾರೆ ಕೈ, ನಗುಮೊಗದಿಂದ ಚೆಲ್ಲಿ ಬೆಳಕುನಡೆದಿದ್ದಾನೆ ಅಭ್ಯಾಗತ ಆ ಬೆಳಕ ಬಲದಲ್ಲಿನಕ್ಷೆಯ ದೆಸೆಯಿಂದ ಸುಲಭವಾದ ತಿರುವುಗಳುಅಕ್ಷಯವೆನಿಸುವ ಟ್ರಾಫಿಕ್ಕಿನ ಪಕ್ಕದ ಕಾಲುದಾರಿಯೀಗಸುರಕ್ಷಿತವೆನಿಸುತ್ತಿರುವಾಗ, ಅವರು ಹೇಳಿದ್ದ ಗುರುತುಗಳುತತ್ತಕ್ಷಣ ಕಣ್ಣಿಗೆ ಬೀಳುತ್ತಿರುವಾಗ, ಅತ್ತ ದಿಕ್ಕಿಂದ ತನ್ನನ್ನೇಹುಡುಕಿಕೊಂಡು ಬರುತ್ತಿರುವ ಗೆಳೆಯನ ಕಂಡುಹೃದಯ ತುಂಬಿಬಂದು ಓಡಿ ಬಿಗಿದಪ್ಪಿಕೊಂಡುಕಥೆಗಳಿಗಷ್ಟೇ ಏಕೆ, ಕವಿತೆಗಳಿಗೂ ಸಿಗಲಿ ಸುಖಾಂತ್ಯಅನಾಥ ಸಾಲುಗಳಿಗೆ ಸಿಗಲಿ ಸೋಗೆಯದಾದರೂ ಸೂರುದೊರೆಯಲಿ ಸಹಾಯಹಸ್ತ ಕಳೆದು ಹೋದ ಶಬ್ದಗಳಿಗೆನಗಲಿ ಕವಿತೆ ನಿಸೂರಿನ ಲಘುವಲ್ಲಿ, ನೆರಳಲ್ಲಿನ ಹೂವಂತೆ.(World Poetry Day ನೆಪದಲ್ಲಿ ಬರೆದದ್ದು)

... ಮುಂದೆ ಓದಿ


'ಐಚ್ಚಿಕ' ಹೆಸರಲ್ಲಿ 'ಕಡ್ಡಾಯ ಹಿಂದಿ' ಹೇರಿಕೆ
ಪಿಸುಮಾತು ® - ಮಂಗಳವಾರ ೦೩:೦೬, ಮಾರ್ಚ್ ೨೧, ೨೦೧೭

ಮೊನ್ನೆ ಮೊನ್ನೆ 'ಹಿಂದಿಯಾ' ಅನ್ನೋ ಹೋಟೆಲಿಗೆ ಹೋಗಿದ್ದೆ. ತಿನ್ನಲು ಏನೇನಿದೆ ? ಅಂತ ಕೇಳಿದ್ದಕ್ಕೆ 'ಚಪಾತಿ, ರೊಟ್ಟಿ, ಇಡ್ಲಿ, ದೋಸೆ, ಚಿತ್ರಾನ್ನ...' ಎಂಬ ಉತ್ತರ ಬಂತು.'ಇಡ್ಲಿ ಕೊಡಿ' ಅಂದೆ,'ಕ್ಷಮಿಸಿ, ಇಡ್ಲಿ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ' ಎಂಬ ಉತ್ತರ.'ದೋಸೆ ಕೊಡಿ''ಕ್ಷಮಿಸಿ, ದೋಸೆ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ' ಎಂಬ ಉತ್ತರ.'ಚಿತ್ರಾನ್ನ ಕೊಡಿ''ಕ್ಷಮಿಸಿ, ಚಿತ್ರಾನ್ನ ಮಾಡೋರು ನಮ್ಮ ಹೋಟೆಲಲ್ಲಿ ಇಲ್ಲ, ಚಪಾತಿ ತಗೊಳ್ಳಿ' ಎಂಬ ಉತ್ತರ.ನನಗೆ ಬೇಕಾದ್ದು ಇಲ್ಲಿ ಸಿಗಲ್ಲ, ಸರಿ ನಾನು ಹೊರಗೆ ಹೋಗ್ತೀನಿ ಎಂದು ಎದ್ದೆ.ನನ್ನನ್ನು ತಡೆದು ಹೇಳಿದರು.. 'ಏನೂ ತಿನ್ನದೆ ಹೋಗುವ ಹಾಗೆಯೇ ಇಲ್ಲ, ಇದು 'ಕಡ್ಡಾಯ ತಿನ್ನಣ''ಆದರೆ ಚಪಾತಿಯನ್ನೇ ತಿನ್ನಬೇಕು ಅಂತ ಕಡ್ಡಾಯ ಮಾಡ್ತಿದೀರಲ್ಲ? ಇದು ಚಪಾತಿ ಹೇರಿಕೆ ಅಲ್ವಾ ?''ಇಲ್ಲ, ಚಪಾತಿ ತಿನ್ನಬೇಕು ಅನ್ನೋದು ಐಚ್ಚಿಕ ವಿಷಯ. ಯಾರಿಗೂ ಹೇರಿಕೆ ಮಾಡುತ್ತಿಲ್ಲ. ಜೊತೆಗೆ ಬೇರೆ ಬೇರೆ ತಿನಿಸುಗಳೂ ಇವೆಯಲ್ಲ, ನಿಮಗೆ ಇಷ್ಟ ಬಂದಿದ್ದನ್ನ ತಿನ್ನಬಹುದು.''ಆದರೆ ಬೇರೆ ತಿನಿಸು ಯಾವುದೂ ತಯಾರಿಲ್ಲವಲ್ಲ ?''ಹೌದು, ಹಾಗಾಗಿ ನೀವು ಚಪಾತಿ ತಿನ್ನಲೇ ಬೇಕು.'ಚಪಾತಿ ಜಾಗದಲ್ಲಿ ಹಿಂದಿ ಹಾಕಿಕೊಳ್ಳಿ, ಆಗ ಅರ್ಥ ಆಗುತ್ತೆ, ಪರಕೀಯ ಹಿಂದಿಯನ್ನರು ನಮ್ಮ ಮೇಲೆ ಹೇಗೆ 'ಐಚ್ಚಿಕ' ಹೆಸರಲ್ಲಿ 'ಕಡ್ಡಾಯ ಹಿಂದಿ' ಹೇರಿದ್ದಾರೆ ಎಂದು.
... ಮುಂದೆ ಓದಿ


ಜಗತ್ತನ್ನು ಬೆಳಗಿದ ಅನಾಮಿಕ ವಿಜ್ಞಾನಿ : ನಿಕೋಲ ಟೆಸ್ಲಾ !
ಪಿಸುಮಾತು ® - ಮಂಗಳವಾರ ೧೨:೪೯, ಮಾರ್ಚ್ ೨೧, ೨೦೧೭

ಅದು ೧೮೮೪, ಕ್ರೊವೇಶಿಯಾದ ೨೮ ವರ್ಷದ ಒಬ್ಬ ಯುವಕ ತನ್ನ ಅಪ್ರತಿಮ ಬುದ್ದಿವಂತಿಕೆಯನ್ನು ಬಸಿದು ಹಣ ಸಂಪಾದಿಸುವ ಯೋಚನೆಯೊಂದಿಗೆ ಅಮೆರಿಕಾಕ್ಕೆ ಪ್ರವೇಶಿಸಿ ಅಲ್ಲಿ ಅದಾಗಲೇ ಪ್ರಸಿದ್ದಿ ಪಡೆದಿದ್ದ ಇನ್ನೊಬ್ಬ ಯುವ ವಿಜ್ಞಾನಿಯ ಎದುರು ತಾನೇ ಬರೆದುಕೊಂಡು ತಂದಿದ್ದ ಚಿಕ್ಕದೊಂದು ಪತ್ರವನ್ನು ಹಿಡಿದು ನಿಲ್ಲುತ್ತಾನೆ. ಎದುರಿಗಿದ್ದ ವಿಜ್ಞಾನಿಯೋ ಅದಾಗಲೇ ಜಗತ್ಪ್ರಸಿದ್ದಿ ಪಡೆದಿದ್ದ ಮತ್ತು ವಿದ್ಯುತ್‌ ಜನರೆಟರ್‌ಗಳನ್ನು ತಯಾರಿಸಿ ಮಾರುವ ಅತಿ ದೊಡ್ಡ ಸಂಸ್ಥೆಯ ಒಡೆಯ ಕೂಡಾ. ಈ ಯುವಕ ನೀಡಿದ ಆ ಪತ್ರದಲ್ಲಿ ಇದ್ದುದು ಎರಡೇ ಸಾಲು...'ಈ ಜಗತ್ತಿನಲ್ಲಿ ಈಗ ಇರುವುದು ಇಬ್ಬರೇ ಜೀನಿಯಸ್‌ಗಳು. ಅದರಲ್ಲಿ ಒಬ್ಬರು ನೀವು, ಮತ್ತೊಬ್ಬ ನಾನು!'ಈತನ ಕ್ರಿಯಾಶೀಲತೆಯನ್ನು ಕಂಡು ಬೆರಗಾದ ಆ ವಿಜ್ಞಾನಿ 'ನಿನ್ನ ಯೋಜನೆಗಳನ್ನು ಇಲ್ಲಿ ಮಾಡು, ನಾವು ತಯಾರಿಸುತ್ತಿರುವ ಜನರೇಟರ್‌ಗಳ ರೀ-ಡಿಸೈನ್‌ ಮಾಡಿ ಕೊಡು, ನಿನಗೆ ೫೦ ಸಾವಿರ ಡಾಲರ್‌ ಬೋನಸ್‌ ಕೊಡುತ್ತೇನೆ' ಎಂದು ಭರವಸೆ ನೀಡಿದ.೫೦ ಸಾವಿರ ಡಾಲರ್‌ ಅನ್ನುವುದು ಆಗ ಊಹೆಗೂ ನಿಲುಕದ ದೊಡ್ಡ ಮೊತ್ತವಾಗಿತ್ತು! ಈಗಲೂ ಕೂಡಾ. ಅತ್ಯಂತ ಕುಶಿಗೊಂಡ ಆ ಬಡ ಯುವಕ ಬೇಗ ಬೇಗನೆ ಅನೇಕ ಜನರೆಟರ್‌ಗಳ ಮಾಡೆಲ್‌ಗಳನ್ನು ಮಾಡಿ ಆ ವಿಜ್ಞಾನಿಗೆ ತೋರಿಸಿದ. ಎಲ್ಲವೂ ಈ ಮೊದಲು ಅವರು ತಯಾರಿಸುತ್ತಿದ್ದ ಜನರೇಟರ್‌ಗಳಿಗಿಂತ ಕಡಿಮೆ ಖರ್ಚಿನಲ್ಲಿ ತಯಾರು ಮಾಡಬಹುದಾದಂತಹ ಮಾಡೆಲ್‌ಗಳು. ಹೀಗೆ ತನಗೆ ಲಾಭದಾಯಕ ಮಾಡೆಲ್‌ಗಳನ್ನು ನೀಡಿ, ತಾನು ಭರವಸೆ ನೀಡಿದ್ದಂತಹ ೫೦ ಸಾವಿರ ಡಾಲರ್‌ ಬೋನಸ್‌ ಪಡೆಯಲು ಆಸೆಯಿಂದ ತನ್ನೆದುರು ಕೈ ಕಟ್ಟಿ ನಿಂತ ಯುವಕನಿಗೆ ಆ ವಿಜ್ಞಾನಿ ಹೇಳಿದ್ದು...'೫೦ ಸಾವಿರ ಡಾಲರ್‌ ಅಂದರೆ ತಮಾಷೆ ಅಂದುಕೊಂಡೆಯಾ ? ಅಷ್ಟೊಂದು ಹಣ ಪಡೆಯುವವಷ್ಟು ಬುದ್ದಿವಂತಿಕೆ ನಿನ್ನದು ಅಂದುಕೊಂಡು ಬಿಟ್ಟೆಯಾ ? ನಾನು ಅಂದು ಹೇಳಿದ್ದು ತಮಾಷೆಗೆ ಅಷ್ಟೇ.  ಅಷ್ಟೆಲ್ಲಾ ದುಡಿಯುವ ಅರ್ಹತೆ ನಿನ್ನ ಬುದ್ದಿವಂತಿಕೆಗೆ ನಿಲುಕಿಲ್ಲ. ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ಬೇಕಾದರೆ ವಾರಕ್ಕೆ ೧೦ ಡಾಲರ್‌ ಕೂಲಿ ಕೊಡುತ್ತೇನೆ.' ಎಂದು.ಹೀಗೆ ಕೆಲಸ ಮಾಡಿಸಿಕೊಂಡು ವಂಚನೆ ಮಾಡಿದ್ದಲ್ಲದೇ ಅವಮಾನವನ್ನೂ ಮಾಡಿದ ಆ ದೊಡ್ಡ ವಿಜ್ಞಾನಿಯ ಹೆಸರೇ ಥಾಮಸ್‌ ಆಲ್ವಾ ಎಡಿಸನ್‌! ಘೋರ ಅವಮಾನಗೊಂಡು ತಕ್ಷಣವೇ ಆ ಸಂಸ್ಥೆಗೆ ರಾಜೀನಾಮೆ ನೀಡಿ ಜಿದ್ದಿನೊಂದಿಗೆ ಹೊರ ನಡೆದ ಈ ಲೇಖನದ ದುರಂತ ನಾಯಕನ ಹೆಸರು.. ''ನಿಕೋಲ ಟೆಸ್ಲಾ!' ಈ ಕಾರಣದಿಂದ ಈ ಇಬ್ಬರ ನಡುವಿನ ಜಿದ್ದು ಕೊನೆಯ ವರೆಗೂ ಮುಂದುವರಿಯಿತು.ನಿಕೋಲ ಟೆಸ್ಲಾ!
ಇಂದು ಬಹುತೇಕರು ಈ ಹೆಸರನ್ನು ಕೇಳಿಯೇ ಇಲ್ಲ. ಹಾಗೆ ಕೇಳಿರಬೇಕಾದಂತಹ ಸಾಧನೆಯನ್ನು ಈ ವ್ಯಕ್ತಿ ಅದೇನು ಮಾಡಿಬಿಟ್ಟಿದ್ದಾರೆ ಹೇಳಿ ಅನ್ನುತ್ತೀರಾ ? ಕೇಳಿ ಇಲ್ಲಿ.. ನಿಮ್ಮ ಮನೆಗೆ ನೀವು ಬಳಸುತ್ತಿರುವ ಎ.ಸಿ. ವಿದ್ಯುತ್‌ (ಅಲ್ಟರ್‌ನೇಟೀವ್‌ ಕರೆಂಟ್‌) ಅದನ್ನು ಕಂಡು ಹಿಡಿದುದು ಇವರೇ.  ಇಂದು ಬಹುತೇಕ ಎಲ್ಲಾ ವಿದ್ಯುತ್‌ ಉತ್ಪಾದನಾ ಘಟಕಗಳಲ್ಲಿ ಬಳಸುತ್ತಿರುವ ಅಯಸ್ಕಾಂತ ಆಧಾರಿತ ಟರ್ಬೈನ್‌ ಕೂಡಾ ಇವರ ಸಂಶೋಧನೆಯೇ. ನಿಮ್ಮ ಮನೆಯಲ್ಲಿ ಟ್ಯೂಬ್‌ ಲೈಟ್‌ ಇದ್ದುದು ಹೌದಾದರೆ ಕಡಿಮೆ ಖರ್ಚಿನಲ್ಲಿ ಹೆಚ್ಚು ಬೆಳಕು ನೀಡುವ ಅನಿಲ ಆಧಾರಿತ ಬಲ್ಬ್‌ ಅನ್ನು ಅಭಿವೃದ್ದಿ ಮಾಡಿದ್ದು ಕೂಡಾ ಇವರೇ. ಅಷ್ಟೇ ಅಲ್ಲ, ಈಗ ಎಲ್ಲಾ ಕಡೆ ಬಳಕೆಯಲ್ಲಿರುವ ವಿದ್ಯುತ್‌ ಮೋಟರ್‌, ರಿಮೋಟ್‌ ಕಂಟ್ರೋಲರ್‌,  ವಾಹನಗಳ ಇಂಜಿನ್‌ನಲ್ಲಿ ಉಪಯೋಗಿಸುವ ಇಗ್ನೀಷಿಯನ್‌, ವಿಮಾನದಲ್ಲಿ ಬಳಸುವ ನಿಸ್ತಂತು ಉಪಕರಣಗಳು, ಎಕ್ಸ್‌-ರೇ ತಂತ್ರಜ್ಞಾನ, ರೇಡಿಯೋ ತರಂಗಗಳು, ಮೈಕ್ರೋ ಓವನ್‌ನಲ್ಲಿ ಉಪಯೋಗಿಸುವ ಮೈಕ್ರೋ ವೇವ್ಸ್‌ ತರಂಗಗಳು, ಹೀಗೆ ನಾವು ದಿನವೂ ನಾವು ಉಪಯೋಗಿಸುತ್ತಿರುವ ನೂರಾರು ಉಪಕರಣಗಳ ಹಿಂದಿನ ವ್ಯಕ್ತಿ ನಿಕೋಲ ಟೆಸ್ಲಾನೇ ಆಗಿದ್ದಾರೆ. ರೇಡಾರ್‌ ಹಾಗೂ ಇಂದು ಹೆಚ್ಚು ಪ್ರಬಲವಾಗುತ್ತಿರುವ 'ಸೂರ್ಯಶಕ್ತಿಯ ಬಳಕೆ' (solar energy) ಕೂಡಾ ಇವನದೇ ಕಲ್ಪನೆ. ಅಷ್ಟೇ ಅಲ್ಲ, ನಮ್ಮ ಅರಿವಿಗೆ ಬಾರದ ಸಾವಿರಾರು ಅವಿಷ್ಕಾರಗಳ ಮೂಲ ಪುರುಷ ಟೆಸ್ಲಾ ಎಂದರೆ ಅತಿಷಯೋಕ್ತಿಯಲ್ಲ. ಏಕೆಂದರೆ ಈಗಲೂ ಈತನ ಹೆಸರಲ್ಲಿ ವಿವಿಧ ದೇಶಗಳಲ್ಲಿ ಮುನ್ನೂರಕ್ಕೂ ಹೆಚ್ಚು ಪೇಟೆಂಟ್‌ಗಳಿವೆ ಎಂದರೆ ನಂಬಲೇ ಬೇಕು. ನಮ್ಮ ದೇಶದಲ್ಲೂ ಈತ ಒಂದು ವಿಷಯದ ಪೇಟೆಂಟ್‌ ಪಡೆದಿದ್ದ. ಇದಲ್ಲದೇ ಈತ ತನ್ನ ಜೀವಿತ ಕಾಲದಲ್ಲಿ ಪಡೆದ ಪೇಟೆಂಟ್‌ಗಳ ಸಂಖ್ಯೆ ಬರೋಬ್ಬರಿ ಏಳು ನೂರಕ್ಕೂ ಹೆಚ್ಚು ಎಂದು ಹೇಳುತ್ತಾರೆ. ಆದರೆ ೧೯೪೩ರಲ್ಲಿ ಈತ ತೀರಿ ಹೋದ ನಂತರ ಬಹಳಷ್ಟನ್ನು ಬೇರೆ ಬೇರೆ ಪಟ್ಟಭದ್ರರು ತಮ್ಮ ಹೆಸರಿಗೆ ಮಾಡಿಕೊಂಡು ಹುಳ್ಳಗೆ ನಕ್ಕಿದ್ದಾರೆ.. ಮಾರ್ಕೋನಿಯಂತೆ !
ಇದೆಲ್ಲಕ್ಕಿಂತ ಹೆಚ್ಚಾಗಿ ಈತನನ್ನು ನಾವು ನೆನೆಸಿಕೊಳ್ಳಬೇಕಾದುದು, ಈತನ ಮಹಾನ್‌ ಕನಸಾಗಿದ್ದ ಇಡೀ ಪ್ರಪಂಚಕ್ಕೂ 'ಉಚಿತ ವಿದ್ಯುತ್‌' ನೀಡಬೇಕೆಂಬ ಬೃಹತ್‌ ಯೋಜನೆ ! ಇವನ ಈ ಯೋಚನೆ ಏನಾದರೂ ಕಾರ್ಯರೂಪಕ್ಕೆ ಬಂದರೆ ತಾವೆಲ್ಲಾ ಮುಳುಗಿಯೇ ಹೋಗುತ್ತೇವೆ ಎಂದು ಎಡಿಸನ್‌ ಮತ್ತು ಇನ್ನೂ ಅನೇಕ ವಿಜ್ಞಾನಿಗಳು ಈತನಿಗೆ ಇನ್ನಿಲ್ಲದ ಕಷ್ಟ ಕೊಟ್ಟರು.  ಆದರೆ ಅವೆಲ್ಲವನ್ನೂ ಎದುರಿಸಿ ನಿಂತ ಟೆಸ್ಲಾ ಕೆಲವೊಂದು ವಿಷಯಗಳಲ್ಲಿ ಸೋಲುತ್ತಾ ಬಂದುದು ವಿಪರ್ಯಾಸವಾಗಿತ್ತು ಕೂಡ.  ಅದಲ್ಲದೇ ಈತನ ಯೋಚನೆಗಳು ಇನ್ನೂ ಹಲವಾರು ಇದ್ದವು. ಮುಖ್ಯವಾಗಿ ಒಂದು ಬಲವಾದ ವಿದ್ಯುತ್‌ ಬೀಮ್‌ ಅನ್ನು ಚಿಮ್ಮಿ ದೂರದಿಂದಲೇ ಯುದ್ದ ವಿಮಾನಗಳನ್ನು ಸುಟ್ಟು ಹಾಕುವುದು, ನಿರ್ದಿಷ್ಟ ಜಾಗದಲ್ಲಿ ಪ್ರಬಲ ನೆಲ ನಡುಕ ಉಂಟು ಮಾಡಿ ಪಟ್ಟಣ ಅಥವಾ ನಗರವನ್ನೇ ಧ್ವಂಸ ಮಾಡುವುದು ಇತ್ಯಾದಿಗಳಿದ್ದವು. ಒಟ್ಟಿನಲ್ಲಿ ಈತನೊಬ್ಬ ಅಮೆರಿಕ ಒಂದೇ ಅಲ್ಲ, ಇಡೀ ಜಗತ್ತಿನ ಜನ ನಾಯಕ ಎನ್ನಬಹುದು. ಏಕೆಂದರೆ ಇಂದು ಪ್ರತಿ ಜಾಗದಲ್ಲೂ ಈತನ ಅವಿಷ್ಕಾರಗಳನ್ನು ಅಥವಾ ಅದರ ಮುಂದುವರಿದ ಭಾಗವನ್ನೇ ನಾವೆಲ್ಲಾ ಉಪಯೋಗಿಸುತ್ತಾ ಇದ್ದೇವೆ. ಆದರೆ ಅದೇನು ಕಾರಣಕ್ಕೋ ಜನರು ಈತನನ್ನು ಸರಿ ಸುಮಾರಾಗಿ ಮರೆತೇ ಬಿಟ್ಟರು. ಮದುವೆಯನ್ನೂ ಆಗದೇ, ತನ್ನ ಸುಖ ಸಂತೋಷಗಳನ್ನೆಲ್ಲಾ ತ್ಯಜಿಸಿ ಜಗತ್ತಿಗೆ ಇಷ್ಟೆಲ್ಲಾ ವಸ್ತು ವಿಶೇಷಗಳನ್ನು ನೀಡಿದ ಮಹಾನುಭಾವನೊಬ್ಬ ನೋಬೆಲ್‌ ಪ್ರಶಸ್ತಿಯಿಂದಲೂ ವಂಚಿತನಾಗಿ, ತನ್ನ ಕೊನೆಯ ಕಾಲದಲ್ಲಿ ಹೋಟೆಲೊಂದರ ಚಿಕ್ಕ ಕೋಣೆಯಲ್ಲಿ ಅನಾಥವಾಗಿ ಸತ್ತು ಹೋದರು ಅಂದರೆ ನಂಬುವುದು ಕಷ್ಟ. ಆದರೂ ಇದು ನಿಜ.ಅವ್ಯವಸ್ಥೆಯ ಬದುಕು
ನಿಕೋಲ ಟೆಸ್ಲಾನ ಬದುಕೇ ಒಂದು ರೀತಿಯ ಅವ್ಯವಸ್ಥೆಯಿಂದ ಕೂಡಿತ್ತು. ಇದಕ್ಕೆ ಕಾರಣ ಈತನ ಬಡತನ. ಕ್ರೊವೇಶಿಯಾದಲ್ಲಿ ಜುಲೈ ೧೦, ೧೮೫೬ರಂದು ಹುಟ್ಟಿದ ಟೆಸ್ಲಾನಿಗೆ ಬಾಲ್ಯದಿಂದಲೂ ವಿದ್ಯುತ್‌ ಮೇಲೆ ಅಪಾರ ಸೆಳೆತ. ಕಾರಣ ಬಾಲ್ಯದಲ್ಲಿಯೇ ಆತ ನೋಡುತ್ತಿದ್ದ ದೊಡ್ಡ ದೊಡ್ಡ ಚಂಡಮಾರುತಗಳ ಜೊತೆ ಬರುತ್ತಿದ್ದ ಮಿಂಚು, ಗುಡುಗು, ಸಿಡಿಲುಗಳು. ಮಿಂಚಿನಲ್ಲಿ ವಿದ್ಯುತ್‌ ಇದೆ ಎಂದು ಬೆಂಜಮಿನ್‌ ಫ್ರಾಂಕ್ಲಿನ್‌ ಹೇಳಿದ್ದನ್ನು ಗ್ರಹಿಸಿದ್ದ ಟೆಸ್ಲಾ ಆ ಮಹಾನ್‌ ವಿದ್ಯುತ್‌ ಶಕ್ತಿಯನ್ನು ಹೇಗಾದರೂ ಮಾನವ ಬಳಕೆಗೆ ಒಗ್ಗಿಸಲೇ ಬೇಕು ಎಂದು ಪಣ ತೊಟ್ಟಿದ್ದ. ಆದರೆ ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರಲು ಅವನ ಬಳಿ ಯಾವುದೇ ಸಲಕರಣೆಗಳು ಇರಲಿಲ್ಲ. ನಾವಿಂದು ಉಪಯೋಗಿಸುತ್ತಿರುವ ವಿದ್ಯುತ್‌ ಮೋಟರ್‌ಗಳ ಒಳ ರಚನೆ ಟೆಸ್ಲಾಗೆ ಹೊಳೆದಾಗ ಆತ ಎಲ್ಲೋ ನಡೆದುಕೊಂಡು ಹೋಗುತ್ತಿದ್ದರು. ಕೂಡಲೇ ಚಿಕ್ಕ ಕೋಲೊಂದರಿಂದ ಮಳೆಯಲ್ಲಿ ನೆನೆದಿದ್ದ ನೆಲದ ಮೇಲೆಯೇ ತನಗೆ ಬಂದ ಯೋಚನೆಯ ಮೋಟರ್‌ನ ರಚನೆಯನ್ನು ಚಿತ್ರ ಬಿಡಿಸಿ ನೋಡಿಕೊಂಡು ಅದು ಸಾಧ್ಯ ಎಂದು ಅರಿವಿಗೆ ಬಂದ ನಂತರವೇ ಅಲ್ಲಿಂದ ಕದಲಿದ್ದು. ಬಡ ಕುಟುಂಬಸ್ಥನಾದ ಕಾರಣ ತನಗೆ ಬೇಕಾದಂತಹ ಪ್ರಯೋಗಶಾಲೆ ಮಾಡಿಕೊಳ್ಳುವುದು ಸಾಧ್ಯವೇ ಇಲ್ಲ ಅನ್ನಿಸಿಯೇ ಮೇಲೆ ತಿಳಿಸಿದಂತೆ ಅವರು ಅಮೆರಿಕಾದತ್ತ ಪ್ರಯಾಣ ಬೆಳೆಸಿದ್ದು.ಸೇಡು ತೀರಿಸಿಕೊಂಡ ಟೆಸ್ಲಾ!
ತನಗೆ ೫೦ ಸಾವಿರ ಡಾಲರ್‌ ನೀಡುವುದಾಗಿ ಆಮಿಷ ಒಡ್ಡಿ ತನ್ನಿಂದ ತಂತ್ರಜ್ಞಾನವನ್ನು ತಿಳಿದುಕೊಂಡು ವಂಚಿಸಿದ ಎಡಿಸನ್‌ಗೆ ಎದಿರೇಟು ಕೊಡಲೇ ಬೇಕು ಎಂದು ಟೆಸ್ಲಾ ಯೋಚಿಸುತ್ತಿದ್ದರು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಎಂಬಂತಾಗಿತ್ತು ಟೆಸ್ಲಾ ಸ್ಥಿತಿ. ಏಕೆಂದರೆ ಎಡಿಸನ್‌ ಅದಾಗಲೇ DC ( ಡೈರೆಕ್ಟ್‌ ಕರೆಂಟ್‌ ) ಮೂಲಕ ನ್ಯೂಯಾರ್ಕ್‌ ಸಿಟಿಯಲ್ಲಿ ಹೆಸರುವಾಸಿಯೂ ಮತ್ತು ಅತಿ ದೊಡ್ಡ ಉದ್ಯಮಿಯೂ ಆಗಿದ್ದರು. ಅವರ ಎದುರು ಸೆಣೆಸುವುದು ಸುಲಭದ ಮಾತಾಗಿರಲಿಲ್ಲ. ಬೀದಿಯಲ್ಲಿ ನಡೆದು ಹೋಗುವಾಗೆಲ್ಲಾ ಎಡಿಸನ್‌ ಹಾಕಿದ ಲೆಕ್ಕವಿಲ್ಲದಷ್ಟು ವೈಯರ್‌ಗಳು ಟೆಸ್ಲಾರನ್ನು ಕೆಣಕುತ್ತಿದ್ದವು. ಇದನ್ನೇ ಸವಾಲಗಿ ತೆಗೆದುಕೊಂಡ ಟೆಸ್ಲಾ ಎ.ಸಿ. (ಅಲ್ಟರ್‌ನೇಟೀವ್‌ ಕರೆಂಟ್‌) ಬಗ್ಗೆ ಆಸಕ್ತಿ ವಹಿಸಿದರು. DC ಗೆ ಎದುರಾಗಿ AC ಕರೆಂಟ್‌ ಅನ್ನು ಉಪಯೋಗಿಸುವುದು ಅತ್ಯಂತ ಕಡಿಮೆ ವೆಚ್ಚದ್ದು ಎಂಬುದು ಟೆಸ್ಲಾಗೆ ತಿಳಿದು ಹೋಯ್ತು. ತಕ್ಷನವೇ ಎಡಿಸನ್‌ಗೆ ಗುದ್ದು ಕೊಟ್ಟು ತನ್ನ ಸೇಡು ತಿರಿಸಿಕೊಳ್ಳಲು ಮುಂದಾದರು.[ ಇಲ್ಲಿ AC current ಮತ್ತು DC current ನ ವ್ಯತ್ಯಾಸ ತಿಳಿಸಲೇ ಬೇಕಾಗಿದೆ. AC ಕರೆಂಟ್‌ ಅಂದರೆ ಮೊಬೈಲ್‌ ಬ್ಯಾಟರಿ, ಅಥವಾ ಟಾರ್ಚ್‌‌ಗಳಿಗೆ ಉಪಯೋಗಿಸುವ ಸೆಲ್‌ಗಳಲ್ಲಿ ಇರುವಂತದ್ದು. ಇದರ ಶಕ್ತಿ ತುಂಬಾ ಕಡಿಮೆ. ಮತ್ತು ತುಂಬಾ ದೂರದ ವರೆಗೆ ಇದನ್ನು ಸಾಗಿಸುವುದು ಕಷ್ಟ. ಏಕೆಂದರೆ DC ಕರೆಂಟ್‌ನಲ್ಲಿ ಎಲೆಕ್ಟ್ರಾನ್‌ಗಳು + ಬಿಂದುವಿನಿಂದ - ಬಿಂದುವಿಗೆ ಸಾಗಬೇಕು. ಅಂದರೆ + ಬಿಂದುವಿನಿಂದ ಹೊರಟ ಎಲೆಕ್ಟ್ರಾನ್‌ ಅದುವೇ ಸುತ್ತಾಡಿಕೊಂಡು ಬಂದು - ಬಿಂದುವನ್ನು ತಲುಪಬೇಕು. ಈ ಕಾರಣಕ್ಕೆ ಹೆಚ್ಚು ದೂರ ಹೋದಂತೆಲ್ಲಾ ಎಲೆಕ್ಟ್ರಾನ್‌ಗಳು ನಡುವಲ್ಲಿಯೇ ಸೋತು ಹೋಗುವುದರಿಂದ ವಿದ್ಯುತ್‌ ಶಕ್ತಿ ನಷ್ಟ ಹೊಂದುತ್ತದೆ. ಇದನ್ನು ನೀವು ಪರೀಕ್ಷಿಸಲು ಒಂದು ಬ್ಯಾಟರಿ ಸೆಲ್‌ಗೆ ಹತ್ತೇ ಸೆಂಟಿ ಮೀಟರ್‌ನ ವಯರ್‌ ಜೋಡಿಸಿ ಚಿಕ್ಕ ಬಲ್ಬ್‌ ಉರಿಸಿ. ಆಗ ಅದು ಹೆಚ್ಚು ಪ್ರಕಾಶಮಾನವಾಗಿ ಉರಿಯುತ್ತೆ. ಆದರೆ ೧೦ ಸೆ.ಮೀ. ಬದಲು ೧೦ ಮೀಟರ್‌ ಉದ್ದನೆಯ ವಯರ್‌ ಬಳಸಿದಾಗ ಬಲ್ಬ್‌ ತುಂಬಾ ಚಿಕ್ಕದಾಗಿ ಉರಿಯುತ್ತೆ. ಅಂದರೆ ಚಾರ್ಜ್‌ ಆದ ಎಲೆಕ್ಟ್ರಾನ್‌ಗಳು ಅಷ್ಟು ದೂರ ಸಾಗಲು ಸಾಧ್ಯವಾಗದೇ ನಷ್ಟ ಹೊಂದುತ್ತವೆ. ಇದನ್ನು ತಪ್ಪಿಸಬೇಕೆಂದರೆ ದೊಡ್ಡ ವೈಯರ್‌ ಉಪಯೋಗಿಸಿ ಒಂದು ಸೆಲ್‌ ಬದಲು ಹತ್ತು ಸೆಲ್‌ ಬಳಸಬೇಕಾಗುತ್ತದೆ. ಆದರೂ ೧೦ ಮೀಟರ್‌ ಬದಲು ೧೦೦ ಮೀಟರ್‌ ಅಥವಾ ಕಿಲೋ ಮಿಟರ್‌ ದೂರದವರೆಗೆ DC ಕರೆಂಟ್‌ ಅನ್ನು ಕಳಿಸಬೇಕೆಂದರೆ ? ಆದರೆ ಟೆಲ್ಸಾ ಕಂಡು ಹಿಡಿದ AC ಕರೆಂಟಿನಲ್ಲಿ ಚಾರ್ಜ್‌ ಆದ ಎಲೆಕ್ಟ್ರಾನ್‌ಗಳು + ಬಿಂದುವಿನಿಂದ - ಬಿಂದುವಿನ ವರೆಗೆ ಅವೇ ಹೋಗದೇ ಚಾರ್ಜ್‌ ಪಾರ್ಟಿಕಲ್ಸ್‌ಗಳನ್ನು ಮಾತ್ರ ದೂಡುತ್ತವೆ. ಅಂದರೆ ಎಲೆಕ್ಟ್ರಾನ್‌ಗಳು ಒಂದಕ್ಕೊಂದು ತಾಡಿಸುತ್ತಾ ವಿದ್ಯುತ್‌ ಅನ್ನು ಮುಂದೆ ಕಳಿಸುತ್ತವೆ. ಇದರಿಂದ ಚಿಕ್ಕ ವಯರ್‌ ಮೂಲಕವೂ ಹೆಚ್ಚು ವಿದ್ಯುತ್‌ ಅನ್ನು ಅತಿ ದೂರದ ವರೆಗೆ ಕಳಿಸಬಹುದು. ]DC ಕರೆಂಟ್‌ನ ವೋಲ್ಟೇಜ್‌ ಅನ್ನು ಸಮತೋಲನದಲ್ಲಿ ಇಡಬೇಕಾದ್ದರಿಂದ ಎಡಿಸನ್‌ ಪ್ರತಿ ಮೈಲಿಗೆ ಒಂದರಂತೆ ಪವರ್‌ಪ್ಲಾಂಟ್‌ಗಳನ್ನು ಕಟ್ಟುತ್ತಿದ್ದರು! ೧೮೮೭ ರಲ್ಲಿ ಟೆಸ್ಲಾ ಏಳು ಎ.ಸಿ. ಕರೆಂಟ್‌ ಪ್ಲಾಂಟ್‌ಗಳನ್ನು ಸ್ಥಾಪಿಸುವ ಮೂಲಕ ಎಡಿಸನ್‌ಗೆ ಸೆಡ್ಡು ಹೊಡೆದರು. ಟೆಸ್ಲಾರ ಈ ಹೊಸ ಅವಿಷ್ಕಾರಕ್ಕೆ ಮಾರು ಹೋದ ಉದ್ಯಮಿ ಜಾರ್ಜ್‌ ವೆಸ್ಟಿಂಗ್‌ಹೌಸ್‌ ಕೂಡಲೇ ೬೦ ಸಾವಿರ ಡಾಲರ್‌ ಅನ್ನು ನೀಡಿ ಇದನ್ನು ಕೊಂಡುಕೊಂಡರು. ಹೊಸ AC ವಿದ್ಯುತ್‌ ಯೋಜನೆ ಯಶಸ್ವಿಯಾಯ್ತು. ಟೆಸ್ಲಾ ಈಗ ಅತಿ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರು ! ೧೮೯೧ ರಲ್ಲಿ ಟೆಸ್ಲಾರಿಗೆ ಅಮೆರಿಕ ಪೌರತ್ಯವೂ ದೊರೆಯಿತು.ಅದೆ ಸಮಯಕ್ಕೆ ಎಡಿಸನ್‌ ಮತ್ತು ಟೆಸ್ಲಾರ ನಡುವಿನ ಶೀತಲ ಸಮರ ತಾರಕಕ್ಕೇರಿತು. ಟೆಸ್ಲಾರ AC ಕರೆಂಟಿನ ವಿರುದ್ದ ಎಡಿಸನ್‌ ದೊಡ್ಡ ಮಟ್ಟದ ಅಪಪ್ರಚಾರಕ್ಕೆ ಇಳಿದರು! ಎ.ಸಿ. ಕರೆಂಟ್‌ ಜೀವಿಗಳಿಗೆ ಅತ್ಯಂತ ಮಾರಕ ಎಂದು ಬಿಂಬಿಸತೊಡಗಿದರು. ಇದಕ್ಕಾಗಿ ಎಡಿಸನ್‌ ತುಳಿದ ದಾರಿ ಎಂತವರನ್ನೂ ಹುಬ್ಬೇರಿಸುವಂತೆ ಮಾಡುವಂತದು. ಸಾವಿರಾರು ಜನರ ಎದುರಲ್ಲಿ ಒಂದು ದೊಡ್ಡ ಆನೆಗೆ ಹೆಚ್ಚು ವೋಲ್ಟೇಜ್‌ನ ಎ.ಸಿ. ಕರೆಂಟನ್ನು ಕೊಟ್ಟು ಅದು ನಿಮಿಷದೊಳಗೆ ಸುಟ್ಟು ಕರಕಲಗುವಂತೆ ಮಾಡಿ ತೋರಿಸಿದರು ಎಡಿಸನ್‌. 'ಟೆಸ್ಲಾರ ಎ.ಸಿ. ಕರೆಂಟ್‌ ಎಷ್ಟು ಅಪಾಯಕಾರಿ ಅನ್ನೋದನ್ನು ಈಗಲಾದರೂ ಮನಗಾಣಿರಿ' ಎಂಬಂತಿತತು ಅವರ ಪ್ರಯೋಗ. ಇದರಿಂದ ಜನರು ದಿಗಿಲು ಬಿದ್ದರು. ಇಷ್ಟೆಲ್ಲಾ ಅಪಾಯದ ಎ.ಸಿ. ಕರೆಂಟನ್ನು ಮನೆಯಲ್ಲಿ ಉಪಯೋಗಿಸುವುದಾದರೂ ಹೇಗೆ ಎಂಬ ಅನುಮಾನ ಎಲ್ಲರನ್ನೂ ಕಾಡಿತು. ಅಷ್ಟಕ್ಕೆ ಸುಮ್ಮನಾಗದ ಎಡಿಸನ್‌ 'ಎ.ಸಿ. ಕರೆಂಟನ್ನು ಅಪರಾಧಿಗಳ ಮರಣದಂಡನೆಗೆ ಬಳಸಬಹುದು' ಎಂಬ ಬಿಟ್ಟಿ ಸಲಹೆಯನ್ನೂ ಕೊಟ್ಟರು.ಆದರೆ ಎದೆಗುಂದದ ಟೆಸ್ಲಾ ಸರ್ಕಾರ‍ದ ಅಧಿಕಾರಿಗಳಿಗೆ ಎ.ಸಿ. ವಿದ್ಯುತ್‌ನಿಂದ ಆಗುವ ಲಾಭಗಳ ಬಗ್ಗೆ ಮಾಹಿತಿ ನೀಡಿದರು ಮತ್ತು ಆಪಾಯ ಎದುರಾಗದಂತೆ ಹೇಗೆ ಅದನ್ನು ಉಪಯೋಗಿಸಬಹುದು ಎಂಬುದನ್ನೂ ತೋರಿಸಿದರು. ಇದರಿಂದ ೧೮೯೩ರ 'ಕೊಲಂಬಿಯನ್‌ ಎಕ್ಸ್‌ಫೋಷನ್‌' ಎಂಬ ಬೃಹತ್‌ ಮೇಳಕ್ಕೆ ವಿದ್ಯುತ್‌ ದೀಪಗಳನ್ನು ಅಳವಡಿಸುವ ಗುತ್ತಿಗೆ ವೆಸ್ಟಿಂಗ್‌ಹೌಸ್‌ ಸಂಸ್ಥೆಗೇ ದೊರೆಯಿತು. ಇದು ಎಡಿಸನ್‌ಗೆ ಟೆಸ್ಲಾ ಕೊಟ್ಟ ಮೊದಲ ಗುದ್ದಾಗಿತ್ತು. ಮತ್ತು ಎಡಿಸನ್‌ ಸೋತು ತಲೆ ತಗ್ಗಿಸುವಂತಾಯ್ತು. ಆ ಮೇಳದಲ್ಲಿ ಪ್ರಜ್ವಲವಾಗಿ ಉರಿದ ಟೆಸ್ಲಾರ ಹೊಸ ಅವಿಷ್ಕಾರ ಅಮೆರಿಕ ಅಧ್ಯಕ್ಷರನ್ನೊಳಗೊಂಡು ಎಲ್ಲರನ್ನೂ ಬೆಕ್ಕಸ ಬೆರಗಾಗಿಸಿತು. ಅಲ್ಲಿಂದ ಶುರುವಾದ ಟೆಸ್ಲಾರ ಎ.ಸಿ. ಕರೆಂಟಿನ ವಿಜಯೋತ್ಸವ ಇಂದಿಗೂ ನಿಂತಿಲ್ಲ. ಇಂದು ಜಲವಿದ್ಯುತ್‌ ಇರಲಿ, ಅಣುಸ್ಥಾವರ ಇರಲಿ, ಸೌರ ವಿದ್ಯುತ್‌ ಯೋಜನೆ ಇರಲಿ.. ಎಲ್ಲ ಕಡೆ ಉತ್ಪಾದಿಸಿ ಬಳಸುತ್ತಿರುವುದು ಎ.ಸಿ. ಕರೆಂಟನ್ನೇ ಅನ್ನೋದು ಗಮನಿಸಬೇಕಾದ ಅಂಶ.
ಹೀಗೆ ತನ್ನನ್ನು ಅವಮಾನಗೊಳಿಸಿದ ಎಡಿಸನ್‌ಗೆ ಮೊದಲ ಗುದ್ದು ಕೊಟ್ಟ ಟೆಸ್ಲಾ ಒಂದೆರಡು ವರ್ಷದಲ್ಲೇ ಮ್ತೊಂದು ಆಘಾತವನ್ನು ಎಡಿಸನ್‌ಗೆ ನೀಡಿದರು. ಅಲ್ಲಿಯವರೆಗೂ ನಯಾಗರ ಫಾಲ್ಸ್‌ನಿಂದ DC ಕರೆಂಟನ್ನು ಎಡಿಸನ್‌ ಉತ್ಪಾದಿಸಿ ನ್ಯೂಯಾರ್ಕ್‌ ನಗರಕ್ಕೆ ಸರಬರಾಜು ಮಾಡುತ್ತಿದ್ದರು. ಆದರೆ ಅದರ ಗುತ್ತಿಗೆಯನ್ನು ಟೆಸ್ಲಾ ಮುಂದಾಳತ್ವದ ವೆಸ್ಟಿಂಗ್‌ಹೌಸ್‌ ಸಂಸ್ಥೆ ಪಡೆದುಕೊಂಡಿತು. ಎಡಿಸನ್‌ರ ಯೋಜನೆಗೆ ಮೈಲಿಗೆ ಒಂದರಂತೆ ಪವರ್‌ಪ್ಲಾಂಟ್‌ಗಳ ಅವಶ್ಯಕತೆ ಇದ್ದರೆ ಟೆಸ್ಲಾರ ಯೋಜನೆಗೆ ನಯಾಗರ ಹತ್ತಿರ ಪವರ ಜನರೇಟರ್‌ ಇದ್ದರೆ ಮುಗಿಯಿತು. ನಡುವಲ್ಲಿ ಎಲ್ಲಿಯೂ ಪ್ಲಾಂಟ್‌ಗಳ ಅವಶ್ಯಕತೆಯೇ ಇರಲಿಲ್ಲ. ೧೮೯೬ರಲ್ಲಿ ಇದು ಪೂರ್ಣಗೊಂಡ ನಂತರ ಎಡಿಸನ್‌ರ DC ಕರೆಂಟು ಕಳೆಗುಂದಿತು, ಮತ್ತು ಅವರ ಸಂಸ್ಥೆ ನಷ್ಟದ ಹಾದಿ ಹಿಡಿಯಿತು. ಆ ಮೂಲಕ ಟೆಸ್ಲಾ ತನಗಾದ ಅವಮಾನದ ಸೇಡು ತೀರಿಸಿಕೊಂಡದ್ದು ಇತಿಹಾಸದಲ್ಲಿ ನಡೆದ ಒಂದು ರೋಮಂಚಕ ಸಮರ ಎಂದೇ ಹೇಳಬಹುದು. ಇವರ ಜಿದ್ದು ಯಾವ ಮಟ್ಟಕ್ಕೆ ಇತ್ತು ಅಂದರೆ ೧೯೧೫ರಲ್ಲಿ ಇವರಿಬ್ಬರ ಸಾಧನೆಯನ್ನೂ ಗುರುತಿಸಿ ಜಂಟಿಯಾಗಿ ನೋಬೆಲ್‌ ಪ್ರಶಸ್ತಿಯನ್ನೂ ಘೋಷಿಸಲಾಯ್ತು. ಆದರೆ ಇದರಿಂದ ಸಿಟ್ಟುಗೊಂಡ ಎಡಿಸನ್‌ ಮತ್ತು ಟೆಸ್ಲಾ ಇಬ್ಬರೂ ಇದನ್ನು ಪಡೆಯಲು ತಿರಸ್ಕರಿಸಿದರು. ಆದರೆ ನೋಬಲ್‌ ಮಂಡಳಿ ಮತ್ತೆಂದೂ ಇವರಿಬ್ಬರನ್ನೂ ಪ್ರಶಸ್ತಿಗೆ ಪರಿಗಣಿಸಲೇ ಇಲ್ಲ!'ಟೆಸ್ಲಾ ಕಾಯಿಲ್‌' ಮೂಲಕ ಉಚಿತ ವಿದ್ಯುತ್‌... ಜಗತ್ತಿಗೆಲ್ಲ !ಯಾವುದೇ ವಯರ್‌ಗಳ ಸಹಾಯವಿಲ್ಲದೇ ವಿದ್ಯುತ್‌ ಅನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಹಾಯಿಸಿ ಅದನ್ನು ಬಳಸಬಹುದು ಎಂದೇ ಟೆಸ್ಲಾ ಬಹಳವಾಗಿ ಪ್ರತಿಪಾದಿಸಿದ್ದರು. ಅದಕ್ಕೆ ಬೇಕಾದ ಯೋಜನೆಯನ್ನೂ ಅವರು ಸಿದ್ದ ಪಡಿಸಿದ್ದರು. ಅವರ ಪ್ರಕಾರ ನಮ್ಮ ಭೂಮಿಯನ್ನು ಸುತ್ತ ಬಹು ಮೇಲೆ ಅಯಾನ್‌ಗಳ ಒಂದು ಕವಚ ಇದೆ. (ಇದು ನಿಜಕ್ಕೂ ಇದೆ ಎಂದು ಸಾಬೀತಾಗಿದ್ದು ಅವರು ತೀರಿ ಹೋದ ಹತ್ತಾರು ವರ್ಷಗಳ ನಂತರ ! ) ತನ್ನ ಯೋಚನೆಯ ಅತಿ ದೊಡ್ಡ ಟವರ್‌ ಮೂಲಕ (ಟೆಸ್ಲಾ ಕಾಯಿಲ್‌ ಎಂದೇ ಪ್ರಸಿದ್ದಿಯಾಗಿದೆ) ಆ ಅಯಾನ್‌ ಕವಚಕ್ಕೆ ವಿದ್ಯುತ್‌ ಪೂರೈಕೆ ಮಾಡುವುದು. ಮತ್ತು ಜಗತ್ತಿನ ಎಲ್ಲಾ ಕಡೆ ಆ ವಿದ್ಯುತ್‌ ಅನ್ನು ಪಡೆಯುವ ರಿಸೀವರ್‌ಗಳನ್ನು ಸ್ಥಾಪಿಸಿ ನೇರವಾದ ವೈಯರ್‌ಗಳ ಜೋಡಣೆ ಇಲ್ಲದೆಯೇ ವಿದ್ಯುತ್‌ ಅನ್ನು ಪಡೆದು ಮನೆ ಮನೆಗೂ ನೀಡುವುದು. ಇಂತಹುದೊಂದು ಯೋಚನೆಯನ್ನು ಅವರು ಮೊದಲು ಹೊರಗೆಡವಿದ್ದು ೧೯೮೧ರಲ್ಲಿ. ಆಗ ಇವರ ವಯಸ್ಸು ಮೂವತ್ತೈದು ಆಗಿತ್ತು. ಇದು ಟೆಸ್ಲಾ ಅವರ ಮಹತ್ವಾಕಾಂಕ್ಷಿ ಯೋಜನೆಯಾಗಿತ್ತು. ತನ್ನ ಜೀವನದಲ್ಲಿ ಇದನ್ನು ಸಾಧಿಸಿಯೇ ತೀರಬೇಕು ಎಂದು ಪಣ ತೊಟ್ಟಿದ್ದರು ಕೂಡಾ.
ಇದಕ್ಕಾಗಿ ಅವರು ಬೃಹತ್‌ ಟೆಸ್ಲಾ ಕಾಯಿಲ್‌ ಒಂದನ್ನು ರೂಪಿಸಬೇಕು ಅಂದುಕೊಂಡಿದ್ದರು. ಈ ತಂತ್ರಜ್ಞಾನದ ಒಳ ತಿರುಳು ಸರಳವಾಗಿದೆ. ಇದು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ವಿವರಿಸಬೇಕು ಎಂದರೆ, ಉದಾಹರಣೆಗೆ ಒಂದು ಇಂಚಿನ ಪೈಪ್‌ನಲ್ಲಿ ನೀರನ್ನು ಶಕ್ತಿಯುತವಾಗಿ ಪಂಪ್‌ ಮಾಡಲಾಗುತ್ತಿದೆ ಅಂದುಕೊಳ್ಳಿ. ಪೈಪ್‌ನ ಮತ್ತೊಂದು ತುದಿಯಿಂದ ನೀರು ಒಂದಿಷ್ಟು ದೂರ ಚಿಮ್ಮಿ ನೆಲಕ್ಕೆ ಬೀಳುತ್ತದೆ. ಈಗ ಆ ತುದಿಗೆ ಕಾಲು ಇಂಚಿನ ಇನ್ನೊಂದು ಪೈಪ್‌ ಅನ್ನು ಜೋಡಿಸಿದರೆ ? ಪ್ರಾರಂಬದಲ್ಲಿ ಒಂದು ಇಂಚಿನ ಪೈಪ್‌ನಲ್ಲಿ ಹರಿದು ಬರುವ ನೀರಿಗೆ ನಂತರ ಕಾಲು ಇಂಚಿನ ಜಾಗ ಮಾತ್ರ ದೊರೆತರೆ ಅಲ್ಲಿ ಅತ್ಯಂತ ಒತ್ತಡ ಶುರುವಾಗುತ್ತದೆ, ಮತ್ತು ಆ ಕಾಲು ಇಂಚಿನ ಪೈಪ್‌ನ ತುದಿಯಿಂದ ನೀರು ಮೊದಲಿಗಿಂತಲೂ ಬಹು ದೂರದ ವರೆಗೂ ಚಿಮ್ಮುತ್ತದೆಯಷ್ಟೇ ? ಇದೇ ಟೆಸ್ಲಾ ಕಾಯಿಲ್‌ನ ಒಳ ತಿರುಳು. ಆದರೆ ವಿದ್ಯುತ್‌ಗೆ ಇದನ್ನು ಅಳವಡಿಸುವುದು ಅಷ್ಟು ಸುಲಭದ್ದಲ್ಲ ಎಂಬುದನ್ನು ಅರಿಯಬೇಕಾದರೆ ಇಂದಿನ ವಿಜ್ಞಾನಿಗಳೂ ಸಹ ಇದನ್ನು ಸಾಧಿಸಲು ಕಷ್ಟ ಪಡುತ್ತಲೇ ಇರುವುದೇ ನಿದರ್ಶನವಾಗಿದೆ. ಟೆಸ್ಲಾ ಕಾಯಿಲ್‌ನಲ್ಲೂ ಮೊದಲಿಗೆ ಕಡಿಮೆ ವೋಲ್ಟೇಜ್‌ ವಿದ್ಯುತ್‌ ಅನ್ನು ಸ್ವಲ್ಪ ದಪ್ಪ ತಂತಿಯ ಮೂಲಕ ಹಾಯಿಸಲಾಗುತ್ತದೆ. ನಂತರ ಅತಿ ಚಿಕ್ಕ ತಂತಿಗೆ ದಾಟಿಸಲಾಗುತ್ತದೆ. ಆಗ ಅಲ್ಲಿ ವಿದ್ಯುತ್‌ನ ಅತೀವ ಒತ್ತಡ ಶುರುವಾಗಿ ವೋಲ್ಟೇಜ್‌ ನೂರ್ಮಡಿಕೊಳ್ಳುತ್ತದೆ. ಎಷ್ಟು ಹೆಚ್ಚಾಗುತ್ತದೆಂದರೆ ೧೨೦ ವೋಲ್ಟೇಜ್‌ನಲ್ಲಿ ವಿದ್ಯುತ್ತನ್ನು ಹಾಯಿಸಿದಾಗ ಅದು ೫ ಲಕ್ಷ ವೋಲ್ಟ್ಸ್‌ಗೆ ಹೆಚ್ಚುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ !ಈ ರೀತಿಯ ಬೃಹತ್‌ ಟವರ್‌ ( ಕಾಯಿಲ್‌ ) ಒಂದನ್ನು ನಿರ್ಮಿಸಿ, ಅಂದರೆ ಸುಮರು ಎರಡು ಸಾವಿರ ಅಡಿ ಎತ್ತರದ್ದು! ಅದರ ಮೂಲಕ ಜಗತ್ತಿಗೆಲ್ಲಾ ವಿದ್ಯುತ್‌ ಅನ್ನು ಉಚಿತವಾಗಿ ಕೊಡಬೇಕು ಎಂಬ ಮಹದಾಸೆ ಟೆಸ್ಲಾಗೆ ಇತ್ತು. ಅದಕ್ಕಾಗಿ ಅವರು ಪ್ರಯತ್ನವನ್ನೂ ಪಟ್ಟರು. ಅವರ ಪ್ರಕಾರ ಭೂಮಿ ಅನ್ನುವುದು ಒಂದು ದೊಡ್ಡ ವಿದ್ಯುತ್‌ ಕಂಡಕ್ಟರ್‌ ಎಂಬುದರಲ್ಲಿ ಸಂದೇಹವಿರಲಿಲ್ಲ. ಮತ್ತು ಭೂಮಿಯನ್ನು ಸುತ್ತಿ ಇರುವ ಅಯಾನ್‌ ಪದರದ ಮೂಲಕ ವಿದ್ಯುತ್‌ ಅನ್ನು ಭೂಮಿಯ ಯಾವ ಭಾಗಕ್ಕಾದರೂ ತಲುಪಿಸಬಹುದು. ನಂತರ ನಮಗೆ ಬೇಕಾದಂತಹ ಜಾಗಗಳಲ್ಲಿ ಚಿಕ್ಕ ಚಿಕ್ಕ ಟವರ್‌ಗಳನ್ನು ಹಾಕಿ ಭೂಮಿಯ ಮೇಲ್ಬಾಗದಲ್ಲಿ ಹರಿಯುತ್ತಿರುವ ವಿದ್ಯುತ್‌ ಅನ್ನು ಪಡೆದು ಬಳಸಬಹುದು ಅನ್ನುವುದು ಟೆಸ್ಲಾರ ಯೋಚನೆಯಾಗಿತ್ತು. (ಯೋಚಿಸಿ ನೋಡಿ, ಅದರ ನಂತರದ ನೂರು ವರ್ಷಗಳ ನಂತರ ಇದೇ ಮಾದರಿಯನ್ನೇ ಅಲ್ಲವೇ ಮೊಬೈಲ್‌ ನೆಟವರ್ಕ್‌‌ಗೆ ನಾವು ಬಳಸುತ್ತಿರುವುದು! ). ಹಾಗೆಯೇ ಇಲ್ಲಿ ಇನ್ನೊಂದು ಸಂಶಯ ಕೂಡಾ ಮೂಡುತ್ತದೆ. ಟೆಸ್ಲಾರ ಪ್ರಕಾರ ಭೂಮಿಯ ಸುತ್ತಿ ಇರುವ ಅಯಾನ್‌ ಪದರದ ವರೆಗೂ ಟೆಸ್ಲಾ ಕಾಯಿಲ್‌ ಮೂಲಕ ವಿದ್ಯುತ್‌ ಅನ್ನು ಚಿಮ್ಮಿಸಬೇಕಾದರೆ (ಇಡೀ ಜಗತ್ತಿನ ಎಲ್ಲಾ ಊರುಗಳಿಗೂ ಸಾಕಾಗುವಷ್ಟು) ಎಷ್ಟೊಂದು ವಿದ್ಯುತ್‌ ಬೇಕು ?! ಅದನ್ನು ಎಲ್ಲಿಂದ ತರುವುದು ? ಎಂದು. ಇದಕ್ಕೂ ಟೆಸ್ಲಾರ ಬಳಿ ಉತ್ತರವಿತ್ತು. ನಯಾಗರ ಜಲಪಾತದಲ್ಲಿ ಕೋಟ್ಯಾಂತರ ತಿಎಂಸಿ ನೀರು ಹರಿದು ಹೋಗುತ್ತಿದೆಯಷ್ಟೇ. ಅದರಲ್ಲಿ ಒಂದಂಶವನ್ನು ಬಳಸಿದರೂ ಸಾಕು, ಇಡೀ ಜಗತ್ತಿಗೆ ನೀಡಬಹುದಾದಷ್ಟು ವಿದ್ಯುತ್ತನ್ನು ತಾನು ಉತ್ಪಾದಿಸಿ ಕೊಡಬಲ್ಲೆ ಎಂದು ಹೇಳಿದ್ದರು!೧೮೮೯ ರಲ್ಲಿ ಈ ಯೋಜನೆಯನ್ನು ಪ್ರಯೋಗದ ಮೂಲಕ ಜನರಿಗೆ ತೋರಿಸಲು ಮುಂದಾದರು ಟೆಸ್ಲಾ. ಕೊಲರಡೋ ಸಮೀಪ ಇದಕ್ಕಾಗಿಯೇ ಒಂದು ಪ್ರಯೋಗಶಾಲೆ ಮತ್ತು ಸುಮರು ೮೦ ಅಡಿ ಎತ್ತರದ ಟವರನ್ನೂ ನಿರ್ಮಿಸಲಾಯ್ತು. ೧೮೯೩ ಸುಮಾರಿಗೆ ಪ್ರಯೋಗಾಲಯ ಕಾರ್ಯಾರಂಭ ಮಾಡಿತು. (ಈ ಪ್ರಯೋಗಾಲಯದೊಳಗೆ ಟೆಸ್ಲಾ ಕಾಯಿಲ್ ಮುಖಾಂತರ ಹರಿಯುತ್ತಿರುವ ಪ್ರಖರ ವಿದ್ಯುತ್‌ನ ಕೆಳಗೇ ನಿಕೊಲ ಟೆಸ್ಲಾ ಕುಳಿತು ಬರೆಯುತ್ತಿರುವುದನ್ನು ಚಿತ್ರದಲ್ಲಿ ಕಾಣಬಹುದು!). ಮುಖ್ಯವಾಗಿ ಅಂತಹ ಬೃಹತ್‌ ವಿದ್ಯುತ್‌ನಿಂದ ಜೀವಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಅನ್ನುವುದನ್ನು ಅವರು ತೋರಿಸಬೇಕಾಗಿತ್ತು. ಟೆಸ್ಲಾ ಕಾಯಿಲ್‌ ಅನ್ನು ಆನ್‌ ಮಾಡಿದಾಗ ಸುತ್ತಲೂ ನೆರೆದಿದ್ದವರು ಆ ಪ್ರಖರ ವಿದ್ಯುತ್‌ ಜ್ವಾಲೆಗಳನ್ನು ಕಂಡು ದಂಗಾದರು. ಸುಮಾರು ೫೦೦ ವೋಲ್ಟ್ಸ್ ನಷ್ಟೇ ವಿದ್ಯುತ್‌ ಅನ್ನು ಅದಕ್ಕೆ ಊಡಿಸಿದಾಗ ಆ ಕಾಯಿಲ್‌ ಹೊರ ಹಾಕಿದ್ದು ಸುಮಾರು ೧.೨ ಕೋಟಿ ವೋಲ್ಟ್ಸ್ ಶಕ್ತಿಯನ್ನು ! ಸ್ವಲ್ಪ ದೂರದಲ್ಲಿ ಸ್ವತಃ ತಾವೇ ಒಂದು ಬಲ್ಬ್ ಅನ್ನು ಕೈಲಿ ಹಿಡಿದೇ ಅದನ್ನು ಬೆಳಗಿಸಿ (ವೈಯರ್‌ ಇಲ್ಲದೇ) ನೆರೆದಿದ್ದ ಜನರಿಗೆ ತೋರಿಸಿದರು ಟೆಸ್ಲಾ. ಇದರಿಂದ ಟೆಸ್ಲಾರ ತಂತ್ರಜ್ಞಾನ ಜೀವಿಗಳಿಗೆ ತೊಂದರೆ ನೀಡದು ಎಂಬುದು ಸಾಬೀತಾಯ್ತು. ಅಷ್ಟೇ ಅಲ್ಲ, ಆ ೮೦ ಅಡಿ ಎತ್ತರದ ಟವರ್‌ ಮೂಲಕ ಒಂದು ಮೈಲಿ ದೂರದಲ್ಲಿ ಇರುವ ಬಲ್ಬ್‌ಗೂ ಯಾವುದೇ ಸಂಪರ್ಕ ಇಲ್ಲದಿದ್ದರೂ ವಿದ್ಯುತ್‌ ಅನ್ನು ಹಾಯಿಸಿ ಬೆಳಗಿಸಿ ತೋರಿಸಿದರು. ಇದನ್ನೆಲ್ಲಾ ಕಂಡ ಜನ ನಿಬ್ಬೆರಗಾದರು, ಮತ್ತು ಟೆಸ್ಲಾ ಇದ್ದಕ್ಕಿದ್ದಂತೆ ಪ್ರಸಿದ್ದಿಗೂ ಬಂದರು.
ಆದರೆ ಇವರ ಕನಸಿನ ಯೋಜನೆ ಪೂರ್ಣಗೊಳಿಸುವುದು ಅಷ್ಟು ಸುಲಭದ ಮಾತಾಗಿರಲಿಲ್ಲ. ಇದಕ್ಕೆ ಅಪಾರ ಪ್ರಮಾಣದ ಹಣದ ಅವಶ್ಯಕತೆ ಇತ್ತು. ಆದರೆ ಟೆಸ್ಲಾರನ್ನು ನಂಬಿ ಬಿಲಿಯನ್‌ಗಟ್ಟಲೇ ಡಾಲರ್‌ ಸುರಿಯಲು ಯಾರೂ ಮುಂದೆ ಬರಲೇ ಇಲ್ಲ. ಇದಕ್ಕೆ ಟೆಸ್ಲಾರ 'ಉಚಿತ ವಿದ್ಯುತ್‌' ಎಂಬ ಸಮಾಜ ಸೇವಾ ಮನೋಭಾವ ಕೂಡಾ ಮತ್ತೊಂದು ಕಾರಣವಾಗಿತ್ತು. ಈ ಮನುಷ್ಯನನ್ನು ನಂಬಿ ಹಣ ಹಾಕಿದರೆ ಲಾಭ ಗಿಟ್ಟುವುದಿಲ್ಲ ಎಂಬ ನಿಲುವಿಗೆ ಉದ್ಯಮಿಗಳು ಬಂದಿದ್ದರು. ಇಂದಿನಂತೆಯೇ ಅಂದಿನ ಉದ್ಯಮಿಗಳ ಮನಸ್ಥಿತಿಯೂ ಆಗಿತ್ತು. ಒಂದು ಡಾಲರ್‌ ಹಾಕಿದರೆ ನೂರು ಡಾಲರ್‌ ಲಾಭ ಬರಬೇಕೆಂಬ ಯೋಚನೆ ಅವರದು. ಹೀಗಾಗಿ ಟೆಸ್ಲಾರನ್ನು ಯಾರೂ ಪ್ರೋತ್ಸಾಹಿಸಲಿಲ್ಲ. ಇದರಿಂದ ಬೇಸರಗೊಂಡ ಟೆಸ್ಲಾ ಈಸ್ಟ್‌ ಕೋಸ್ಟ್‌ಗೆ ವಾಪಾಸಾದರು.೧೯೦೧ ರಲ್ಲಿ ಕೊಲರಾಡೋ ಅನುಭವದ ಆಧಾರದಲ್ಲಿ ಈಸ್ಟ್‌ಕೋಸ್ಟ್‌ನಲ್ಲಿ ಮತ್ತೊಂದು ಪ್ರಯೋಗಶಾಲೆಯನ್ನು ಸ್ಥಾಪಿಸಿದರು. ಇದೂ ಕೂಡಾ ಅವರ ಕನಸಿನ ಯೋಜನೆಯಾದ 'ನಿಸ್ತಂತು ವಿದ್ಯುತ್‌ ಸೇವೆ'ಯದೇ ಆಗಿತ್ತು. ಇಲ್ಲಿಯೂ ಒಂದು ೧೮೭ ಅಡಿ ಎತ್ತರದ ಟೆಸ್ಲಾ ಕಾಯಿಲ್‌ ಟವರೊಂದನ್ನು ಕಟ್ಟಿದರು. ಈ ಬಾರಿ ಸ್ವಲ್ಪ ಬದಲಾವಣೆ ಮಾಡಿದ ಟೆಸ್ಲಾ ಈ ಟವರ್‌ಗೆ ಸಮೀಪದಲ್ಲಿ ಅಲ್ಲಲ್ಲಿ ಇದೇ ಚಿಕ್ಕ ಚಿಕ್ಕ ಟವರ್‌ಗಳನ್ನು ನಿಲ್ಲಿಸಿ ಈ ಟವರ್‌ನಿಂದ ವಿದ್ಯುತ್‌ ಕಳಿಸುವ ಯೋಜನೆ ರೂಪಿಸಿದರು. ಇದಕ್ಕೆ ತಗಲುವ ವೆಚ್ಚವನ್ನು ಭರಿಸಲು ಮೋರ್ಗನ್‌ ಎಂಬ ಅತಿ ದೊಡ್ಡ ಉದ್ಯಮಿ ಮುಂದೆ ಬಂದರು. ಈ ಟವರ್‌ ಮೂಲಕ ಬರೀ ವಿದ್ಯುತ್‌ ಮಾತ್ರವಲ್ಲದೇ ಸಂಗೀತ, ಸಂದೇಶ, ಚಿತ್ರಗಳು ಮತ್ತು ಸುದ್ದಿಗಳನ್ನೂ ಕಳಿಸುವ ಮೂಲಕ ಕೋಟ್ಯಾಂತರ ಡಾಲರ್‌ ಲಾಭ ಮಾಡಬಹುದು ಎಂಬ ಭರವಸೆಯನ್ನು ಮೋರ್ಗನ್‌ಗೆ ಟೆಸ್ಲಾ ನೀಡಿದರು.ಮಾರ್ಕೋನಿ ನೀಡಿದ ಆಘಾತ!
೧೨ ಡಿಸೆಂಬರ್‌ ೧೯೦೧ರಲ್ಲಿ ನಿಸ್ತಂತು ವಿದ್ಯುತ್‌ ಬಗ್ಗೆ ಟೆಸ್ಲಾ ಪ್ರಯೋಗ ನಡೆಸುತ್ತಿರುವಾಗಲೇ ಮಾರ್ಕೊನಿ ಎಂಬಾತನಿಂದ ಆಘಾತಕಾರಿ ಸುದ್ದಿಯೊಂದು ಬಂತು. ಯಾವ ರೇಡಿಯೋ ತರಂಗದ ಬಗ್ಗೆ ಟೆಸ್ಲಾ ಹತ್ತಾರು ವರ್ಷ ಕಷ್ಟಪಟ್ಟು ಪ್ರಯೋಗ ನಡೆಸಿ ಯಶಸ್ವಿಯಾಗಿದ್ದರೋ ಅದರ ಪೇಟೆಂಟ್‌ ಅನ್ನು ಮಾರ್ಕೋನಿ ಪಡೆದುಕೊಂಡಿದ್ದ! ಇದಕ್ಕಿಂತಲೂ ಆಘಾತದ ವಿಷಯವೆಂದರೆ ಮಾರ್ಕೋನಿ ಪೇಟೆಂಟ್‌ಗಾಗಿ ಮಂಡಿಸಿದ್ದ ರೇಖಾ ಚಿತ್ರಗಳೆಲ್ಲ ಒಂದು ಸಮಯದಲ್ಲಿ ಟೆಸ್ಲಾ ರಚಿಸಿದ್ದ ರೇಖಾಚಿತ್ರಗಳ ನಕಲೇ ಆಗಿದ್ದವು! ಟೆಸ್ಲಾ ಅಭಿವೃದ್ದಿ ಮಾಡಿದ ಈ ತಂತ್ರಜ್ಞಾನ ಮಾರ್ಕೋನಿ ಕೈಗೆ ಹೇಗೆ ಹೋಯ್ತು ಎಂಬುದು ಟೆಸ್ಲಾಗೂ ಗೊತ್ತಾಗಲಿಲ್ಲ. ಏಕೆಂದರೆ ಕೇವಲ ಪ್ರಯೋಗಗಳೇ ಬದುಕೆಂದುಕೊಂಡಿದ್ದ ಟೆಸ್ಲಾ ಎಂದೂ ನಂಬಿಕೆ ದ್ರೋಹದ ಬಗ್ಗೆಯಾಗಲೀ, ಪೇಟೆಂಟ್‌ ಪಡೆದು ರಕ್ಷಿಸಿಕೊಳ್ಳಬೇಕೆಂಬ ಕಾನೂನು ಬಗ್ಗೆಯಾಗಲೀ ಯೋಚಿಸಿರಲೇ ಇಲ್ಲ.ಮಾರ್ಕೋನಿ ಮಾಡಿದ ದ್ರೋಹ ಟೆಸ್ಲಾರ ಜೀವನದ ದಿಕ್ಕನ್ನ ಮತ್ತೆ ಹಳ್ಳ ಹಿಡಿಸಿತು. ಏಕೆಂದರೆ ಟೆಸ್ಲಾರ ನಿಸ್ತಂತು ಯೋಜನೆಗಾಗಿ ಬಿಲಿಯನ್‌ಗಟ್ಟಲೇ ಹಣ ಸುರಿಯಲು ಮುಂದೆ ಬಂದಿದ್ದ ಮೋರ್ಗನ್‌ ತಕ್ಷಣ ತನ್ನ ನಿಲುವನ್ನು ಬದಲಿಸಿದ. ಕಾರಣ ಇಷ್ಟೇ, ಟೆಸ್ಲಾ ಹೇಳುತ್ತಿರುವ 'ನಿಸ್ತಂತು' ಯೋಜನೆಯ ಮತ್ತೊಂದು ರೂಪವೇ ಮಾರ್ಕೊನಿ ಕಂಡು ಹಿಡಿದಿರುವ 'ರೇಡಿಯೋ ತರಂಗ' ಎಂಬುದಾಗಿತ್ತು. ಅಲ್ಲದೇ ಇದುವರೆಗೂ ಟೆಸ್ಲಾರ ಹೆಸರಲ್ಲಿ ಇದ್ದ ಈ ಯೋಜನೆಯನ್ನು ಮೋರ್ಗನ್‌ ತನ್ನ ಹೆಸರಿಗೆ ಬರೆಸಿಕೊಂಡರು.  ಇದು ಟೆಸ್ಲರಿಗೆ ಅರಗಿಸಿಕೊಳ್ಳಲಾಗದ ತುತ್ತಾಯಿತು. ಅದಾಗಲೇ ಟೆಸ್ಲಾ ಕಾಯಿಲ್‌ನ ಟವರ್‌ ಕೆಲಸ ಪೂರ್ಣಗೊಂಡಿತ್ತು. ೧೯೦೫ರಲ್ಲಿ ಈ ಟವರ್‌ ಕೆಲಸವನ್ನೂ ಶುರು ಮಾಡಿತು. ಟೆಸ್ಲಾರ ಯೋಚನೆಯಂತೆ ವಿದ್ಯುತ್‌ ಅನ್ನು ಬಹು ದೂರದ ವರೆಗೆ ವೈಯರ್‌ಗಳ ನೆರವು ಇಲ್ಲದೇ ಸಾಗಿಸಬಹುದು ಎಂಬುದೂ ನಿರೂಪಿತವಾಯ್ತು. ಆದರೆ ಒಂದು ದಿನ ಇದ್ದಕ್ಕಿದ್ದಂತೆ ಈ ಟವರು ಕುಸಿದು ಬಿತ್ತು ! ಇದನ್ನು ಬೇಕೆಂದರೆ ಟೆಸ್ಲಾ ಬೀಳಿಸಿದರು ಎಂದು ಜನ ಆಡಿಕೊಂಡರು. ಆದರೆ ಸತ್ಯ ಯಾರಿಗೂ ಗೊತ್ತಾಗಲಿಲ್ಲ. ಆದರೆ ಕೋಟ್ಯಾಂತರ ಬಿಲಿಯನ್‌ ಹಣ ವಿನಿಯೋಗಿಸುವವರು ಮುಂದೆ ಬಂದರೆ ಈಗಲೂ ಈ ಯೋಜನೆಯನ್ನು ಮಾಡಲು ಸಾಧ್ಯವಿದೆ ಎಂದು ಇಂದಿನ ವಿಜ್ಞಾನಿಗಳು ಹೇಳುತ್ತಿದ್ದಾರೆ. ೨೧ ಜೂನ್‌ ೧೯೪೩ ರಂದು US ಸುಪ್ರೀಮ್‌ ಕೋರ್ಟ್‌ 'ಮಾರ್ಕೋನಿ ಪಡೆದಿರುವ ರೇಡಿಯೋ ಸಿಗ್ನಲ್‌ಗಳ ಮೇಲಿನ ಪೇಟೆಂಟ್‌ ಅಸಿಂಧು! ಇದರ ನಿಜವಾದ ಮಾಲಿಕ ನಿಕೋಲ ಟೆಸ್ಲಾ' ಎಂದು ಆದೇಶ ನೀಡಿತು. ಆದರೆ ದುರಂತ ನೋಡಿ, ಆ ಆದೇಶ ಬರುವ ಆರು ತಿಂಗಳ ಹಿಂದೆಯೇ ಟೆಸ್ಲಾ ಸತ್ತು ಹೋಗಿದ್ದರು!ಟೆಸ್ಲಾ ಸತತ ಪ್ರಯೋಗ ಮಾಡಿದ ಆ ಪ್ರಯೋಗಶಾಲೆ ಇಂದು ಅನಾಥವಾಗಿ ಬಿಕೋ ಅನ್ನುತ್ತಿದೆ. ಕೊಲರಡೋ ಫೋಟೋಫಿಲ್ಮ್ ಸಂಸ್ಥೆಯು ಈ ಜಾಗವನ್ನು ಕೊಂಡುಕೊಂಡು ತನ್ನ ಕಚೇರಿ ಸ್ಥಾಪಿಸಿದ್ದರೂ ಟೆಸ್ಲಾರ ಪ್ರಯೋಗಶಾಲೆಯನ್ನು ಅವರ ನೆನಪಿಗಾಗಿ ಹಾಗೆಯೇ ಉಳಿಸಿದೆ.ಇದೇ ಸಮಯದಲ್ಲಿ ಟೆಸ್ಲಾ ಇನ್ನೊಂದು ಪ್ರಯೋಗವನ್ನೂ ಮಾಡಿದ್ದರು. ಅದು ರೇಡಿಯೋ ತರಂಗಗಳನ್ನು ದೂರದ ಆಕಾಶಕಾಯಗಳತ್ತ ಕಳಿಸಿ ಅತ್ತಲಿಂದ ಉತ್ತರ ಬಂದರೆ ಸ್ವೀಕರಿಸುವುದು. ಬೇರೆ ಗ್ರಹವಾಸಿಗಳಿಂದ ತಮಗೆ ಸಂಕೇತಗಳು ಬರುತ್ತಿರುವುದಾಗಿಯೂ ಅವರು ತಿಳಿಸಿದರು. (ಇಂದಿಗೂ ಇದೇ ಮಾದರಿಯ ರೇಡಿಯೋ ಸಂಕೇತಗಳನ್ನೇ ಉಪಗ್ರಹಗಳ ಸಂಪರ್ಕಕ್ಕೆ ಉಪಯೋಗಿಸಲಾಗುತ್ತಿದೆ.)ಈ ಎಲ್ಲಾ ಜಿದ್ದು, ಸಾಧನೆ, ಸಂಪಾದನೆ, ಅವಿಷ್ಕಾರಗಳ ನಡುವೆಯೇ ಕಾಲ ಕಳೆದ ಟೆಸ್ಲಾ ಮದುವೆಯನ್ನೂ ಆಗಲಿಲ್ಲ. ಇವರು ಎ.ಸಿ. ವಿದ್ಯುತ್‌ ಮೂಲಕ ಪ್ರಸಿದ್ದಿ ಪಡೆದ ನಂತರ ಇವರನ್ನು ಮೋಹಿಸಿ ಬಂದ ಹೆಣ್ಣುಗಳಿಗೆ ಲೆಕ್ಕವಿಲ್ಲ. ಆದರೆ ಆ ಸಮಯದಲ್ಲಿ ಅಮೆರಿಕೆಗೆ ಭೇಟಿ ನೀಡಿದ್ದ ಭಾರತದ ಯೋಗಿ ಸ್ವಾಮಿ ವಿವೇಕಾನಂದ ಅವರನ್ನೂ ಟೆಸ್ಲ ಭೇಟಿಯಾಗಿದ್ದರು. ಮತ್ತು ವಿವೇಕಾನಂದರ ಪ್ರವಚನಗಳಿಗೆ ಮಾರು ಹೋಗಿದ್ದರು. ವಿವೇಕರು ತನ್ನಲ್ಲಿ ಬಹಳಷ್ಟು ಬದಲಾವಣೆ ಮಾಡಿದರು ಎಂದು ಟೆಸ್ಲಾ ಹೇಳಿಕೊಂಡಿದ್ದಾರೆ. ಈ ಕಾರಣದಿಂದಲೇ ಟೆಸ್ಲಾ ಮದುವೆಯನ್ನು ನಿರಾಕರಿಸಿರಬಹುದು ಎಂದೂ ಕೆಲವರು ಹೇಳುತ್ತಾರೆ.ಮಾರ್ಕೋನಿ ಮತ್ತಿತರರು ಮಾಡಿದ ಮೋಸದ ನಂತರ ಎಚ್ಚೆತ್ತ ಅವರು ನಂತರ ತಮ್ಮ ಅವಿಷ್ಕಾರಗಳಿಗೆ ಪೇಟೆಮಟ್‌ ಪಡೆಯತೊಡಗಿದರು. ಅವರನ್ನು ಹತ್ತಿರದಿಂದ ಬಲ್ಲವರು ಹೇಳಿದ ರೀತಿ ಟೆಸ್ಲಾ ಪ್ರಪಂಚದ ಹಲವಾರು ದೇಶಗಳ ಮೂಲಕ ಪಡೆದ ಪೇಟೆಂಟ್‌ಗಳ ಸಂಖ್ಯೆ ಏಳು ನೂರನ್ನೂ ದಾಟುತ್ತದೆ. ಆದರೆ ಇಂದು ಅಧಿಕೃತವಾಗಿ ದಾಖಲೆ ಉಳಿದಿರುವುದು ಸುಮಾರು ೨೭೮. ಇದೇನೂ ಕಡಿಮೆ ಸಂಖ್ಯೆಯಲ್ಲ. ಇದಲ್ಲದೇ ಎರಡನೇ ಮಹಾ ಯುದ್ದ ಶುರುವಾದ ಸಮಯದಲ್ಲಿ ವಿದ್ಯುತ್‌ ಬೀಮ್‌ ಮೂಲಕ ದೂರದ ವಿಮಾನಗಳನ್ನು ಸುಟ್ಟು ಬೂದಿ ಮಾಡುವ ತಂತ್ರಜ್ಞಾನವನ್ನು ಟೆಸ್ಲಾ ಅಭಿವೃದ್ದಿ ಮಾಡಿದ್ದಾಗಿ ಹೇಳಲಾಗುತ್ತಿದೆ. ಹಾಗೆಯೇ ನಿರ್ದಿಷ್ಟ ಪ್ರದೇಶದಲ್ಲಿ ವಿದ್ಯುತ್‌ ತರಂಗಗಳ ಮೂಲಕ ಕೃತಕ ಭೂಕಂಪವನ್ನು ಸೃಷ್ಟಿಸಿ ಆ ಪ್ರದೇಶವನ್ನೇ ಧ್ವಂಸ ಮಾಡುವ ತಂತ್ರಜ್ಞಾನವನ್ನೂ ಅವರು ತೆರೆದಿಟ್ಟರು. ಒಂದು ಸಮಯದಲ್ಲಿ ಬಡವರಾಗಿದ್ದ ಸಮಯದಲ್ಲಿ ಇಡೀ ಜಗತ್ತಿಗೂ ಉಚಿತ ವಿದ್ಯುತ್‌ ನೀಡುವ ಮಹಾನ್‌ ಕನಸು ಕಂಡ ವ್ಯಕ್ತಿಯಲ್ಲಿ ಧನಿಕರಾದ ನಂತರ ಇಂತಹ ವಿಧ್ವಂಸಕ ಗುಣ ಬಂದುದು ಹೇಗೆಂದು ಯಾರಿಗೂ ತಿಳಿಯಲಿಲ್ಲ.ಅಮೆರಿಕೆಯ ಪಾಲಾದವೇ ರಹಸ್ಯ ಪತ್ರಗಳು ?ನಿಕೋಲ ಟೆಸ್ಲಾ ತನ್ನ ಯೋಜನೆ ಮತ್ತು ಯೋಚನೆಗಳನ್ನು ಯಾರಲ್ಲೂ ಹೇಳಿಕೊಳ್ಳುತ್ತಿರಲಿಲ್ಲ. ಮನಸಿನಲ್ಲೇ ಇಟ್ಟುಕೊಂಡು ಕೆಲಸ ಮಾಡುತ್ತಿದ್ದರು. ಅವರು ಯಾವುದಾದರೂ ಯಾಂತ್ರವನ್ನು ತಯಾರಿಸ ತೊಡಗಿದರೆ ಅದು ಪೂರ್ತಿಯಾಗುವ ವರೆಗೂ ಯಾರಿಗೂ ಅದು ಏನು ಕೆಲಸ ಮಾಡಲಿದೆ ಎಂದು ಗೊತ್ತಾಗುತ್ತಿರಲಿಲ್ಲ. ಆದರೆ ಟೆಸ್ಲಾ ವಯಸ್ಸಾದ ನಂತರ ನ್ಯೂಯಾರ್ಕ್‌‌ನ 'ನ್ಯೂಯಾರ್ಕರ್‌ ಹೋಟೆಲ್‌'ನ ೩೩೨೭ನೆ ನಂಬರಿನ ಕೋಣೆಯಲ್ಲಿ ಕುಳಿತು ತನ್ನ ಎಲ್ಲಾ ಪ್ರಯೋಗಗಳ ಬಗ್ಗೆ ಮತ್ತು ಥಿಯರಿಗಳ ಬಗ್ಗೆ ಕಾಗದಗಳಲ್ಲಿ ಬರೆದಿಡುತ್ತಿದ್ದರು.  ೧೯೪೩ ಜನವರಿ ೭ ರಂದು ಅವರು ತೀರಿಕೊಂಡರು. ಆದರೆ ಅದು ಜಗತ್ತಿಗೆ ತಿಳಿದುದು ಎರಡು ದಿನಗಳ ನಂತರ. ಏಕೆಂದರೆ ಅವರ ಕೋಣೆಯ ಬಾಗಿಲಿಗೆ 'ತೊಂದರೆ ಕೊಡಬೇಡಿ' ಎಂಬ ಫಲಕವನ್ನು ನೇತು ಹಾಕಿದ್ದರಿಂದ ಅವರ ಸೇವೆಗೆ ಇದ್ದ ಹೋಟೆಲ್‌ನ ಆಳು ಒಳಗೆ ಹೋಗಿರಲಿಲ್ಲ. ಎರಡು ದಿನಗಳೂ ಹೊರಗೆ ಬಾರದ್ದರಿಂದ ಅನುಮಾನದಿಂದ ಬಾಗಿಲು ಒಡೆದು ನೋಡಿದಾಗಲೇ ಟೆಸ್ಲಾ ಸಾವಿಗೆ ಇಡಾಗಿರುವುದು ಕಂಡು ಬಂತು. ಈ ಸಾವಿನ ಮೇಲೂ ಅನೇಕ ಅನುಮಾನಗಳು, ವದಂತಿಗಳು ಹುಟ್ಟಿಕೊಂಡವು.
ಈ ನಡುವೆ ಟೆಸ್ಲಾ ಕೊನೆಯದಾಗಿ ವಾಸವಿದ್ದ ೩೩೨೭ನೇ ಕೋಣೆಯನ್ನು ಅಮೆರಿಕಾದ ಗುಪ್ತಚರ ಇಲಾಖೆಯಾದ FBI ನವರು ತಮ್ಮ ವಶಕ್ಕೆ ಪಡೆದು ಆ ಕೋಣೆಯಲ್ಲಿ ಸಿಕ್ಕ ಎಲ್ಲಾ ಕಾಗದ ಪತ್ರಗಳನ್ನೂ ಕೊಂಡೊಯ್ದರು.  ನಂತರದ ದಿನಗಳಲ್ಲಿ ಅವುಗಳನ್ನು ನ್ಯೂಯಾರ್ಕ್‌‌ನ ವಸ್ತು ಪ್ರದರ್ಶನದಲ್ಲಿ ಇಡಲಾಯಿತಾದರೂ ಅದರಲ್ಲಿ ಟೆಸ್ಲಾ ಬಹುವಾಗಿ ಪ್ರೀತಿಸಿದ್ದ 'ಟೆಸ್ಲಾ ಕಾಯಿಲ್‌ ಮುಖಾಂತರ ಜಗತ್ತಿಗೆಲ್ಲಾ ವಯರ್‌ ಇಲ್ಲದೇ ಉಚಿತ ವಿದ್ಯುತ್‌' ಒದಗಿಸುವ ಥಿಯರಿಯಾಗಲೀ, ವಿದ್ಯುತ್‌ ಬೀಮ್‌ ಮೂಲಕ ಕ್ಷಣದಲ್ಲಿ ವಿಮಾನಗಳನ್ನು ಸುಟ್ಟು ಹಾಕುವ ಮತ್ತು ನಿರ್ದಿಷ್ಟ ಜಾಗದಲ್ಲಿ ನೆಲನಡುಕದ ಭಾರೀ ಅಲೆಗಳನ್ನು ಎಬ್ಬಿಸಿ ನಿರ್ದಿಷ್ಟ ಪ್ರದೇಶವನ್ನೇ ನಾಶ ಮಾಡಬಲ್ಲ ವಿದ್ವಂಸಕ ಕೃತ್ಯದ ಥಿಯರಿಗಳಾಗಲೀ ಇರಲಿಲ್ಲ. ಅವುಗಳನ್ನೆಲ್ಲಾ FBI ನುಂಗಿ ಹಾಕಿತು ಎಂದೇ ಜನ ಆಡಿಕೊಂಡರು. ಆದರೆ ಅಮೆರಿಕ ಸರ್ಕಾರ ಇದನ್ನು ಅಲ್ಲಗಳೆಯಿತಾದರೂ 'ಏರಿಯಾ-೫೧' ಎಂಬ ಅದರ ರಹಸ್ಯ ಪ್ರಯೋಗಶಾಲೆಯಲ್ಲಿ ಟೆಸ್ಲಾರ ಎಲ್ಲಾ ಥಿಯರಿಗಳನ್ನೂ ಪ್ರಯೋಗಕ್ಕೆ ಒಳಪಡಿಸಲಾಗುತ್ತಿದೆ ಎಂದೇ ಅನೇಕರು ಹೇಳುತ್ತಾರೆ!
... ಮುಂದೆ ಓದಿ


ಅಲ್ಲಮನ ವಚನಗಳ ಓದು – 11ನೆಯ ಕಂತು
ಹೊನಲು - ಸೋಮವಾರ ೦೯:೩೦, ಮಾರ್ಚ್ ೨೦, ೨೦೧೭

– ಸಿ.ಪಿ.ನಾಗರಾಜ. ಬೆಟ್ಟಕ್ಕೆ ಚಳಿಯಾದಡೆ ಏನ ಹೊದಿಸುವರಯ್ಯ ಬಯಲು ಬತ್ತಲೆಯಾದಡೆ ಏನನುಡಿಸುವರಯ್ಯ ಭಕ್ತನು ಭವಿಯಾದಡೆ ಏನನುಪಮಿಸುವೆನಯ್ಯ ಗುಹೇಶ್ವರ. ಒಳ್ಳೆಯ ನಡೆನುಡಿಗಳಿಂದ ತನಗೆ ಮತ್ತು ಸಹಮಾನವರಿಗೆ ಒಳಿತನ್ನು ಮಾಡಬೇಕಾದ ಹೊಣೆಯನ್ನು ಹೊತ್ತಿರುವ ವ್ಯಕ್ತಿಗಳೇ ಕೆಟ್ಟಹಾದಿಯನ್ನು ಹಿಡಿದು, ಸಮಾಜವನ್ನು ಹಾಳು ಮಾಡತೊಡಗಿದಾಗ, ಅವರನ್ನು ತಡೆಯಲು/ತಿದ್ದಿ ಸರಿಪಡಿಸಲು ಯಾರಿಂದಲೂ ಆಗುವುದಿಲ್ಲವೆಂಬ ಸಂಗತಿಯನ್ನು  ಎರಡು ರೂಪಕ/ಶಬ್ದಚಿತ್ರಗಳ ಮೂಲಕ ಅಲ್ಲಮನು ಈ ವಚನದಲ್ಲಿ ಹೇಳಿದ್ದಾನೆ.... Read More ›... ಮುಂದೆ ಓದಿ


ಹೋರಾಟದ ಮೇಲ್ಪಂಕ್ತಿ ಹಾಕಿಕೊಟ್ಟ ಮಾರುತಿ ಸುಜುಕಿ ಕಾರ್ಮಿಕರು
ಕನ್ನಡ ಜಾನಪದ karnataka folklore - ಸೋಮವಾರ ೦೨:೧೦, ಮಾರ್ಚ್ ೨೦, ೨೦೧೭

-ಶಿವಸುಂದರ್
suzuki employees strike ಗೆ ಚಿತ್ರದ ಫಲಿತಾಂಶ
ಮಾರುತಿ ಸುಜುಕಿ ಕಾರ್ಮಿಕರು ದಮನಕಾರಿ ಆಡಳಿತ ವರ್ಗ ಮತ್ತು ಅವರೊಂದಿಗೆ ಕೈಜೋಡಿಸಿದ ಪ್ರಭುತ್ವವನ್ನು ವೀರೋಚಿತವಾಗಿ ಎದುರಿಸಿದ್ದಾರೆ.
ಗುತ್ತಿಗೆ ಕಾರ್ಮಿಕರ ನೇಮಕಾತಿ ವಿಷಯದಲ್ಲಿ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ (ಎಂಎಸ್ಐಎಲ್)  ಕಾರ್ಮಿಕರು ಮತ್ತು ಮೇಲುಸ್ತುವಾರಿ ಸೂಪರ್ವೈಸರ್ ಒಬ್ಬರ ನಡುವೆ ನಡೆದ ಘರ್ಷಣೆ ಮತ್ತು ಘರ್ಷಣೆಯಲ್ಲಿ ೨೦೧೨ರಲ್ಲಿ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಜನರಲ್ ಮ್ಯಾನೇಜರ್ ಒಬ್ಬರು ಸಾವನ್ನಪ್ಪಿದ ಪ್ರಕರಣ ಕೋರ್ಟಿನ ಮೆಟ್ಟಿಲನ್ನೇರಿದ್ದು ದೇಶದೆಲ್ಲೆಡೆ ಸುದ್ದಿಯಾಗಿತ್ತು. ಆದರೆ ಎಲ್ಲರ ಗಮನವು ಘರ್ಷಣೆ ಮತ್ತು ಕೋರ್ಟು ಕೇಸಿನ ಮೇಲೆ ಮಾತ್ರ ಕೇಂದ್ರೀಕೃತವಾಗಿದ್ದರಿಂದ ಕಾರ್ಮಿಕರು ಎಂಥಾ ಶೋಚನೀಯ ಪರಿಸ್ಥಿತಿಯಲ್ಲಿ ಅಲ್ಲಿ ಕೆಲಸ ಮಾಡುತ್ತಿದ್ದಾರೆಂಬ ವಾಸ್ತವ ಸಂಗತಿಗಳ ಮೇಲೆ ಮತ್ತು ಅವರು ಯೂನಿಯನ್ ಕಟ್ಟಿಕೊಳ್ಳುವ ಮೂಲಭೂತ ಹಕ್ಕಿಗಾಗಿಯೂ ಹೋರಾಡಲೇಬೇಕಾದ ಪರಿಸ್ಥಿತಿ ಇತ್ತೆಂಬ ಮೂಲಭೂತ ವಿಷಯಗಳ ಮೇಲೆ ಸಮಾಜದ ಗಮನ ಹರಿಯಲೇ ಇಲ್ಲ. ಇದೇ ಮಾರ್ಚ್ ೧೦ರಂದು ಗುರ್ಗಾಂನ  ಜಿಲ್ಲಾ ಕೋರ್ಟೊಂದು ದೇಶದ ಅತಿ ದೊಡ್ಡ ಕಾರು ಉತ್ಪಾದಕನಾದ ಮಾರುತಿ ಸುಜುಕಿಯ ೧೧೭ ಕಾರ್ಮಿಕರನ್ನು ದೋಷಮುಕ್ತರನ್ನಾಗಿ ಖುಲಾಸೆ ಮಾಡಿತು. ಉಳಿದ ೩೧ ಜನ ಕಾರ್ಮಿಕರನ್ನು ಕೊಲೆ, ಕೊಲೆ ಪ್ರಯತ್ನ, ದೊಂಬಿ, ಖಾಸಗಿ ಆಸ್ತಿಗೆ ಹಾನಿ ಇತ್ಯಾದಿ ಆರೋಪಗಳಡಿ ಶಿಕ್ಷೆಗೆ ಗುರಿಪಡಿಸಿತು. ಲೇಖನವು ಅಚ್ಚಿಗೆ ಹೋಗುವ ವೇಳೆಗೆ ಶಿಕ್ಷೆಯ ಪ್ರಮಾಣವನ್ನು ಮಾರ್ಚ್ ೧೮ರಂದು ಘೊಷಿಸಲಾಗುವುದೆಂದು ತಿಳಿದುಬಂದಿದೆ. ಅತ್ಯಂತ ಬಲಿಷ್ಠ ಬಹುರಾಷ್ಟ್ರೀಯ ಕಂಪನಿ ಮತ್ತು ಅದರ ಜೊತೆಗೆ ಯಾವುದೇ ಮುಚ್ಚುಮರೆಯಿಲ್ಲದೆ ಬಹಿರಂಗವಾಗಿ ಕೈಜೋಡಿಸಿದ ಪ್ರಭುತ್ವದ ವಿರುದ್ಧ ಅತ್ಯಂತ ಕಷ್ಟದ ಸಮಯದಲ್ಲೂ ವೀರೋಚಿತವಾಗಿ ಹೋರಾಟವನ್ನು ಮುನ್ನಡೆಸಿದ್ದ ಮಾರುತಿ ಸುಜುಕಿ ಕಾರ್ಮಿಕರ ಸಂಘಟನೆ (ಎಂಎಸ್ಡಬ್ಲ್ಯೂಯು) ಇಡೀ ನಾಯಕತ್ವ ಇದೀಗ ಶಿಕ್ಷೆಗೆ ಗುರಿಯಾಗಿದೆ.
suzuki employees strike ಗೆ ಚಿತ್ರದ ಫಲಿತಾಂಶ
ಘರ್ಷಣೆಯ ಇತಿಹಾಸ ೨೦೧೧ರಿಂದ ಪ್ರಾರಂಭವಾಗುತ್ತದೆ. ಆಗ ಮಾರುತಿ ಸುಜುಕಿ ಕಾರ್ಮಿಕರು ಕಾರ್ಮಿಕ ಸಂಘಟನೆ ಮಾಡಿಕೊಳ್ಳಲು ನಿರಂತರವಾಗಿ ಪ್ರಯತ್ನಿಸುತ್ತಾ ಸತತ ದಮನಕ್ಕೆ ಗುರಿಯಾಗುತ್ತಿದ್ದರು. ಕೆಲಸದಿಂದ ವಜಾ ಆಗುತ್ತಿದ್ದರು. ಅವರನ್ನು ಮೂಲಭೂತ ಹಕ್ಕುಗಳಿಗಾಗಿ ಹೋರಾಡುತ್ತಿರುವ ಕಾರ್ಮಿಕರನ್ನಾಗಿ ಕಾಣದೆ ಕಂಪನಿಯನ್ನು ಹಾಳುಮಾಡಲು ಪಣತೊಟ್ಟಿರುವ ಶತ್ರುಗಳೆಂಬಂತೆ ಕಾಣಲಾಗುತ್ತಿತ್ತು. ತಾವು ಕೆಲಸ ಮಾಡುತ್ತಿದ್ದ ಹೀನಾಯ ಪರಿಸ್ಥಿತಿಗಳ ವಿರುದ್ಧ ಅದೇ ವರ್ಷ ಕಾರ್ಮಿಕರು ಮೂರು ಮುಷ್ಕರಗಳನ್ನು ಮಾಡಿದ್ದರು. ಆದರೆ ಆಡಳಿತ ವರ್ಗವು ಯಾವುದೇ ಸಂಧಾನ ಮಾತುಕತೆ ನಡೆಸುವ ಮೊದಲು ಕಾರ್ಮಿಕ ಸಂಘಟನೆಯುಕಾರ್ಮಿಕ ಕಲ್ಯಾಣ ಮತ್ತು ಕುಂದುಕೊರತೆ ನಿವಾರಣಾ ಸಮಿತಿಯನ್ನು ರಚಿಸಿಕೊಳ್ಳಬೇಕೆಂದು ಶರತ್ತು ಹಾಕಿತ್ತು. ಕ್ರಮವು ಒಂದು ಕಾರ್ಮಿಕ ಸಂಘಟನೆಯ ನೈಜ ಸ್ವರೂಪವನ್ನು ದುಬಲಗೊಳಿಸುವ ಹುನ್ನಾರವೆಂದು ಕಾರ್ಮಿಕರು ಪರಿಗಣಿಸಿದ್ದರು. ಅಷ್ಟು ಮಾತ್ರವಲ್ಲದೆ ಕಾರ್ಮಿಕ ನಾಯಕರ ಮೇಲೆ ಆಡಳಿತ ವರ್ಗವು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಸುಳ್ಳು ಮೊಕದ್ದಮೆಗಳನ್ನು ದಾಖಲಿಸಲು ಪ್ರಾರಂಭಿಸಿದರು. ಕಾರ್ಖಾನೆಯು ಪ್ರತಿ ೫೦ ಸೆಕೆಂಡಿಗೆ ಒಂದು ಹೊಸ ಕಾರನ್ನು ಉತ್ಪಾದಿಸುತ್ತಿತ್ತು; ಖಾಯಂ ಕೆಲಸಗಾರರಿಗೆ ಹೋಲಿಸಿದಲ್ಲಿ ಗುತ್ತಿಗೆ ಕಾರ್ಮಿಕರಿಗೆ ಅತ್ಯಂತ ಕಡಿಮೆ ಸಂಬಳವನ್ನು ನೀಡಲಾಗುತ್ತಿತ್ತು (ಇವರನ್ನು ಖಾಯಂಗೊಳಿಸುವುದು ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಪ್ರಮುಖ ಬೇಡಿಕೆಗಳಲ್ಲಿ ಒಂದಾಗಿತ್ತು.); ಎಲ್ಲಾ ಕಾರ್ಮಿಕರು ಎಂಥದೇ ದೈಹಿಕ ಮತ್ತು ಮಾನಸಿಕ ಪರಿಸ್ಥಿತಿಯಲ್ಲಿದ್ದರೂ ಉತ್ಪಾದನಾ ಗುರಿಗಳನ್ನು ಮುಟ್ಟಲೇಬೇಕಿತ್ತು; ಮತ್ತು ಪ್ರಭುತ್ವವು ತೋರಿಕೆಗೂ ಸಹ ಒಂದು ನಿಷ್ಪಕ್ಷಪಾತಿ ಮಧ್ಯಸ್ತಿಕೆದಾರನ ಪಾತ್ರ ವಹಿಸಲೇ ಇಲ್ಲ. ಸ್ಥಳೀಯ ಪೊಲೀಸರಂತೂ ಬಹಿರಂಗವಾಗಿಯೇ ಆಡಳಿತವರ್ಗದ ಪರ ವಹಿಸಿದ್ದರು
suzuki employees strike ಗೆ ಚಿತ್ರದ ಫಲಿತಾಂಶ
ಜಿಲ್ಲಾ ನ್ಯಾಯಾಲಯದಲ್ಲಿ ನಡೆದ ವಿಚಾರಣೆಯುದ್ದಕ್ಕೂ ಕಾರ್ಮಿಕರ ಪರ ವಕೀಲರು ಹೇಗೆ ೨೦೧೨ರ ಜುಲೈ ೧೮ರ ಘರ್ಷಣೆಯ ಪ್ರಕರಣದಲ್ಲಿ ನಡೆದಿರುವ ಆರೋಪಿಗಳ ಪತ್ತೆ ಹಚ್ಚುವ ವಿಧಿ ವಿಧಾನಗಳು ದೋಷಪೂರಿತವಾಗಿವೆ ಮತ್ತು ಪ್ರಮಾದಗಳಿಂದ ಕೂಡಿವೆ ಎಂಬುದನ್ನೂ, ಹೇಗೆ ಶಸ್ತಾಸ್ತ್ರಗಳನ್ನು ತಮ್ಮ ಕಕ್ಷಿದಾರರ ಸುಫರ್ದಿಯಲ್ಲಿದ್ದಂತೆ ತೋರಿಸಲು ಕುತಂತ್ರದಿಂದ  ತಂದಿರಿಸಲಾಗುತ್ತಿದೆಯೆಂದೂ, ಪೊಲೀಸರು ಹೇಗೆ ಸಾಕ್ಷಿಗಳನ್ನು ಸೃಷ್ಟಿಸುತ್ತಿದ್ದಾರೆಂಬುದನ್ನೂ, ಮತ್ತು ತನಿಖಾಧಿಕಾರಿಯೂ ಯಾವುದೇ ಪೂರಕ ಸಾಕ್ಷ್ಯಗಳಿಲ್ಲದಿದ್ದರೂ  ಕೇವಲ ಮೌಖಿಕ ಹೇಳಿಕೆಯನ್ನು ಆಧರಿಸಿ ದೋಷಾರೋಪ ಮಾಡುತ್ತಿದ್ದಾರೆಂಬುದನ್ನೂ ಸಮರ್ಥವಾಗಿ ನಿರೂಪಿಸುತ್ತಾ ಹೋದರು. ಇಲ್ಲಿ ಗಮನಿಸತಕ್ಕ ವಿಷಯವೆಂದರೆ ೨೦೧೩ರಲ್ಲಿ  ನ್ಯಾಯಾಂಗ ಬಂಧನದಲ್ಲಿದ್ದ ಕಾರ್ಮಿಕರ ಜಾಮೀನು ಅಹವಾಲನ್ನು ತಿರಸ್ಕರಿಸುತ್ತಾ ಪಂಜಾಬ್ ಮತ್ತು ಹರ್ಯಾಣ ಉಚ್ಚ ನ್ಯಾಯಾಲಯವು ಬಗೆಯಲ್ಲಿ ಕಾರ್ಮಿಕ ಅಶಾಂತಿ ಪಸರಿಸಿದರೆ ವಿದೇಶಿಯರು ಬಂಡವಾಳ ಹೂಡಲು ಹಿಂದೆ ಸರಿಯಬಹುದೆಂದು ಬಹಿರಂಗವಾಗಿ ಟಿಪ್ಪಣಿ ಮಾಡಿತ್ತು. ಇದಕ್ಕಿಂತ ಹೆಚ್ಚಿನ ಉಲ್ಲೇಖಾರ್ಹ ಅಂಶವೊಂದಿದೆಕಾರ್ಮಿಕ ಸಂಘmನೆಯನ್ನು ಮಾಡಿಕೊಳ್ಳಲು ಅವಕಾಶ ಕೊಡಬೇಕೆಂಬ ಕಾರ್ಮಿಕರ ಬೇಡಿಕೆಗೆ ಪ್ರತಿಕ್ರಿಯಿಸುತ್ತಾ ಕಂಪನಿಯ ಅಧ್ಯಕ್ಷರು ಕಾರ್ಮಿಕರು ಯಾವ ಗಣನಾರ್ಹ ಬೇಡಿಕೆಯನ್ನೂ ಮುಂದಿಟ್ಟಿಲ್ಲವೆಂದೂ ಯಾವುದೇ ಬಗೆಯ ರಾಜಿ ಸಂಧಾನ ಸಾಧ್ಯವಿಲ್ಲವೆಂದು ಘೊಷಿಸಿದರು.
suzuki employees strike ಗೆ ಚಿತ್ರದ ಫಲಿತಾಂಶ
ಮಾರುತಿ ಕಾರ್ಮಿಕರ ಸಂಘಟನೆಯ ಹೋರಾಟ ದೇಶದೆಲ್ಲೆಡೆ ಕಾರ್ಮಿಕ ಹೋರಾಟಗಳು ಇಳಿಮುಖದಲ್ಲಿದ್ದಾಗ ಸಂಭವಿಸಿದ್ದು ಅತ್ಯಂತ ಮಹತ್ವದ್ದಾಗಿದೆ. ಬೇರೆಲ್ಲಾ ಸರ್ಕಾರಗಳಿಗಿಂತ ಈಗಿನ ಎನ್ಡಿಎ ಸರ್ಕಾರವು ಪ್ರಮುಖ ಕಾರ್ಮಿಕ ಸುಧಾರಣೆಗಳನ್ನು ತರುವ ಮೂಲಕ ಹೆಚ್ಚೆಚ್ಚು ವಿದೇಶಿ ಬಂಡವಾಳವನ್ನು ಆಕರ್ಷಿಸಲು ತನ್ನೆಲ್ಲಾ ಗಮನವನ್ನು ಕೇಂದ್ರೀಕರಿಸಿರುವ ಹಿನ್ನೆಲೆಯಲ್ಲೂ ಹೋರಾಟ ಮತ್ತಷ್ಟು ಮಹತ್ವವನ್ನು ಪಡೆದುಕೊಳ್ಳುತ್ತದೆ. ಭಾರತದ ಕೈಗಾರಿಕೋದ್ಯಮಿಗಳು ಸಹ ಭಾರತದ ಕಾರ್ಮಿಕ ಕಾನೂನುಗಳಿಂದಾಗಿಯೇ ಭಾರತ ಹೆಚ್ಚು ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಆರೋಪಿಸುತ್ತಾರೆ. ಆದರೆ ವಾಸ್ತವವೆಂದರೆ ಉದ್ಯಮಿಗಳು ಕಾರ್ಮಿಕ ಕಾನೂನನ್ನು ಪಾಲನೆ ಮಾಡುವುದಕ್ಕಿಂತ ಉಲ್ಲಂಘನೆ ಮಾಡುವುದೇ ಹೆಚ್ಚು. ಹೀಗಾಗಿಯೇ ಉದ್ಯೋಗಗಳಲ್ಲಿ ಗುತ್ತಿಗೆ ಕಾರ್ಮಿಕರ ಸಂಖ್ಯೆಯೇ ಪ್ರಧಾನವಾದ ಬಗೆಯಾಗುತ್ತಾ ಹೋಗುತ್ತಿದೆ. ಸರ್ಕಾರದ ಮತ್ತು ಕೈಗಾರಿಕೋದ್ಯಮಿಗಳ ಧೋರಣೆಯ ಕಾರಣದಿಂದಾಗಿಯೂ ಎಂಎಸ್ಐಎಲ್ ಕಾರ್ಮಿಕರ ಹೋರಾಟವನ್ನು ಇನ್ನಷ್ಟು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ.
suzuki employees strike ಗೆ ಚಿತ್ರದ ಫಲಿತಾಂಶ
ನ್ಯಾಯಯುತವಾದ ಕೆಲಸದ ಅವಧಿಯನ್ನು ಮತ್ತು ತಮ್ಮ ಶ್ರಮಕ್ಕೆ ತಕ್ಕ ಪ್ರತಿಫಲವನ್ನು ಕೇಳುವ ಕಾರ್ಮಿಕರ ಬೇಡಿಕೆಗಳ ಮೇಲೆ  ವಿದೇಶೀ ಹೂಡಿಕೆಯನ್ನು ಹಿಮ್ಮೆಟ್ಟಿಸುತ್ತಿರುವ ಆರೋಪವನ್ನು ಹೊರಿಸಲು ಸಾಧ್ಯವಿಲ್ಲ. ಹೀಗಿದ್ದರೂ ಸುಧಾರಣೆ ಆಧಾರಿತ ಕಾರ್ಮಿಕ ಕಾನೂನಿನ ತಿದ್ದುಪಡಿಗಳೆಲ್ಲವೂ ಕಾರ್ಮಿಕರ ಹಕ್ಕುಗಳನ್ನು ಮತ್ತು ಕಾರ್ಮಿಕ ಕಲ್ಯಾಣ ಕ್ರಮಗಳನ್ನು ಕಡಿತಗೊಳಿಸುವ ಉದ್ದೇಶವನ್ನೇ ಹೊಂದಿವೆ. ಇದರ ಅರ್ಥ ಬದಲಾಗುತ್ತಿರುವ ಸಂದರ್ಭ ಮತ್ತು ಪ್ರಕ್ರಿಯೆಗಳಿಗೆ ತಕ್ಕ ಹಾಗೆ ಕಾರ್ಮಿಕ ಕಾನೂನುಗಳಲ್ಲಿ ತಿದ್ದುಪಡಿ ಬರಬಾರದೆಂಬುದಲ್ಲ. ಆದರೆ ಸುರಳೀತ ಉತ್ಪಾದನಾ ಪ್ರಕ್ರಿಯೆಯ ಹೊರೆಯನ್ನು ಅಸಂಘಟಿvರಾದ, ಅವಧಿಗಿಂತ ಹೆಚ್ಚು ದುಡಿಯು ಆದರೆ ಎಲ್ಲರಿಗಿಂತ ಕಡಿಮೆ ಪ್ರತಿಫಲ ಪಡೆಯುವ ಕಾರ್ಮಿಕರ ಮೇಲೆ ಹೊರಿಸುವುದನ್ನು ಒಪ್ಪಲಾಗದು. ಇತ್ತೀಚೆಗೆ ಬ್ಲೂಮ್ಬರ್ಗ್ ಎಂಬ ಪತ್ರಿಕೆಯೊಂದು ವರದಿ ಮಾಡಿದಂತೆ ಮಾರುತಿ ಕಂಪನಿಯಲ್ಲಿ ೨೦೧೩-೧೪ರಲ್ಲಿ ೬೫೭೮ ಗುತ್ತಿಗೆ ಕಾರ್ಮಿಕರಿದ್ದರು. ಆದರೆ ಅವರ ಸಂಖ್ಯೆ ೨೦೧೬ರಲ್ಲಿ ೧೦,೬೨೬ಕ್ಕೆ ಏರಿತ್ತು. ಈಗಾಗಲೇ ಎಲ್ಲಾ ಕಡೆಯಿಂದಲೂ ದಾಳಿಗೆ ಗುರಿಯಾಗಿ ನಿತ್ರಾಣವಾಗಿರುವ ಭಾರತದ ಕಾರ್ಮಿಕ ಸಂಘಟನೆಗಳು, ವಿದ್ಯಮಾನಗಳನ್ನು, ಅತ್ಯಗತ್ಯವಾಗಿ  ಎದುರಿಸಲೇ ಬೇಕಾಗಿದೆ.
ಕಾರ್ಮಿಕರು ಎದುರಿಸುತ್ತಲೇ ಇರುವ ಅನ್ಯಾಯದ ಇತಿಹಾಸಕ್ಕೆ ಸೇರುತ್ತಿರುವ ಮತ್ತೊಂದು ಸಂಗತಿಯೆಂದರೆ ನಿರಪರಾಧಿಗಳಾಗಿದ್ದರೂ ವರ್ಷ ಜೈಲಲ್ಲಿ ಕೊಳೆಯಬೇಕಾಗಿ ಬಂದ ೧೧೭ ದೋಷಮುಕ್ತ ಕಾರ್ಮಿಕರ ಹಕ್ಕುಗಳ ಉಲ್ಲಂಘನೆಯ ಪ್ರಶ್ನೆ. ಅವರ ಮೇಲೆ ಹೊರಿಸಲಾಗಿದ್ದ ಯಾವೊಂದು ಅಪರಾಧವೂ ಸಾಬೀತಾಗಲಿಲ್ಲ. ಸತ್ಯವೇ  ತಮಗೆ ಚಿತ್ರಹಿಂಸೆ ನೀಡಲೆಂದೇ ಸುಳ್ಳು ಮೊಕದ್ದಮೆಯನ್ನು ಹೂಡಲಾಯಿತೆಂಬ ಕಾರ್ಮಿಕರ ಪ್ರತಿಪಾದನೆಗೆ ಪುಷ್ಟಿಯನ್ನು ಒದಗಿಸುತ್ತದೆ. ಮತ್ತೊಂದು ಗಮನಾರ್ಹ ಸಂಗತಿಯೆಂದರೆ, ಅಲ್ಲಲ್ಲಿ ಕೆಲವು ಅಲ್ಪ ಸ್ವಲ್ಪ ಏರಿಳಿತಗಳಿದ್ದರೂ, ೨೦೧೧ರ ನಂತರದಲ್ಲಿ ಅದರಲ್ಲೂ ವಿಶೇಷವಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ನೇತ್ರೂತ್ವದಲ್ಲಿ ಎಲ್ಲಾ ಕಾರ್ಮಿಕರು ಅಭೂತಪೂರ್ವ ಐಕ್ಯತೆ ಮತ್ತು ಸೋದರತ್ವನ್ನು ತೋರಿದ್ದಾರೆ. ಅಷ್ಟು ಮಾತ್ರವಲ್ಲ ಪ್ರತಿಕೂಲ ಸಂದರ್ಭದಲ್ಲೂ ಓಕ್ಲಾ-ಫರೀದಾಬಾದ್-ನೋಯಿಡಾ-ಗುರ್ಗಾಂ-ಮನೇಸರ್ ಕೈಗಾರಿಕಾ ಪ್ರಾಂತ್ಯದ ಇತರ ಕಾರ್ಮಿಕರನ್ನು ಮಾತ್ರವಲ್ಲದೆ ಸುತ್ತಮುತ್ತಲಿನ ಬಹುಪಾಲು ಗ್ರಾಮಸ್ಥರನ್ನೂ, ನಾಗರಿಕ ಸಮಾಜದ ಸಂಘಟನೆಗಳನ್ನೂ ಮಾಧ್ಯಮದಲ್ಲಿರುವ ಹಿತೈಷಿಗಳನ್ನೂ ತಲುಪಿ ಒಂದು ಪ್ರಬಲವಾದ ನೆರವಿನ ಜಾಲವನ್ನು ಕಟ್ಟಿಕೊಳ್ಳುವ ಅಸಾಧಾರಣ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.
ಮಾರುತಿ ಸುಜುಕಿ ಕಾರ್ಮಿಕ ಸಂಘಟನೆಯ ಸ್ಪೂರ್ತಿದಾಯಕ ಹೋರಾಟಗಳು ಮತ್ತು ಇತರ ವರ್ಗಗಳಿಗೂ ತಲುಪಿದ ಅವರ ಸಾಮರ್ಥ್ಯವು ಸ್ಪಷ್ಟ ಕಣ್ಣೋಟವುಳ್ಳ ಒಂದು ಕಾರ್ಮಿಕ ಐಕ್ಯತೆ ಏನನ್ನು ಸಾಧಿಸಬಹುದೆಂಬುದಕ್ಕೆ ನಿದರ್ಶನವಾಗಿದೆ. ಬರಲಿರುವ ದಿನಗಳಲ್ಲಿ ಪ್ರಭುತ್ವ ಮತ್ತು ಕೈಗಾರಿಕೋದ್ಯಮಿಗಳು ಹಿಂದಿಗಿಂತಲೂ ಹೆಚ್ಚಿನ ರೀತಿಯಲ್ಲಿ ಜೊತೆಗೂಡಿ ಕಾರ್ಮಿಕರ ಹಕ್ಕುಗಳ ಮೇಲೆ ದಾಳಿ ಮಾಡುವುದು ಸ್ಪಷ್ಟವಾಗಿರುವಾಗ ಮಾರುತು ಸುಜುಕಿ ಕಾರ್ಮಿಕ ಸಂಘಟನೆಯು ಭವಿಷ್ಯದ ಸಂಘರ್ಷಕ್ಕೆ ಮಾದರಿಯೊಂದನ್ನು ಒದಗಿಸಿದೆ.
                                                                        ಕೃಪೆ: Economic and Political Weekly
                                                                                March 18, 2017. Vol.52. No.11
                                                                                                                                
... ಮುಂದೆ ಓದಿ


ಹೊರಲಾಗದಷ್ಟು ನಿರೀಕ್ಷೆಗಳ ಭಾರವನ್ನು ಹೊರಿಸಿರುವ ಉತ್ತರ ಪ್ರದೇಶದ ಫಲಿತಾಂಶ
ಕನ್ನಡ ಜಾನಪದ karnataka folklore - ಸೋಮವಾರ ೦೨:೦೦, ಮಾರ್ಚ್ ೨೦, ೨೦೧೭

 ಅನುಶಿವಸುಂದರ್
uttar pradesh election ಗೆ ಚಿತ್ರದ ಫಲಿತಾಂಶ
ಇಲ್ಲಸಲ್ಲದ ಭರವಸೆಗಳ ಮೂಲಕ ಬಡವರ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ ಏರಿಸಿರುವ ಮೋದಿ ಅನಿವಾರ್ಯವಾಗಿ ಸಂಘಪರಿವಾರದ ಬಹುಸಂಖ್ಯಾತ ದುರಭಿಮಾನಿ ಕಾರ್ಯಸೂಚಿಗೆ ಮರಳಲೇಬೇಕಾಗುತ್ತದೆ.
ಉತ್ತರ ಪ್ರದೇಶ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಸಾಧಿಸಿರುವ ಅದ್ಭುತ ಚುನಾವಣಾ ವಿಜಯವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವೈಯಕ್ತಿಕ ಗೆಲುವೆಂದೇ ಪರಿಗಣಿಸಲಾಗುತ್ತಿದೆ. ಅದು ಬಡವರಲ್ಲಿ ಉತ್ತಮ ನಾಳೆಗಳ ಬಗೆಗಿನ ನಿರೀಕ್ಷೆಗಳನ್ನು ಮುಗಿಲೆತ್ತರಕ್ಕೆ  ಏರಿಸಿದೆ. ಆದರೆ ಆಳುವ ಸರ್ಕಾರದ ಆರ್ಥಿಕ ನೀತಿಗಳನ್ನು ಗಮನಿಸಿದಲ್ಲಿ ಹೊಸ ಉದ್ಯೋಗ ಸೃಷ್ಟಿಯು ದೊಡ್ಡ ಸವಾಲಿನ ವಿಷಯವೇ ಆಗಲಿದೆ. ಹೀಗಾಗಿ ಮೋದಿಯವರಿಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರೆಸ್ಸೆಸ್ಸ್) ಪಾರಂಪರಿಕ ಹಿಂದೂ ಬಹುಸಂಖ್ಯಾತ ಮತ್ತು ತೀವ್ರಗಾಮಿ ರಾಷ್ಟ್ರೀಯವಾದಿ ಕಾರ್ಯಸೂಚಿಯನ್ನು ಆಶ್ರಯಿಸುವುದು ಅನಿವಾರ್ಯವಾಗಲಿದೆ. ೨೦೧೯ರ ಸಾರ್ವತ್ರಿಕ ಚುನಾವಣೆಗಳಲ್ಲಿ ಭಾರತದ ಎರಡನೇ ಗಣರಾಜ್ಯದ ಏಕಮೇವಾದ್ವಿತೀಯ ನಾಯಕನಾಗಿ ಹೊರಹೊಮ್ಮುತ್ತೇನೆಂಬ ಆತ್ಮವಿಶ್ವಾದಲ್ಲಿ ಮೋದಿಯವರಿದ್ದಾರೆ. ಆದರೆ ಅತ್ಮವಿಶ್ವಾಸ ನೆಲೆನಿಂತಿರುವುದು, ಅವರ ಸೈದ್ಧಾಂತಿಕ ಯಜಮಾನಿಕೆಯ ಪ್ರಭಾವದ ವಿರುದ್ಧದ ಪ್ರತಿರೋಧದ ನೆಲೆಗಳನ್ನು ಗುರುತಿಸಿ ಒಂದಾಗಿ ಹೋರಾಡಲಾಗದಷ್ಟು ದಿಕ್ಕೆಟ್ಟು ಚೆಲ್ಲಾಪಿಲ್ಲಿಯಾಗಿರುವ ವಿರೋಧಪಕ್ಷಗಳ ದೌರ್ಬಲ್ಯದ ನೆಲೆಯ ಮೇಲೆ.  
ಪ್ರತಿ ಆರು ಭಾರತೀಯರಲ್ಲಿ ಒಬ್ಬರು ವಾಸ ಮಾಡುವ ಭಾರತದ ಅತ್ಯಂತ ಜನಸಾಂದ್ರಿತ ರಾಜ್ಯವಾದ ಉತ್ತರ ಪ್ರದೇಶದಲ್ಲಿ ಬಿಜೆಪಿಯು ಶೇ.೮೦ರಷ್ಟು ಶಾಸನಾಸಭಾ ಕ್ಷೇತ್ರಗಳನ್ನು ಗೆದ್ದುಕೊಂಡಿದೆ. ಉತ್ತರಪ್ರದೇಶದ ಬಹಳಷ್ಟು ಮತದಾರರಿಗೆ ಮೋದಿ ಭರವಸೆಯ ಆಶಾಕಿgಣವಾಗಿ ಕಂಡಿದ್ದಾರೆ. ಮೋದಿಯ ಸುತ್ತಾ ಸೃಷ್ಟಿಸಲಾಗಿದ್ದ ರಣೋತ್ಸಾಹಿಯೆಂಬ ಮತ್ತು ಯಾವ ಬಗೆಯ ಸ್ವಜನಹಿತಾಸಕ್ತಿ ಅಥವಾ ಕೌಟುಂಬಿಕ ಹಿತಾಸಕ್ತಿ ಇಲ್ಲದ ನಿಷ್ಕಳಂಕ ರಾಜಕಾರಣಿಯೆಂಬ ಇಮೇಜು ಅಸಂಖ್ಯಾತ ಬಡಜನರ ಮನಗೆದ್ದಿರುವುದು ಸ್ಪಷ್ಟವಾಗಿದೆ. ೧೯೭೧ರಲ್ಲಿ ಬಾಂಗ್ಲಾದೇಶದ ನಿರ್ಮಾಣದ ನಂತರದ ಇಂದಿರಾಗಾಂಧಿಯವರಿಗೆ ದಕ್ಕಿದ್ದ ಜನಪ್ರಿಯತೆಯ ನಂತರದಲ್ಲಿ ಭಾರತದ ರಾಜಕಾರಣದಲ್ಲಿ ಇನ್ಯಾವ ರಾಜಕಾರಣಿಯೂ ಮೋದಿಯವರ ರೀತಿ ಇಡೀ ರಾಜಕಾರಣದ ಮೇಲೆ ಬಗೆಯ ಅಧಿಪತ್ಯವನ್ನು ಸಾಧಿಸಿರಲಿಲ್ಲ. ಅದೇ ರೀತಿ ಯಾವೊಬ್ಬ ಪ್ರಧಾನಮಂತ್ರಿಯೂ ಒಂದು ರಾಜ್ಯ ಮಟ್ಟದ ಚುನಾವಣೆಗಳಲ್ಲಿ ಇಷ್ಟೊಂದು ಸಕ್ರಿಯವಾಗಿ ಮತ್ತು ಅತ್ಯುತ್ಸಾಹದಿಂದ ಪಾಲ್ಗೊಂಡಿರಲಿಲ್ಲ. ಹಾಗೆಯೇ ಬಾರಿ ಬಿಜೆಪಿ ಮಾಡಿದಂತೆ  ಯಾವೊಂದು ಚುನಾವಣಾ ಪಕ್ಷವು ರಾಜ್ಯದ ಐದನೇ ಒಂದರಷ್ಟು ಜನಸಂಖ್ಯೆ ಹೊಂದಿರುವ ಮುಸ್ಲಿಮರನ್ನು ಹೊರಗಿಟ್ಟಿರಲಿಲ್ಲ. ಅದು ಮುಸ್ಲಿಮರಿಗೆ ನೀಡಿದ ಸಂದೇಶ ಸ್ಪಷ್ಟವಾಗಿತ್ತು: ಹೇಗಿದ್ದರೂ ನೀವು ನಮಗೆ ಓಟು ಹಾಕುವುದಿಲ್ಲ ಎಂದಾದ ಮೇಲೆ ಏಕೆ ಒಬ್ಬನೇ ಒಬ್ಬ ಮುಸ್ಲಿಂ ಅಭ್ಯರ್ಥಿಯನ್ನಾದರೂ ನಮ್ಮ ಪಕ್ಷದಿಂದ ಚುನಾವಣೆಗೆ ನಿಲ್ಲಿಸಬೇಕು
ಉಪ್ರ ಚುನಾವಣೆಗಳ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಯಶಸ್ವಿಯಾಗಿ ನಿರ್ವಹಿಸಿದ ಮೋದಿಯವರ ನಿಷ್ಟಾವಂತ ದಳಪತಿಯಾದ ಬಿಜೆಪಿಯ ಅಧ್ಯಕ್ಷ ಅಮಿತ್ ಶಾ ರವರಿಗೆ ಉಳಿದವರಿಗಿಂತ ಹೆಚ್ಚು ಓಟು ಪಡೆದು ಮೊದಲು ಗುರಿಮುಟ್ಟುವ (ಫಸ್ಟ್ ಪಾಸ್ಟ್ ಪೋಸ್ಟ್ ಸಿಸ್ಟಮ್)ವವರು ಗೆಲ್ಲುವ ಭಾರತದ ಚುನಾವಣಾ ವ್ಯವಸ್ಥೆಯ ಹುಚ್ಚಾಟಗಳೆಲ್ಲದರ ಪರಿವಿತ್ತು. ಚುನಾವಣಾ ಪದ್ಧತಿಯಲ್ಲಿ ಗೆದ್ದವರು ಎಲ್ಲವನ್ನೂ ಕೊಂಡೊಯ್ಯುತ್ತಾರೆ ಮತ್ತು ಸೋತವರು ಎಲ್ಲವನ್ನೂ ಕಳೆದುಕೊಳ್ಳುತ್ತಾರೆ.
ಉತ್ತರಾಖಾಂಡ್ ಬಿಜೆಪಿಯ ವಿಜಯವೂ ಸಹ ಉತ್ತರಪ್ರದೇಶದಷ್ಟೇ ನಿರ್ಣಾಯಕವಾಗಿದೆ. ಉತ್ತರಾಖಾಂಡ್ ರಾಜ್ಯವು ಉತ್ತರಪ್ರದೇಶಕ್ಕಿಂತ ಭಿನ್ನ. ೨೦೦೦ದಲ್ಲಿ ಪ್ರತ್ಯೇಕ ರಾಜ್ಯವಾಗಿ ರೂಪುಗೊಂಡ ನಂತರದಲ್ಲಿ ಅದು ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳ ನೇರ ಸೆಣೆಸಾಟದ ಕಣವಾಗಿಯೇ ಮುಂದುವರೆದಿದೆ. ಮತ್ತು  ಪ್ರತಿ ಚುನಾವಣೆಯಲ್ಲೂ ಕಾಂಗ್ರೆಸ್ ಅಥವಾ ಬಿಜೆಪಿ ಪಕ್ಷಗಳು ಒಬ್ಬರಾದ ನಂತರ ಮತ್ತೊಬ್ಬರಂತೆ ಅಧಿಕಾರವನ್ನು ದಕ್ಕಿಸಿಕೊಳ್ಳುತ್ತಾ ಬಂದಿದ್ದಾರೆ.
ಚುನಾವಣೆಗಳು ನಡೆದ ಐದುರಾಜ್ಯಗಳ ಹಿನ್ನೆಲೆ ಬೇರೆಬೇರೆಯಾಗಿದ್ದರೂ ಎಲ್ಲಾ ಫಲಿತಾಂಶಗಳಲ್ಲಿರುವ ಒಂದು ಸಾಮ್ಯತೆಯೇನೆಂದರೆ ಅಧಿಕಾರದಲ್ಲಿದ್ದ ಪಕ್ಷ ಚುನಾವಣೆಯಲ್ಲಿ ಸೋಲುಕಂಡಿದೆ. ಆದರೂ ಮಣಿಪುರದಲ್ಲಿ ಮಾತ್ರ ಅಧಿಕಾರರೂಢ ಪಕ್ಷ ವಿರೋಧಿ ಅಲೆ ಅತ್ಯಂತ ಕಡಿಮೆ ಇತ್ತು. ಅಲ್ಲಿ ಕಾಂಗ್ರೆಸ್ಸಿನ ಮುಖ್ಯಮಂತ್ರಿ ಒಕ್ರಾಂ ಇಬೋಬಿ ಸಿಂಗ್ ಅವರು ಸತತ ಮೂರು ಬಾರಿ ಪೂರ್ಣ ಐದೈದು ವರ್ಷಾವಧಿಗಳ ಕಾಲ ಅಧಿಕಾರದಲ್ಲಿದ್ದರು. ಆದರೆ ಮಣಿಪುರದಲ್ಲಾಗಲೀ ಅಥವಾ ಗೋವಾದಲ್ಲಾಗಲೀ ಕಾಂಗ್ರೆಸ್ ಪಕ್ಷದ ನಾಯಕತ್ವವು (ಅಥವಾ ಅಳಿದುಳಿದಿರುವ ನಾಯಕತ್ವವು) ವಿಜಯದ ದವಡೆಯಿಂದ ಸೋಲನ್ನು ಕಿತ್ತುಕೊಂಡರೆಂದೇ ಹೇಳಬೇಕು! ಏಕೆಂದರೆ ಶತಾಯ ಗತಾಯ ಅಧಿಕಾರವನ್ನು ಪಡೆಯಲು ಅನುಸರಿಸುವ ತಂತ್ರ ಕುತಂತ್ರಗಳನ್ನು ಸ್ವತಃ ಕಾಂಗ್ರೆಸ್ಸಿನಿಂದಲೇ ಕಲಿತು ಅರಗಿಸಿಕೊಂಡಿರುವ  ಬಿಜೆಪಿಯು ರಾಜ್ಯದಲ್ಲಿ ಬಾರಿ ಅನುಸರಿಸಿದ ತಂತ್ರೋಪಾಯಗಳನ್ನು ಎದಿರಿಸುವಲ್ಲಿ  ಕಾಂಗ್ರೆಸ್ ಹೀನಾಯವಾಗಿ ಸೋತಿತು. ಕೇವಲ ತನ್ನ ದೌರ್ಬಲ್ಯ ಮತ್ತು ಅದಕ್ಷತೆಗಳ ಕಾರಣದಿಂದ ಪಡೆದುಕೊಳ್ಳಬಹುದಾಗಿದ್ದ  ಅಧಿಕಾರವನ್ನು ಶೋಚನೀಯವಾಗಿ ಕಳೆದುಕೊಂಡಿತು.
uttar pradesh election ಗೆ ಚಿತ್ರದ ಫಲಿತಾಂಶ
ಪಂಜಾಬಿನಲ್ಲಿ ಎಲ್ಲರೂ ಊಹಿಸಿದಂತೆ ಸತತ ೧೦ ವರ್ಷಗಳ ಕಾಲ ಅಧಿಕಾರದಲ್ಲಿದ್ದ ಶಿರೋಮಣಿ ಅಕಾಲಿ ದಳ-ಬಿಜೆಪಿ ಕೂಟ ಚುನಾವಣೆಯಲ್ಲಿ ಸೋಲೊಪ್ಪಿತು. ಆದರೆ, ಅವು ಆಮ್ ಆದ್ಮಿ ಪಕ್ಷಕ್ಕಿಂತ ಕಡಿಮೆ ಸೀಟುಗಳನ್ನು ಪಡೆದುಕೊಂಡರೂ ಒಂದು ಕೂಟವಾಗಿ ಆಪ್ ಪಕ್ಷಕ್ಕಿಂತ ಹೆಚ್ಚಿನ ಓಟುಗಳನ್ನು ಪಡೆದುಕೊಂಡಿವೆ. ಪಂಜಾಬಿನ ರಾಜಕಾರಣದಲ್ಲಿ ಹೊಸದಾಗಿ ಪ್ರವೇಶ ಮಾಡಿದ್ದ ಆಮ್ಆದ್ಮಿ ಪಕ್ಷ (ಆಪ್)ಕ್ಕೆ ಫಲಿತಾಂಶದಿಂದ ತುಂಬಾ ನಿರಾಶೆಯಾಗಿದೆ. ಕಳೆದೆರಡು ಚುನಾವಣೆಗಳಿಂದ ಅಕಾಲಿದಳ ಮತ್ತು ಬಿಜೆಪಿ ಕೂಟಕ್ಕೆ ಓಟು ಹಾಕುತ್ತಿದ್ದ ಬಹುಪಾಲು ಮತದಾರರು ಬಾರಿ ಆಪ್ ಗಿಂತ ಕಾಂಗ್ರೆಸ್ಗೆ ಓಟು ಹಾಕುವುದು ಉತ್ತಮ ಎಂದು ಭಾವಿಸಲು ಪ್ರಮುಖ ಕಾರಣ ಆಪ್ ಪಕ್ಷ ಮಿಲಿಟೆಂಟ್ಗಳ ನಿಕಟವರ್ತಿಯಾಗಿದೆಯೆಂಬ ಆರೋಪ, ಅದರ ಅನುಭವದ ಕೊರತೆ ಮತ್ತು ಪಕ್ಷದ ಅಧಿಕಾರ ಕೇಂದ್ರ ದೆಹಲಿಯಲ್ಲಿರುವುದು. ಕೂತೂಹಲದ ವಿಷಯವೆಂದರೆ ನೋಟು ನಿಷೇಧದ ವಿಷಯ ಪಂಜಾಬಿನ ಮತದಾರರ ಮೇಲೆ ಯಾವುದೇ ಪರಿಣಾಮ ಬೀರದಿದ್ದದ್ದು. ಆದರೆ ಉತ್ತರ ಪ್ರದೇಶದಲ್ಲಿ ಮಾತ್ರ ಇದು ಭಿನ್ನವಾಗಿತ್ತು. ಯಾವ ನೋಟು ನಿಷೇಧದ ಮೂಲಕ ಆರ್ಥಿಕ ಹೊರೆಯನ್ನು ಸೃಷ್ಟಿಸಿದ ಅಪರಾಧವನ್ನು ಮೋದಿ ಸುಖಾಸುಮ್ಮನೆ ಮೈಮೇಲೆ ಎಳೆದುಕೊಂಡರೆಂದು ಎಣಿಸಲಾಗುತ್ತಿತ್ತೋ ಅದನ್ನು ಮೋದಿ ರಾಜಕೀಯ ಲಾಭವನ್ನಾಗಿಸಿಕೊಂಡರು.
ಇದು ಹೇಗೆ ಸಾಧ್ಯವಾಯಿತು?
ಉತ್ತರಪ್ರದೇಶದಲ್ಲಿ ಮೋದಿ ಮಾಡಿದ ಅಂತಿಮ ಚುನಾವಣಾ ಭಾಷಣದಲ್ಲಿ ತಾನು ತಪ್ಪುಗಳನ್ನು ಮಾಡಿರಬಹುದಾದರೂ ತನ್ನ
ಉದ್ದೇಶಗಳನ್ನು ಅನುಮಾನಿಸಲು ಸಾಧ್ಯವಿಲ್ಲವೆಂಬ ವಿಷಯವನ್ನು ಪ್ರಮುಖವಾಗಿ ಪ್ರಸ್ತಾಪಿಸುತ್ತಿದ್ದರು. ನೋಟು ನಿಷೇಧವು ಕಪ್ಪು ಆರ್ಥಿಕತೆಯ ಮೇಲೆ ಎಳ್ಳಷ್ಟೂ ಪ್ರಭಾವ ಬೀರುವುದಿಲ್ಲ ಅಥವಾ ಭಯೋತ್ಪಾದನೆಗೆ ಒದಗುತ್ತಿರುವ ಹಣಕಾಸು ನೆರವನ್ನೂ ಅಥವಾ ನಕಲಿ ನೋಟು ಬಳಕೆಯನ್ನೂ ತಡೆಗಟ್ಟುವುದಿಲ್ಲ. ಅಲ್ಲದೆ ಭಾರತವು ಅಲ್ಪ ನಗದಿನ (ಲೆಸ್ ಕ್ಯಾಷ್) ಆರ್ಥಿಕತೆಯಾಗಲು ಸಾಕಷ್ಟು ಸಮಯ ಬೇಕು. ಇವೆಲ್ಲಾ ನಿಜವೇ ಆಗಿದ್ದರೂ ತಮ್ಮ ನಿಲುವನ್ನು ಜನರಿಗೆ ತಲುಪಿಸಿ ಒಪ್ಪಿಸುವ ಮೋದಿಯವರ ಸಂವಹನಾ ಚಾತುರ್ಯದ ಮುಂದೆ ಅವರ ವಿರೋಧಿಗಳು ಕಂಗಾಲಾಗಿಬಿಟ್ಟರು. ನೋಟು ನಿಷೇಧದ ವಿರೋಧಿಗಳಿಗೆ ಅದೊಂದು ಬಗೆಯ ಸತ್ಯದ ಸಾಕ್ಷಾತ್ಕಾರದ ಗಳಿಗೆಯೂ ಆಗಿಬಿಟ್ಟಿತ್ತು. ಪ್ರಕ್ರಿಯೆಯಲ್ಲಿ ಪ್ರಧಾನಮಂತ್ರಿಗಳ ಭಾವೋದ್ರೇಕದ ಶೈಲಿಯ ಮಾತುಗಳು ಅದರ ಉತ್ತುಂಗವನ್ನು ತಲುಪಿತ್ತು. ನೋಟುನಿಷೇಧವು ಎಲ್ಲಾ ಬಗೆಯ ವರ್ಗ ವ್ಯತ್ಯಾಸಗಳನ್ನು ಅಳಿಸಿಹಾಕಿ ಬಡವರನ್ನು, ಮಧ್ಯಮವರ್ಗದವರನ್ನು ಮತ್ತು ಕೆಲವು ಶ್ರೀಮಂತರನ್ನೂ ಬ್ಯಾಂಕಿನ ಶಾಖೆಗಳ ಮುಂದೆ ಒಂದೇ ಸಾಲಿನಲ್ಲಿ ನಿಲ್ಲಿಸುವ ಸಮಾನತಾ ಕ್ರಮವಾಗಿಬಿಟ್ಟಿತು. ನೋಟು ನಿಷೇಧದ ವಿನಾಶಕಾರಿ ಆರ್ಥಿಕ ಪ್ರಭಾವಗಳ ಮೇಲೆ ಮಾತ್ರ ಗಮನ ಕೇಂದ್ರೀಕರಿಸಿದ ನಮ್ಮಂಥವರು ಅದರಲ್ಲಿದ್ದ ರಾಜಕೀಯ ಸಂಕೇತ-ಸಂದೇಶಗಳನ್ನು ಗ್ರಹಿಸಲಾಗಲಿಲ್ಲ. ಬಡವರ ಮಟ್ಟಿಗೆ ಬದುಕು ಯಾವಾಗಲೂ ಸಂಕಷ್ಟಗಳಿಂದಲೇ ಕೂಡಿರುತ್ತದೆ. ಆದರೆ ನೋಟುನಿಷೇಧದ ಕ್ರಮದಿಂದ ಶ್ರೀಮಂತರೂ ಕಷ್ಟಗಳನ್ನು ಅನುಭವಿಸುವಂತಾಗಿದೆಯೆಂಬ ಭಾವನೆಗಳನ್ನು ಮೋದಿ ಹುಟ್ಟುಹಾಕಿದರು. ಮತ್ತು ಅವನ್ನು ಇನ್ನಷ್ಟು ಗಟ್ಟಿಯಾಗಿ ಚಾಲ್ತಿಯಲ್ಲಿಟ್ಟರು. ಇದು ಕೃಷಿಯಲ್ಲಿ ಸಮೃದ್ಧವಾಗಿರುವ ರಾಜ್ಯವಾದ ಪಂಜಾಬಿಗಿಂತ ಸಾಪೇಕ್ಷವಾಗಿ ಹಿಂದುಳಿದಿರುವ ಮತ್ತು ಆಶೋತ್ತರಗಳು ಇನ್ನಷ್ಟು ವ್ಯಕ್ತಸ್ವರೂಪದಲ್ಲಿರುವ ಉತ್ತರಪ್ರದೇಶದಲ್ಲಿ ಹೆಚ್ಚು ಫಲಿತಾಂಶಗಳನ್ನು ನೀಡಿತು. ನೋಟುನಿಷೇಧsವು ಶ್ರೀಮಂತರಿಗಿಂತ ಎಷ್ಟೋಪಟ್ಟು ಹೆಚ್ಚು ಬಡವರ ಬದುಕಿನ ಮೇಲೆ ತೀವ್ರ ಪರಿಣಾಮವನ್ನುಂಟುಮಾಡಿದೆ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಕ್ರಮದ ಟೀಕಾಕಾರರು ( ಪತ್ರಿಕೆಗೆ ಅದರ ಬಗ್ಗೆ ಬರೆದ ಹಲವು ಲೇಖಕರನ್ನೂ ಒಳಗೊಂಡಂತೆ) ಗಣನೆಗೆ ತೆಗೆದುಕೊಳ್ಳದೆ ಕಡೆಗಣಿಸಿದ ಪ್ರಮುಖ ಸಂಗತಿಯೆಂದರೆ ಅಸಾಧಾರಣ ಕ್ರಮವನ್ನು ಬಡಜನರ ಹಿತಕ್ಕಾಗಿಯೇ ಜಾರಿಗೆ ತರಲಾಗಿದೆ ಎಂದು ನಂಬಿಸಲು ಅಪಾರ ಶ್ರದ್ಧೆ ಮತ್ತು ಉತ್ಸಾಹದಿಂದ ನಡೆದ ಪ್ರಚಾರ.
ಬಂಡವಾಳಶಾಹಿ ಮೋದಿಯ ನಿರಂಕುಶ ಮಾದರಿ ಮತ್ತು ಸಮಾಜವಾದಿ ಇಂದಿರಾಗಾಂಧಿಯವರ ನಿರಂಕುಶ ಮಾದರಿಗಳ ನಡುವಿನ ಸಾಮ್ಯತೆಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದೆ. ಆದರೆ ಅವುಗಳ ನಡುವೆ ಸಾಕಷ್ಟು ವ್ಯತ್ಯಾಸಗಳಿವೆ. ತನ್ನ ಪಕ್ಷವನ್ನು ಎರಡು ಸಾರಿ ಒಡೆದು, ದೇಶದ ಬಹುಪಾಲು ಬ್ಯಾಂಕಿಂಗ್ ವ್ಯವಸ್ಥೆಯನ್ನು ರಾಷ್ಟ್ರೀಕರಿಸಿದ ಮತ್ತು ರಾಜಪ್ರತಿನಿಧಿಗಳಿಗೆ ರಾಜಧನವನ್ನು ರದ್ದುಮಾಡಿದ, ಕಾಂಗ್ರೆಸ್ ಪಕ್ಷದಲ್ಲಿದ್ದ ಏಕೈಕ ಗಂಡಸಿನ ಜನಪ್ರಿಯತೆಯನ್ನು  ಗರೀಬಿ ಹಠಾವೋ ಕಾರ್ಯಕ್ರಮ ತುತ್ತತುದಿಗೇರಿಸಿತು. ಆದರೆ ಇಂದಿನ ಪ್ರಧಾಮಂತ್ರಿಯ  ಘೋಷಣೆ ಇರುವುದು ಬಡತನವನ್ನು ಅಳಿಸುವ ಬಗ್ಗೆ ಅಲ್ಲ. ಇರುವುದರಲ್ಲೇ ಉತ್ತಮ ಜೀವನದ ಅವಕಾಶಗಳನ್ನು ಕಲ್ಪಿಸಿಕೊಡುವುದರ ಬಗ್ಗೆ. ಯಾವರೀತಿ ಸಂಘಪರಿವಾರದ ರಾಷ್ಟ್ರೀಯತೆಯು ದೇಶದ ಶೇ.೮೦ರಷ್ಟು ಹಿಂದೂಗಳ ಧಾರ್ಮಿಕತೆಯ ಜೊತೆ ತಳುಕುಹಾಕಿಕೊಂಡಿದೆಯೋ ಅದೇ ರೀತಿ ಇತ್ತೀಚಿನ ದಿನಗಳಲ್ಲಿ ಸಂಘಪರಿವಾರದ ಹಿಂದೂತ್ವ ಕಾರ್ಯಸೂಚಿಯನ್ನು ಅತ್ಯಂತ ಚತುರತೆಯಿಂದ  ಅಭಿವೃದ್ಧಿಯ ಜೊತೆ ಬೆಸೆಯಲಾಗುತ್ತಿದೆ. ಬಡವರಿಗೆ ದಾನದ ರೀತಿ ಭತ್ಯೆಗಳನ್ನು ಕೊಡುವ ಬದಲು ಅವರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವುದು ತನ್ನ ಗುರಿಯೆಂದು ಮೋದಿ ಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಹಿಂದಿನ ಸರ್ಕಾರವು ಜಾರಿಗೆ ತಂದ ಹಲವು ಕಲ್ಯಾಣ ಯೋಜನೆಗಳನ್ನು (ರಿಯಾಯತಿ ದರದಲ್ಲಿ ಅಡುಗೆ ಅನಿಲ ಒದಗಿಸುವುದರಿಂದ ಮೊದಲುಗೊಂಡು ಶೂನ್ಯ ಉಳಿತಾಯದ ಬ್ಯಾಂಕ್ ಖಾತೆಗಳನ್ನು ತೆರೆಯುವುದರವರೆಗೆ) ಉತ್ತಮವಾಗಿ ಅನುಷ್ಠಾನಕ್ಕೆ ತರುವ ಹಲವು ಕ್ರಮಗಳಿಗೆ ಅದು ಮುಂದಾಗಿದೆ. ಒಂದರಲ್ಲಿ ಮಾತ್ರ ವ್ಯತ್ಯಾಸವಿದೆ. ಅವನ್ನು ಕಣ್ಕಟ್ಟಿನ ಘೊಷಣೆಗಳಲ್ಲಿ ಕಟ್ಟಿಕೊಡುವುದರಲ್ಲಿ.
ದೇಶದಲ್ಲೂ ಮತ್ತು ಜಗತ್ತಿನ ಎಲ್ಲಾ ಕಡೆಗಳಲ್ಲೂ ಬಂಡವಾಳಶಾಹಿಯ ಅಂತರ್ಗತ ರಾಚನಿಕ ನಿಯಮಗಳಿಗೆ ಅನುಸಾರವಾಗಿ ಕಂಡುಬರುತ್ತಿರುವ ಎರಡು ಕೆಟ್ಟ ಪರಿಣಾಮಗಳೆಂದರೆ ಅಸಮಾನತೆಗಳ ತೀವ್ರತೆ ಮತ್ತು ಉದ್ಯೋಗರಹಿತ ಅಭಿವೃದ್ಧಿ. ಹಣದುಬ್ಬರದ ಒತ್ತಡವು ಹೆಚ್ಚುತ್ತಿದ್ದಂತೆ ಖಾಸಗಿ ಕ್ಷೇತ್ರವು ಉದ್ಯೋಗವನ್ನು ಸೃಷ್ಟಿಸಲು ಅಸಮರ್ಥವಾಗುತ್ತದೆ. ಏಕೆಂದರೆ ಅದು ಎಲ್ಲೆಡೆ ಶ್ರಮಶಕ್ತಿಯ ಮೇಲೆ ಹೂಡಿಕೆ ಮಾಡುವದಕ್ಕಿಂತ ತಂತ್ರಜ್ನಾನದ ಮೇಲೆ ಬಂಡವಾಳ ಹೂಡಿಕೆಯನ್ನು ಮಾಡುವುದರಲ್ಲಿ ಹೆಚ್ಚಿನ ಲಾಭವಿದೆಯೆಂಬುದನ್ನು ಕಂಡುಕೊಂಡಿದೆ. ಹೀಗಾಗಿ ಮೋದಿ ಸರ್ಕಾರಕ್ಕೆ  ತನ್ನ ಅಚ್ಚೇದಿನ್ ಭರವಸೆಯನ್ನು ಈಡೇರಿಸುವುದು ಕಷ್ಟವೆಂಬುದು ಅರಿವಾಗುತ್ತಾ ಹೋಗುತ್ತದೆ. ಇದರಿಂದಾಗಿ ಹೆಚ್ಚೆಚ್ಚು ಜನ ಅಚ್ಚೇದಿನ ಘೊಷಣೆಯ ಪೊಳ್ಳುತನವನ್ನು ಅರ್ಥಮಾಡಿಕೊಳ್ಳುತ್ತಿದ್ದಂತೆ ಮೋದಿಯವರು ತಮ್ಮ ಪಕ್ಷದ  ಒಂದೋ ನೀವು ನಮ್ಮ ಕಡೆ, ಇಲ್ಲವೇ ಶತ್ರುವಿನ ಕಡೆ ಎಂಬ ಧ್ರೂವೀಕರಣಗೊಳಿಸುವ ನೀತಿಯನ್ನು ತೀವ್ರಗೊಳಿಸುವುದು ಖಂಡಿತ. ಮುಕ್ತ ಅಭಿಪ್ರಾಯಗಳ ದಮನವನ್ನು ದೇಶಪ್ರೇಮಿ/ ದೇಶವಿರೋಧಿ ಎಂಬ ವ್ಯಾಖ್ಯಾನಗಳ ಮೂಲಕ ತರ್ಕಬದ್ದಗೊಳಿಸಲಾಗುವುದು. ತನ್ನ ಜನಪ್ರಿಯತೆಯನ್ನು ಹೆಚ್ಚಿಸಿಕೊಳ್ಳುವ ಸಲುವಾಗಿ ತಲಾಖಿನ ದಮನದಿಂದ ಮುಸ್ಲಿಂ ಮಹಿಳೆಯರನ್ನು ಉಳಿಸುವ ಹೆಸರಿನಲ್ಲಿ ಏಕರೂಪ ನಾಗರಿಕ ಕಾಯಿದೆಯನ್ನು ಮತ್ತು ಶಾಸನ ಸಭೆಗಳಲ್ಲಿ ಮಹಿಳೆಯರಿಗೆ ಮೀಸಲಾತಿಯನ್ನು ಜಾರಿ ಮಾಡುವಂಥ ಕ್ರಮಗಳಿಗೂ ಮೋದಿ ಮುಂದಾಗಬಹುದು. ೨೦೧೯ರ ಸಾರ್ವತ್ರಿಕ ಚುನಾವಣೆಯ ನಂತರದಲ್ಲಿ ಬಿಜೆಪಿಗೆ ರಾಜ್ಯಸಭೆಯಲ್ಲೂ ಬಹುಮತ ದೊರೆಯುವ ಸಾಧ್ಯತೆಯಿದ್ದು ಆಗ ಸಂವಿಧಾನದ ಮುನ್ನುಡಿಯಲ್ಲಿರುವ ಧರ್ಮ ನಿರಪೇಕ್ಷತೆ ಮತ್ತು ಸಮಾಜವಾದ ಎಂಬ ಪದಗಳನ್ನು ತೆಗೆದುಹಾಕುವ ಕ್ರಮಗಳಿಗೂ ಮುಂದಾಗಬಹುದು.
ಬಿಜೆಪಿಯ ಸಮರ್ಥಕರು ಉತ್ತರಪ್ರದೇಶದ ಚುನಾವಣಾ ಫಲಿತಾಂಶಗಳು ಜಾತಿ ಆಧಾರಿತ ಅಸ್ಮಿತೆ ರಾಜಕಾರಣದ ಸೋಲನ್ನು ಸೂಚಿಸುತ್ತದೆಂದು ಅಬ್ಬರದಿಂದ ಪ್ರತಿಪಾದಿಸುತ್ತಿದ್ದಾರೆ. ಇದು ಬಹಳ ಸರಳಿಕೃತ ಗ್ರಹಿಕೆ. ಬಾರಿ ಜಾತವ್ ಅಲ್ಲದ ಹಲವು ದಲಿತ ಜಾತಿಗಳು ಬಹುಜನ ಸಮಾಜ ಪಕ್ಷದೊಂದಿಗೆ ಗುರುತಿಸಿಕೊಳ್ಳಲಿಲ್ಲ. ಹಲವು ಯಾದವೇತರ ಹಿಂದುಳಿದ ಜಾತಿಗಳು ಸಮಾಜವಾದಿ ಪಕ್ಷವು ಕೇವಲ ಯಾದವರ ಪಕ್ಷಪಾತಿ ಎಂದು ಆರೋಪಿಸುತ್ತಿದ್ದವು. ಒಂದೆಡೆ ಬಹುಜನ್ ಸಮಾಜ ಪಕ್ಷದ ಮತ್ತು ಸಮಾಜವಾದಿ ಪಕ್ಷದ ಪಾರಂಪರಿಕ ಮತದಾರರು ಆಯಾ ಪಕ್ಷಗಳನ್ನು ತೊರೆಯದಿದ್ದರೂ ಬಿಜೆಪಿ ಸೂಕ್ಷ್ಮವಾಗಿ ನಿರ್ವಹಣೆ ಮಾಡಿದ ಜಾತಿ ಸಮೀಕರಣಗಳು ಪಕ್ಷಕ್ಕೆ ಫಲವನ್ನು ನೀಡಿವೆ. ನಿಕಟಭವಿಷ್ಯದಲ್ಲಿ ಬಹುಜನ್ ಸಮಾಜ ಪಕ್ಷದ ಅಧಿನಾಯಕಿ ಮಾಯಾವತಿಯವರ ಭವಿಷ್ಯ ಪ್ರಕಾಶಮಾನವಾಗಿಲ್ಲ. ಅವರು ತಮ್ಮ ರಾಜ್ಯಸಭಾ ಸ್ಥಾನವನ್ನೂ ಕಳೆದುಕೊಳ್ಳಬಹುದು. ಉಪ್ರ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಅವರು ಸಹ ನೋಡುನೋಡುತ್ತಲೇ ತಾನು ಕಳೆದುಕೊಂಡ ಜನಬೆಂಬಲವನ್ನು ಮತ್ತೆ ಗಳಿಸಿಕೊಳ್ಳಲು ಮತ್ತು ಕುಟುಂಬದೊಳಗಿನ ದಾಯಾದಿ ಕಲಹದಿಂದ ಉಂಟಾಗಿರುವ ಹಾನಿಯನ್ನು ತಡೆಗಟ್ಟಲು ಇನ್ನೂ ಸಾಕಷ್ಟು ಸಮಯ ಬೇಕಾಗಬಹುದು.
ಇನ್ನು ಕಾಂಗ್ರೆಸ್ಸಿನ ಉಪಾಧ್ಯಕ್ಷ ರಾಹುಲ್ ಗಾಂಧಿಯವರ ಬಗ್ಗೆ ಕಡಿಮೆ ಹೇಳಿದಷ್ಟೂ ಒಳ್ಳೆಯದು. ಏಕೆಂದರೆ ತನ್ನ ಪಕ್ಷದ ಪರಿಯ ಹೀನಾಯ ಸೋಲಿನ ಹಿಂದಿನ ಕಾರಣಗಳನ್ನೂ ಮತ್ತು ದೇಶದಲ್ಲಿ ತನ್ನ ಪಕ್ಷವನ್ನು ಹಿಂದಿಕ್ಕಿ ಬಿಜೆಪಿಯು ದೇಶದ ಮುಂಚೂಣಿ ಪಕ್ಷವಾಗಿ ಬೆಳೆಯುವುದಕ್ಕೆ ಕಾರಣವಾದ ಸಂಗತಿಗಳನ್ನು ಅರ್ಥಮಾಡಿಕೊಳ್ಳುವ ಕನಿಷ್ಟ ಪ್ರಯತ್ನವನ್ನು ಮಾಡಲು ಅವರು ಸಿದ್ಧರಿಲ್ಲ. ಅವರ ಪಕ್ಷ ಪಂಜಾಬಿನಲ್ಲಿ ಪಡೆದ ಗೆಲುವಿನ ಯಾವ ಹಿರಿಮೆಯನ್ನು ರಾಹುಲ್ ಗಾಂಧಿಯವರಿಗೆ ಆರೋಪಿಸಲು ಸಾಧ್ಯವಿಲ್ಲ. ಕಾಂಗ್ರೆಸ್ ಪಕ್ಷ ಮತ್ತೆ ಪುನರುಜ್ಜೀವಗೊಳ್ಳಬಹುದೇ? ಗಾಂಧಿ-ನೆಹರೂ ಕುಟುಂಬವನ್ನು ಕಟು ವಾಸ್ತವ ಮತ್ತು ವಿಮರ್ಶೆಗಳಿಗೆ ಎದುರಾಗದಂತೆ  ರಕ್ಷಿಸುತ್ತಿರುವ ಪಟ್ಟಭದ್ರರ ಬಾಹುಗಳಿಂದ ಹೊರತಂದು ತಳಮಟ್ಟದಿಂದ ಮತ್ತೆ ಮೊದಲಿಂದ ಪಕ್ಷವನ್ನು ಕಟ್ಟಲು ಪ್ರಾರಂಭಿಸಬಹುದೇ? ಅಂಥಾ ಸಾಧ್ಯತೆಗಳು ಕಡಿಮೆ. ಆದರೆ ತಾನು ಇನ್ನೂ ವೇಗವಾಗಿ ಕಳೆಗುಂದುತ್ತಾ ನೇಪಥ್ಯಕ್ಕೆ ಸರಿಯುವುದನ್ನು ತಡೆಯಬೇಕೆಂದರೆ ಅದಕ್ಕೆ ಇದನ್ನು ಬಿಟ್ಟರೆ ಬೇರೆ ಆಯ್ಕೆಯಿಲ್ಲ. ಆದರೆ ಒಂದು ನಿಮಿಷ ನಿಲ್ಲಿ! ಬಿಜೆಪಿ ಎಷ್ಟೇ ಕಾಂಗ್ರೆಸ್ ಮುಕ್ತ ಭಾರತದ ಬಗ್ಗೆ ಮಾತನಾಡಿದರೂ ತಾನು ಹೇಗೆ ಪ್ರಮುಖ ಎದುರಾಳಿಗಿಂತ ಭಿನ್ನ ಎಂದು ತೋರಿಸಲು ಕಾಂಗ್ರೆಸ್ ಮತ್ತು ರಾಹುಲ್ ಅದಕ್ಕೆ ಬೇಕೇ ಬೇಕು!
ಬಿಜೆಪಿಯ ರಾಜಕೀಯ ವಿರೋಧಿಗಳ ಪಯಣ ಇಲ್ಲಿಂದ ಎತ್ತ ಕಡೆ ಸಾಗಬಹುದು?
ಪಂಜಾಬಿನಲ್ಲಿ ತನ್ನ ಕಳಪೆ ಪ್ರದರ್ಶನದಿಂದ ಮತ್ತು ಗೋವಾದಲ್ಲಿ ಖಾತೆಯನ್ನೇ ತೆಗೆಯಲಾಗದೇ ಇದ್ದಿದ್ದರಿಂದ ಆಮ್ ಆದ್ಮಿ ಪಕ್ಷದ ಭವಿಷ್ಯವು ಬರಲಿರುವ ದೆಹಲಿ ನಗರಸಭಾ ಚುನಾವಣೆಗಳಲ್ಲಿ ತೀವ್ರವಾದ ಪರೀಕ್ಷೆಗೆ ಗುರಿಯಾಗಲಿದೆ. ಏಕೆಂದರೆ ಚುನಾವಣೆಗೆ ಬಿಜೆಪಿ ಪಕ್ಷವು ತನ್ನ ಯಾವೊಬ್ಬ ಹಾಲಿ ಕಾರ್ಪೊರೇಟರ್ಗೂ ಟಿಕೆಟನ್ನು ನೀಡಿಲ್ಲ. ಆಮ್ ಆದ್ಮಿ ಪಕ್ಷದ ನಾಯಕ ಕೇಜ್ರಿವಾಲ್ ತನ್ನ ಅಖಿಲ ಭಾರತ ಮಟ್ಟದ ಮಹತ್ವಾಕಾಂಕ್ಷೆಯ ಬಗ್ಗೆ ಗಂಭೀರವಾಗಿ ಪುನರ್ ವಿಚಾರ ಮಾಡಬೇಕುಅವರ ಭ್ರಮಾತ್ಮಕ ಮತು ಸ್ವಕೇಂದ್ರಿತ ನಡೆವಳಿಕೆಗಳ ಬಗ್ಗೆ ವಿಮರ್ಶೆ ಮಾಡುತ್ತಾ ಪಕ್ಷದಿಂದ ಹೊರಹೋದವರ ಜೊತೆ ಸಂಧಾನ ಮತ್ತು ಹೊಂದಾಣಿಕೆಗಳ ಸಾಧ್ಯತೆಯನ್ನು ಪರಿಗಣಿಸಬೇಕು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯು ಎಡಪಕ್ಷವನ್ನು ಹೊರತಳ್ಳಿ ಮಮತಾ ಬ್ಯಾನರ್ಜಿ ನಾಯಕತ್ವದ ತೃಣಮೂಲ ಕಾಂಗ್ರೆಸ್ಸಿಗೆ ತಾನೇ ಪ್ರಧಾನ ವಿರೋಧಪಕ್ಷವಾಗಿ ಬೆಳೆಯಲು ತನ್ನೆಲ್ಲಾ ಪ್ರಯತ್ನಗಳನ್ನೂ ಹಾಕುವುದು ಶತಸ್ಸಿದ್ಧ. ರಾಜ್ಯವು ಹೀನ ರಾಜಕೀಯ ಹಿಂಸಾಚಾರಗಳ ಮುಂದಿನ ತಾಣವಾಗಲೂಬಹುದು ಮತ್ತು ಅದು ಕೋಮುವಾದಿ ಬಣ್ಣವನ್ನು ಪಡೆದುಕೊಳ್ಳಬಹುದು. ಬಿಹಾರದಲ್ಲಿ ಆದಂತೆ ಬಿಜೆಪಿಯನ್ನು ವಿರೋಧಿಸುವ ಎಲ್ಲಾ ವಿರೋಧಪಕ್ಷಗಳೂ ಒಂದು ಮಹಾಘಟ್ಬಂಧನ್ ಅಥವಾ ಬೃಹತ್ ಐಕ್ಯರಂಗದ ರೂಪದಲ್ಲಿ ಒಂದಾಗಬಹುದೆಂದು ಎಣಿಸುವುದು ಅತ್ಯಂತ ಸರಳೀಕೃತ ತಿಳವಳಿಕೆಯಾಗುತ್ತದೆ. ಎಸ್ಪಿ ಮತ್ತು ಬಿಎಸ್ಪಿಗಳು, ಎಡಪಕ್ಷಗಳು ಮತ್ತು ತೃಣಮೂಲ ಕಾಂಗ್ರೆಸ್, ಅಖಿಲ ಭಾರತ ಅಣ್ಣಾ ದ್ರವಿಡ ಮುನ್ನೇತ್ರ ಕಳಗಂನ ಬಣಗಳು ಮತ್ತು ದ್ರವಿಡ ಮುನ್ನೇತ್ರ ಕಳಗಂಗಳು ತಮ್ಮ ತಮ್ಮ ನಡುವಿನ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಬದಿಗೆ ಸರಿಸಿ ಸಮಾನ ರಾಜಕೀಯ ಶತ್ರುವಿನ ವಿರುದ್ಧ ಒಂದಾಗಲು ಕಷ್ಟವಿದೆ. ಬಿಹಾರದ ಮುಖ್ಯಮಂತ್ರಿ ನಿತೀಶ್ಕುಮಾರ್ ಅವರು ಅಂಥಾ ಒಂದು ಬಿಜೆಪಿ ವಿರೋಧಿ ಕೂಟಕ್ಕೆ ಸರ್ವಸಮ್ಮತ ನಾಯಕರಾಗಬಲ್ಲರು. ಇದೀಗ ಅವರು ನೋಟು ನಿಷೇಧವನ್ನು ಟೀಕಿಸಲು ಸಮಯವನ್ನು ತೆಗೆದುಕೊಂಡಿದ್ದಕ್ಕೆ ಮತ್ತು ಅದನ್ನು ಮೃದುವಾಗಿ ಮಾತ್ರ ಖಂಡಿಸಿದ್ದಕ್ಕೆ ತನ್ನನ್ನು ತಾನೇ ಅಭಿನಂದಿಸಿಕೊಳ್ಳುತ್ತಿರಬಹುದು.
ಮೋದಿ ವಿರೋಧಿಗಳು ಈಗ ಎದುರಿಸುತ್ತಿರುವ ವಿಷಣ್ಣತೆಯನ್ನು ಮೀರಿ ಹೊರಬರುವುದು ದೊಡ್ಡ ಸವಾಲಿನ ಮಾತೇ ಸರಿ. ಬರಲಿರುವ ಗುಜರಾತ್, ಮಧ್ಯಪ್ರದೇಶ, ಛತ್ತೀಸ್ಘಡ್, ಮತ್ತು ರಾಜಸ್ಥಾನದ ಚುನಾವಣೆಗಳಲ್ಲೂ ಬಿಜೆಪಿ ಉತ್ತಮವಾದ ಫಲಿತಾಂಶಗಳನ್ನು ಪಡೆಯುವ ಎಲ್ಲಾ ಸಾಧ್ಯತೆಗಳಿವೆ. ಮೋದಿಯವರು ಹಿಂದೂತ್ವದ ಬಗ್ಗೆ ಮರುಒತ್ತು ನೀಡುತ್ತಾ ಭವಿಷ್ಯದ ಬಗ್ಗೆ ಭ್ರಮೆಗಳನ್ನು ಬಿತ್ತುತ್ತಾ ತಾವೂ ಪೂರೈಸಲಾಗದ ಭರವಸೆಗಳಿಂದ ಜನರ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ನ ಮಾಡುವುದು ಒಂದು ಕಡೆ ಇದ್ದರೆ ವಿರೋಧಿಗಳು ಒಂದಾಗಲು ಇರುವ ಅಡೆತಡೆಗಳೂ ಸಹ ಮೋದಿಗೆ ಪೂರಕವಾಗಲಿದೆ.
                                                                                                ಕೃಪೆ: Economic and Political Weekly  
                                              March 18, 2017. Vol. 52, No.11
                                                                                                                             
... ಮುಂದೆ ಓದಿ


ಭಗತ್ ಸಿಂಗನ ಹೋರಾಟದಲ್ಲೂ ಕಮ್ಯುನಿಸಂನ ವಾಸನೆ ಹಿಡಿದ ಕಾಮ್ರೇಡುಗಳು
ನೆಲದ ಮಾತು - ಸೋಮವಾರ ೧೨:೧೬, ಮಾರ್ಚ್ ೨೦, ೨೦೧೭

ಭಗತ್ಸಿಂಗ್ ನಾನೇಕೆ ನಾಸ್ತಿಕ ಎಂಬ ಕೃತಿಯಲ್ಲಿ ದೇವರನ್ನು ನಂಬದಿರಲು ಕಾರಣಗಳನ್ನು ಪಟ್ಟಿ ಮಾಡುತ್ತಾನೆ. ಅದನ್ನು ಹಿಡುಕೊಂಡೇ ಎಡಚರೆಲ್ಲ ಭಗತ್ನನ್ನು ತಮ್ಮವನೆನ್ನೋದು. ವಿವೇಕಾನಂದರೂ 33 ಕೋಟಿ ದೇವತೆಗಳನ್ನು ಗಂಟು ಕಟ್ಟಿ ಸಮುದ್ರಕ್ಕೆಸೆಯಿರಿ ಅಂದಿದ್ದರು. ಗೀತೆ ಓದುವುದಕ್ಕಿಂತ ಫುಟ್ಬಾಲ್ ಆಡುವುದು ಭಗವಂತನಿಗೆ ಹತ್ತಿರ ಹೋಗುವ ಮಾರ್ಗ ಎಂದಿದ್ದರು. ಹಾಗಂತ ಅವರು ದೇವರು, ಧರ್ಮದ ವಿರುದ್ಧವೆಂದೇನಲ್ಲ. ಕಾರ್ಯಕರ್ತರನ್ನು ಆಲಸ್ಯದಿಂದ ಅಥವಾ ತೋರಿಕೆಯ ನಿಷ್ಕ್ರಿಯತೆಯಿಂದ ಸಕ್ರಿಯ ಹೋರಾಟದೆಡೆಗೆ ಸೆಳೆದು ತರಲು ಉಪಯುಕ್ತ ಮಾರ್ಗ ಅದು. ಸ್ವತಃ ಭಗತ್ ಈ ಕೃತಿ ಬರೆದ ನಂತರವೂ, … Continue reading ಭಗತ್ ಸಿಂಗನ ಹೋರಾಟದಲ್ಲೂ ಕಮ್ಯುನಿಸಂನ ವಾಸನೆ ಹಿಡಿದ ಕಾಮ್ರೇಡುಗಳು ... ಮುಂದೆ ಓದಿ


ನಾವೆಲ್ಲರೂ ಒಂದೇ..‌.
ನಿಲುಮೆ - ಸೋಮವಾರ ೦೩:೨೮, ಮಾರ್ಚ್ ೨೦, ೨೦೧೭

– ಗೀತಾ ಹೆಗ್ಡೆ ಒಂದಿಲ್ಲೊಂದು ಕಾರಣಗಳಿಂದ ನೀನು ಹಿಂದು, ನೀನು ಕ್ರಿಶ್ಚಿಯನ್, ನೀನು ಮುಸ್ಲಿಂ ಹೀಗೆ ಅವರವರ ಧರ್ಮದ ಹೆಸರಲ್ಲಿ, ಒಂದಿನಿತೂ ಅವರ ಮನಸ್ಸಿನಲ್ಲಿ ನಾವೆಲ್ಲ ಒಂದೇ ಅನ್ನುವ ಭಾವನೆ ಬೆಳೆಯಲು ಈ ಸಮಾಜ ಯಾಕೆ ಅನುವು ಮಾಡಿಕೊಡುತ್ತಿಲ್ಲ.. ಇದು ಸದಾ ಕಾಡುವ ನನ್ನೊಳಗಿನ ಪ್ರಶ್ನೆ. ಎಷ್ಟೋ ಸಾರಿ ಜೀವನದ ಅನೇಕ ವೇಳೆಯಲ್ಲಿ ಎದುರಾಗುವ ಮಾನವೀಯ ಜನರು ನಮ್ಮ ಕಷ್ಟ ಸುಃಖಕ್ಕೆ ಸ್ಪಂಧಿಸಿರುತ್ತಾರೆ. ಅವರ ಒಡನಾಟದಲ್ಲಿ ನಾವು ಜಾತಿಯ ಬಗ್ಗೆ ಯೋಚನೆಯನ್ನೆ ಮಾಡುವುದಿಲ್ಲ. ಅಷ್ಟು ನಮ್ಮೊಳಗಿನ ಮನಸ್ಸು ಬೇಧ ಭಾವ ಮರೆತು […]... ಮುಂದೆ ಓದಿ


ಟಚ್ ಸ್ಕ್ರೀನ್ ಕೆಲಸಮಾಡುವುದು ಹೇಗೆ?
ಇಜ್ಞಾನ ಡಾಟ್ ಕಾಮ್ - ಭಾನುವಾರ ೧೦:೩೦, ಮಾರ್ಚ್ ೧೯, ೨೦೧೭

... ಮುಂದೆ ಓದಿ


ಪೆರುವಿನ ಮರಳುಗಾಡಿನಲ್ಲೊಂದು ಕಣ್ಸೆಳೆಯುವ ಓಯಸಿಸ್
ಹೊನಲು - ಭಾನುವಾರ ೦೯:೩೦, ಮಾರ್ಚ್ ೧೯, ೨೦೧೭

– ಕೆ.ವಿ.ಶಶಿದರ. ಹುವಕಚಿನ ಎಂಬ ಒಂದು ಪುಟ್ಟ ಹಳ್ಳಿ ಪೆರು ದೇಶದ ನೈರುತ್ಯ ದಿಕ್ಕಿನಲ್ಲಿದೆ. ಪೆರು ಮಂದಿಯ ಪ್ರಾಚೀನ ಪವಿತ್ರ ವಸ್ತುವನ್ನು ಸ್ತಳೀಯ ಬಾಶೆಯಲ್ಲಿ ಹುವಕಚಿನ ಎನ್ನುತ್ತಾರೆ. ಪೆರುವಿನ ಐಕಾ ಪ್ರಾಂತದ ಐಕಾ ಜಿಲ್ಲೆಯ ಐಕಾ ನಗರದಿಂದ 5 ಕಿಲೋಮೀಟರ್ ದೂರದಲ್ಲಿರುವ ಈ ಪುಟ್ಟ ಹಳ್ಳಿಯ ಕಾಯಂ ಜನಸಂಕ್ಯೆ ಒಂದು ನೂರಕ್ಕೂ ಕಡಿಮೆ. ಎತ್ತರದಲ್ಲಿ ಒಂದೊಕ್ಕೊಂದು ಸವಾಲು... Read More ›... ಮುಂದೆ ಓದಿ


ದೇವರ ಚಪ್ಪಲಿ....!
ಗುಜರಿ ಅಂಗಡಿ - ಭಾನುವಾರ ೦೯:೩೫, ಮಾರ್ಚ್ ೧೯, ೨೦೧೭

ಇಲ್ಲ ಎನ್ನುವ ದುಃಖ ಪಂಟುವನ್ನು ಯಾವತ್ತೂ ಕಾಡಿದ್ದಿಲ್ಲ. ನಗರಕ್ಕೆ ಒತ್ತಿಕೊಂಡಿರುವ ಕೊಳೆಗೇರಿಯಲ್ಲಿ ಹರಡಿಕೊಂಡಿರುವ ನೂರಾರು ಕುಟುಂಬಗಳ ಸದಸ್ಯರಲ್ಲಿ ಪಂಟು ಒಬ್ಬ. ಅವನ ಹೆಸರು ಪಾಂಡು ಎಂದೋ ಪಾಂಡುರಂಗ ಎಂದೋ ಇರಬಹುದು ಎಂದು ಗುಡಿಸಲ ಅಕ್ಕಪಕ್ಕದ ಹಿರಿಯರು ಮಾತನಾಡಿಕೊಳ್ಳುತ್ತಾರೆ. ತನಗೆ ಹೆಸರಿಟ್ಟವರಾರು ಎನ್ನುವುದೇ ಗೊತ್ತಿಲ್ಲದ ಕಾರಣದಿಂದ ತನ್ನ ಹೆಸರು ಪಂಟು ಅಥವಾ ಪಾಂಡು ಏನೇ ಆಗಿದ್ದರೂ ದೊಡ್ಡ ವ್ಯತ್ಯಾಸವಿಲ್ಲ ಎಂದು ಅವನು ತಿಳಿದುಕೊಂಡಿದ್ದ. ಪಂಟು ಶಾಲೆ ಕಲಿತಿಲ್ಲ. ಹುಟ್ಟಿದವನು ನೇರವಾಗಿ ನಗರದ ಓಣಿಯ ಕಡೆಗೆ ಅಂಬೆಗಾಲಿಕ್ಕಿ ನಡೆದ. ಸರಕಾರ, ಕಾನೂನು, ವ್ಯವಸ್ಥೆ ಯಾವುದೂ ಅವನಿಗೆ ಅರ್ಥವಾಗುವುದಿಲ್ಲ. ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿಯೂ ಇರಲಿಲ್ಲ. ಇಡೀ ಭೂಮಿ, ಆಕಾಶ, ನಕ್ಷತ್ರಗಳೆಲ್ಲ ನನ್ನವು, ನಾನು ಬೇಕೆಂದಾಗ ಅವನ್ನು ಬಳಸಿಕೊಳ್ಳಬಹುದು ಎನ್ನುವ ಅಪಾರ ಶ್ರೀಮಂತಿಕೆಯ ಜೊತೆಗೆ ಬದುಕಿಕೊಂಡು ಬಂದಿರುವ ಪಂಟುವಿಗೆ, ಜೋಪಡಿಗೆ ಒತ್ತಿಕೊಂಡ ಪುಟ್ಟ ನಗರ ಒಡೆಯನೇ ಇಲ್ಲದ, ತೆರೆದಿಟ್ಟ ತಿಜೋರಿಯಂತೆ ಕಾಣುತ್ತಿತ್ತು. ಬೇಕೆಂದಾಗಲೆಲ್ಲ ಈ ನಗರ ಅವನನ್ನು ಕರೆದು ಕೊಟ್ಟು, ಸಂತೈಸಿ ಕಳುಹಿಸುತ್ತಿತ್ತು. ಅಗತ್ಯ ಹಣ ಬೇಕೆಂದಾಗ ಯಾರದಾದರೂ ಜೇಬಿಗೆ ಕತ್ತರಿ ಹಾಕುತ್ತಿದ್ದ. ಹೊಸ ಪ್ಯಾಂಟು ಕೊಳ್ಳಬೇಕು ಎಂದಾಗ ರಸ್ತೆಯ ಜನಸಂದಣಿಯ ನಡುವೆ ಹರಡಿ ಮಾರಾಟಕ್ಕಿಟ್ಟಿರುವ ಬಟ್ಟೆಗಳಲ್ಲಿ ಒಂದೆರಡನ್ನು ನಾಜೂಕಾಗಿ ಎತ್ತಿ, ಅದರಲ್ಲಿ ತನ್ನ ಸೈಜಿನದನ್ನು ಇಟ್ಟುಕೊಂಡು ಉಳಿದುದನ್ನು ಕಡಿಮೆ ದರಕ್ಕೆ ತನ್ನ ಗೆಳೆಯರಿಗೇ ಮಾರುತ್ತಿದ್ದ. ಕೆಲವೊಮ್ಮೆ ಪುಕ್ಕಟೆಯಾಗಿಯೇ ಹಂಚುತ್ತಿದ್ದ. ಹಲವು ಪರಿಚಿತ ಗೂಡಂಗಡಿಗಳಲ್ಲಿ ಅವನು ಪುಕ್ಕಟೆಯಾಗಿಯೇ ದೋಸೆ, ಇಡ್ಲಿ ಹಾಕಿಸಿಕೊಂಡು ತಿನ್ನುತ್ತಿದ್ದ. ದುಡ್ಡಿದ್ದಾಗ ದುಪ್ಪಟ್ಟು ಕೊಡುತ್ತಿದ್ದ. ಇಲ್ಲವಾದರೆ ಅಕೌಂಟ್‌ನಲ್ಲಿ ಬರ್ಕೋ ಎಂದು ಬಿಂದಾಸಾಗಿ ಎದ್ದು ಹೋಗುತ್ತಿದ್ದ. ಆಗಾಗ ಜೈಲು ಸೇರುವ ಅಭ್ಯಾಸವೂ ಆಗಿತ್ತಾದರೂ, ಅದೂ ಅನ್ಯವೆಂದು ಅವನಿಗೆ ಅನ್ನಿಸಿರಲೇ ಇಲ್ಲ. ಅಲ್ಲಿರುವ ಸಿಬ್ಬಂದಿಯಿಂದ ಹಿಡಿದು ವಿಚಾರಣಾಧೀನ ಕೈದಿಗಳೆಲ್ಲ ಅವನಿಗೆ ಒಂದಲ್ಲ ಒಂದು ರೀತಿಯಲ್ಲಿ ಆಪ್ತರೇ ಆಗಿದ್ದರು. ಜೈಲು ಎನ್ನುವುದು ಅವನಿಗೊಂದು ಅಚ್ಚರಿಯಾಗಿತ್ತು. ಅನ್ನ, ಆಹಾರ, ವಸತಿಯನ್ನು ಪುಕ್ಕಟೆಯಾಗಿ ಜೈಲುಗಳ ಮೂಲಕ ಕೊಡುವ ಸರಕಾರದ ಕರುಣೆಗೆ ಅವನ ಹೃದಯ ತುಂಬಿ ಬರುತ್ತಿತ್ತು. ಅಲ್ಲಿನ ಜೈಲು ಸಿಬ್ಬಂದಿಗೂ ಅವನು ಆಪ್ತನಾಗಿದ್ದ. ಅದೆಷ್ಟೋ ಕೆಲಸಗಳನ್ನು ಅವನಿಂದ ಮಾಡಿಸಿಕೊಳ್ಳುತ್ತಿದ್ದರು. ಅದಕ್ಕಾಗಿ ಸಣ್ಣ ಹಣವನ್ನೂ ನೀಡುತ್ತಿದ್ದರು. ಮತ್ತು ಹೀಗಿದ್ದರೂ ಈ ನಗರದ ಜನರು ಯಾಕೆ ಇಷ್ಟು ಒತ್ತಡ ಅನುಭವಿಸುತ್ತಿದ್ದಾರೆ, ಗಡಿಬಿಡಿಯಿಂದ ಓಡಾಡುತ್ತಿದ್ದಾರೆ, ಕಷ್ಟ ಪಡುತ್ತಿದ್ದಾರೆ ಎಂದು ಅಚ್ಚರಿಗೊಳ್ಳುತ್ತಿದ್ದ. ಹೀಗೇ ಬದುಕು ಕಳೆಯುತ್ತಿರುವ ಹೊತ್ತಿಗೆ ವಯಸ್ಸಿನಲ್ಲಿ ತುಂಬಾ ಹಿರಿಯನಾಗಿರುವ ಅವನ ಗೆಳೆಯ ಜಗ್ಗು ‘ಮದುವೆ ಆಗು’ ಎಂಬ ಸಲಹೆಯನ್ನು ನೀಡಿದ. ‘ಯಾಕಾಗಬಾರದು?’ ಎಂದು ಪಂಟುವಿಗೂ ಅನ್ನಿಸಿತು. ‘‘ಹುಡುಗಿ ತೋರ್ಸು. ನೀನು ತೋರ್ಸಿದ ಹುಡುಗೀನಾ ಮದುವೆ ಆಯ್ತೀನಿ’’ ಎಂದ ಪಂಟು. ‘‘ನಿನಗೊಬ್ಬ ಚಂದದ ಹುಡ್ಗೀನ ನೋಡಿ ಇಟ್ಟಿದ್ದೀನಿ. ನನ್ನ ಹೆಣ್ತಿಗೆ ಪರಿಚಯ. ಅವಳು ನಿನ್ನನ್ನು ನೋಡಿದ್ದಾಳೆ. ಮೊದಲು ಕಾಲಲ್ಲಿರುವ ಚಪ್ಪಲಿ ಬದಲಿಸು. ನೀನು ಅವ್ಳ ಮೀಟ್ ಮಾಡೋ ವ್ಯವಸ್ಥೆ ಮಾಡಿಸ್ತೀನಿ’’ ಎಂದ ಜಗ್ಗು.ಮೊದಲ ಬಾರಿಗೆ ಅವನಿಗೆ ಅವನ ಚಪ್ಪಲಿಯ ಕಡೆಗೆ ಗಮನ ಹೋಯಿತು. ಒಂದೆರಡು ವರ್ಷಗಳಿಂದ ಅವನ ಜೊತೆಗಾರನಾಗಿದ್ದ ಚಪ್ಪಲಿ ಭಾಗಶಃ ಹರಿದು ಚಿಂದಿಯಾಗಿತ್ತು. ಸರಿ, ಯಾವುದಾದರೂ ಬೀದಿ ಬದಿಯಲ್ಲಿರುವ ಅಂಗಡಿಯಿಂದ ಎಗರಿಸಿದರಾಯಿತು ಎಂದು ಯೋಚಿಸಿದ.‘‘ಸ್ವಲ್ಪ ಕ್ವಾಸ್ಟ್ಲಿ ಚಪ್ಪಲಿ ಹಾಕು...ಮರ್ಯಾದೆ ಬತ್ತದೆ. ಚಪ್ಪಲಿಗಿರುವ ಮರ್ಯಾದೆ, ಹಾಕೋ ಬಟ್ಟೆಗಿಲ್ಲ ತಿಳ್ಕೋ’’ ಎಂದ ಜಗ್ಗು.‘‘ಸೋ ರೂಂಗೆ ಹೋದ್ರೆ ಹೆಂಗೆ?’’ ಕೇಳಿದ ಪಂಟು.‘‘ಏ...ಅಲ್ಲೆಲ್ಲ ಸಿಸಿ ಕ್ಯಾಮರಾ ಆಯ್ತದೆ....ಪೊಲೀಸ್ರು ಕಾವ್ಲ ಕಾಯ್ತ ನಿಂತಿರ್ತಾರೆ...ನೀ ಹುಡುಗಿ ನೋಡೋ ಬದ್ಲು ಹುಡುಗೀನೇ ನಿನ್ನನ್ನು ಟೇಸನ್‌ಗೆ ಬಂದು ನೋಡಬೇಕಾಯ್ತದೆ.....’’ ಜಗ್ಗು ಎಚ್ಚರಿಸಿದ.‘‘ಸರಿ ಬಿಡು. ಈಟು ಅಂಗಡಿಗಳಿವೆ. ನನಗಾಗಿ ಒಂದು ಜೋಡು ಸಿಗಾಕಿಲ್ಲವಾ?’’ ಎಂದು ಅವನನ್ನು ಸಮಾಧಾನಿಸಿದ.ಕೈಯಲ್ಲಿ ಕಾಸೂ ಇಲ್ಲದ, ಯಾವುದನ್ನೂ ಕಾಸು ಕೊಟ್ಟು ತಗೊಂಡು ಅಭ್ಯಾಸವಿಲ್ಲದ ಪಂಟು ಈಗ ಒಂದು ಜೋಡು ಒಳ್ಳೆಯ ಬ್ರಾಂಡಡ್ ಚಪ್ಪಲಿಗಾಗಿ ಅಲೆದಾಡ ತೊಡಗಿದ. ಒಂದೆರಡು ಚಪ್ಪಲಿಗಳನ್ನು ಎಗರಿಸಿದನಾದರೂ ಅದು ಅವನ ಕಾಲಿಗೆ ಸರಿ ಹೊಂದುತ್ತಿರಲಿಲ್ಲ. ಯಾವುದೋ ಅಂಗಡಿಯೊಂದರಲ್ಲಿ ಇನ್ನೇನು ಪಸಂದಾದ ಜೋಡು ಚಪ್ಪಲಿ ಕೈಗೆ ಸಿಕ್ಕಬೇಕು ಎನ್ನುವಷ್ಟರಲ್ಲಿ ಮಾಲಿಕನ ಕೈಗೆ ಸಿಕ್ಕಿ, ಕೆನ್ನೆಗೆ ಎರಡೇಟು ಬಿಗಿಸಿಕೊಂಡ. ‘‘ಒಂದು ಜೋಡು ಚಪ್ಪಲಿ ಕೂಡಿಸಿಕೊಳ್ಳೋ ಯೋಗ್ಯತೆಯಿಲ್ಲ...ನಿನಗೆ ಹುಡುಗಿ ಬೇರೆ ಕೇಡು...’’ ಜಗ್ಗು ಛೀಮಾರಿ ಹಾಕಿದ.‘‘ಸಿಗತ್ತೆ ಬಿಡೂ....ಸ್ವಲ್ಪ ಹುಡುಕೋಣ...ಎಲ್ಲ ಕೂಡಿ ಬರಬೇಕು...’’ ಪಂಟು ಸಮಾಧಾನಿಸಿದ.ಅಷ್ಟರಲ್ಲಿ ಜಗ್ಗು. ಒಂದು ಸಲಹೆ ಕೊಟ್ಟ ‘‘ದೇವಸ್ಥಾನಕ್ಕೊಮ್ಮೆ ಹೋಗಿ ಟ್ರೈ ಮಾಡು...’’ ಪಂಟು ತಕ್ಷಣವೇ ನಿರಾಕರಿಸಿದ ‘‘ಬೇಡ ಬೇಡ....ಈ ದೇವ್ರ ದಿಂಡರ ಸಹವಾಸ ಬೇಡ. ನಮಗೇಂತ ಇಷ್ಟೆಲ್ಲ ಅಂಗಡಿಗಳನ್ನು ಅವನು ತೆರೆದುಕೊಟ್ಟಿಲ್ವಾ? ಹಿಂಗಿರುವಾಗ ಅವನ ಅಂಗಡಿಗೇ ಹೋಗಿ ಅವನ ಭಕ್ತರ ಚಪ್ಪಲೀನ ಎಗರಿಸೋದು ಎಷ್ಟು ಸರಿ? ಬೇಡ...ಬೇಡ...’’ ‘‘ಸರಿ ದೇವಸ್ಥಾನಕ್ಕೆ ಬೇಡಪ್ಪ...ಮಸೀದಿಗೆ ಹೋಗು....ನಿಜಕ್ಕೂ ಮಸೀದಿ ಮುಂದೇನೇ ಒಳ್ಳೊಳ್ಳೆ ಚಪ್ಪಲಿಗಳು ಸಿಗೋದು...’’ ಜಗ್ಗು ಇನ್ನೊಂದು ಸಲಹೆ ನೀಡಿದ. ‘‘ಅವ್ರ ದೇವ್ರಾದರೇನು? ಇವ್ರ ದೇವ್ರಾದರೇನು? ದೇವ್ರ ದೇವ್ರೇ ಅಲ್ವಾ? ಇವರ ದೇವರು ಕಿರೀಟ ಹಾಕ್ಕೊಂಡಿರ್ತಾನೆ. ಅವ್ರ ದೇವ್ರ ಟೋಪಿ ಹಾಕ್ಕೊಂಡಿರ್ತಾನೆ....’’‘‘ನೋಡು ಜಗದಾಗೆ ಇರೋದೆಲ್ಲ ದೇವ್ರದ್ದು. ನಮ್ಮ ಹಣೇಲಿ ನಮ್ಮದೂಂತ ಇದ್ದದ್ದಷ್ಟೇ ನಮಗೆ ಅವನು ಕೊಡ್ತಾನೆ. ಆದುದರಿಂದ ದೇವರ ಅಂಗಡಿಯಿಂದ ಎಗರಿಸಿದ್ರೆ ಯಾವ ತಪ್ಪು ಇಲ್ಲ...ನೀನು ಹೋಗು...’’ ಜಗ್ಗು ಅಧ್ಯಾತ್ಮ ಹೇಳಿ ಧೈರ್ಯ ತುಂಬಿದ. ಪಂಟು ಈವರೆಗೆ ದೇವರು, ದಿಂಡರ ಕಡೆಗೆ ತಲೆಯನ್ನೇ ಹಾಕಿರಲಿಲ್ಲ. ಅವನಿಗದರಲ್ಲಿ ಆಸಕ್ತಿಯೂ ಇರಲಿಲ್ಲ. ಆ ಜಗತ್ತು ಅವನಿಗೆ ಅರ್ಥವಾಗುತ್ತಲೂ ಇರಲಿಲ್ಲ. ಒಮ್ಮೆ ಪ್ರಸಾದಕ್ಕಾಗಿ ದೇವಸ್ಥಾನದೊಳಗೆ ಹೋಗಿ, ಅಲ್ಲಿ ಅವನ ಜಾತಿ ಕೇಳಿದ ದಿನದಿಂದ ಅದು ತನ್ನ ಜಾಗ ಅಲ್ಲವೇ ಅಲ್ಲ ಎಂದು ದೂರ ಸರಿದಿದ್ದ. ಅದರೊಳಗೆ ಏನು ನಡೆಯುತ್ತದೆ ಎನ್ನುವುದೂ ಅವನಿಗೆ ಗೊತ್ತಿರಲಿಲ್ಲ.‘‘ದೇವಸ್ಥಾನ, ಇಗರ್ಜಿ, ಮಸೀದಿ...ಎಲ್ಲಿಗೆ ಹೋಗಲಿ?’’ ಪಂಟು ಆಲೋಚಿಸಿ ಕೇಳಿದ. ಜಗ್ಗು ಉತ್ತರಿಸಿದ ‘‘ನೋಡೋ ಪಂಟು...ಈ ಹಿಂದೂ ದೇವ್ರೂ ಬೋ ಸಂಖ್ಯೆಯಲ್ಲಿರುವುದರಿಂದ ದೇವಸ್ಥಾನದಲ್ಲಿ ಕದಿಯೋದು ಸುಲಭ. ಆ ದೇವ್ರ ನೋಡ್ಕೋತಾನೆ ಅಂತ ಈ ದೇವ್ರ...ಈ ದೇವ್ರ ನೋಡ್ಕೋತಾನೆ ಅಂತ ಆ ದೇವ್ರೂ ಯೋಚಿಸ್ತಾ ಇರೋವಾಗಲೇ ಸುಲಭದಲ್ಲಿ ಎಗರಿಸಿ ಬಿಡಬಹುದು. ತಮ್ಮ ದೇವರ ಸೋಮಾರಿತನ ಗೊತ್ತಿರೋದರಿಂದಲೇ ದೇವಸ್ಥಾನಕ್ಕೆ ಬರೋರೆಲ್ಲ ಹಳೆ ಹರಿದ ಚಪ್ಪಲಿ ಹಾಕ್ಕೊಂಡು ಬರ್ತಾರೆ. ಆ ಚಪ್ಪಲಿ ಹಾಕ್ಕೊಂಡು ನೀನು ಹುಡುಗೀನ ನೋಡೋಕೋದ್ರೆ ಅಷ್ಟೇಯ? ಆದರೆ ಈ ಸಾಬ್ರ ದೇವ್ರ ಇದ್ದಾನಲ್ಲ, ಅವ್ನ ತುಂಬಾ ಪವರ್‌ಫುಲ್... ನಮ್ಮ ದೇವ್ರ ಹಾಗೆ ಅವನಿಗೆ ಹೆಂಡ್ತಿ ಮಕ್ಕಳಿಲ್ಲ. ಸಂಸಾರ ಕಾಟ ಇಲ್ಲ. ನಿದ್ರೆ ಮಾಡೋ ಹಂಗಿಲ್ಲ. ಜೊತೆಗೆ ಒಬ್ಬಂಟಿ ಬ್ರಹ್ಮಚಾರಿ ಬೇರೆ. ಆ ಧೈರ್ಯದಿಂದಲೇ ಸಾಬರು ಭಾರೀ ಬೆಲೆ ಬಾಳೋ ಚಪ್ಪಲಿ ಹಾಕ್ಕೊಂಡೇ ಮಸೀದಿಗೆ ಬರ್ತಾರೆ....’’‘‘ಮತ್ತೆ ಇಗರ್ಜಿ ದೇವ್ರ...’’‘‘ಅಯ್ಯೋ ಅವನು ಪಾಪ...ಸಿಲುಬೆಗೇರಿಸಿ ಮೊಳೆ ಹೊಡ್ದು ಬಿಟ್ರು ಪಾಪಿಗಳು. ಅದಕ್ಕೆ...ಇಗರ್ಜಿಗೆ ಹೋಗೋರು ಚಪ್ಪಲೀನ ಹೊರಗೆ ಇಡೋದೇ ಇಲ್ಲ. ಚಪ್ಪಲಿ ಹಾಕ್ಕೊಂಡೇ ಇಗರ್ಜಿ ಒಳಗೆ ಹೋಗಿ ಅವನಿಗೆ ಕ್ಯಾಂಡಲ್ ಹಚ್ಚಿ ಬರ್ತಾರೆ...’’‘‘ಈಗ ನಾನು ಯಾವ ದೇವ್ರ ಚಪ್ಪಲಿ ಎಗರಿಸ್ಲಿ...’’‘‘ಎಗರಿಸೋದು ಅನ್ನಬೇಡವೋ ಹುಚ್ಚಪ್ಪ. ಪ್ರಸಾದ ಅಂತ ಸ್ವೀಕರಿಸೋದು. ಅವ್ರಿಗೆಲ್ಲ ಹಣ್ಣುಹಂಪಲು ಪ್ರಸಾದ ಅಂತ ಕೊಟ್ರೆ, ನಮ್ಮೆಂತೋರಿಗೆಲ್ಲ ಕಾಲಿಗೆ ಹಾಕೋಕೆ ಜೋಡು ಚಪ್ಪಲಿ ಪ್ರಸಾದವಾಗಿ ಕೊಡ್ತಾನೆ ಎಂದು ತಿಳ್ಕೊಂಡು ಎತ್ಕೊಂಡು ಬಿಡು. ನಾವೆಲ್ಲ ಅವನ ಮಕ್ಕಳೇ ಅಲ್ಲವೇನಾ? ನೋಡು ಸೋಮಾರಿ ದೇವರ ಕಳಪೆ ಚಪ್ಪಲಿ ಬೇಕಾ?. ಪವರ್‌ಫುಲ್ ದೇವ್ರ ಕ್ವಾಸ್ಟ್ಲಿ ಚಪ್ಪಲಿ ಬೇಕಾ? ಯಾವುದು ಬೇಕು ನೀನೇ ತೀರ್ಮಾನಿಸು...’’‘‘ಪವರ್‌ಫುಲ್ ದೇವ್ರ ಚಪ್ಪಲಿ ಎಂದ ಮೇಲೆ ರಿಸ್ಕು ಜಾಸ್ತಿ....’’‘‘ಹಂಗೆಲ್ಲ ಹೇಳಬೇಡವೋ...ನೀ ಅಲ್ಲಿಗೆ ಹೋಗು...ಅವನೇ ಎರಡು ಒಳ್ಳೆ ಚಪ್ಪಲೀನ ಆರಿಸಿ ನಿನ್ನ ಕೈಗೆ ಇಡ್ತಾನೆ....ಬೇಕಾದ್ರೆ ನೋಡು...ಮನುಸರಿಗಾದ್ರೆ ಹೆದರ್ಬೇಕು. ದೇವ್ರಿಗೇಕೆ ಹೆದರ್ಬೇಕು?’’ ಜಗ್ಗು ಧೈರ್ಯ ತುಂಬಿದ. ‘‘ಆದ್ರೆ ನಮ್ ದೇವ್ರ ಥರ ಅವ್ರ ದೇವ್ರ ಕಣ್ಣಿಗೆ ಕಾಣಂಗಿಲ್ವಲ್ಲ...ಮತ್ತೆ ಹೆಂಗೆ ಕೊಡ್ತಾನೆ....’’‘‘ಅದಕ್ಕೆಲ್ಲ ನಾವೇಕೆ ತಲೆಕೆಡುಸ್ಕೋಬೇಕು? ಕೊಡೋನು ಅವನು. ಹೆಂಗಾದ್ರೂ ಬಂದು ಕೊಡಲಿ....ಅವನ ಅಂಗಡಿ. ಅವನ ಚಪ್ಪಲಿ...’’ಪಂಟುವಿಗೆ ಸರಿ ಅನ್ನಿಸಿತು. ‘‘ಹಾಗಾದ್ರೆ...ಸಾಬ್ರ ದೇವಸ್ಥಾನ ಎಲ್ಲಿದೆ...?’’ ಕೇಳಿದ.‘‘ಎರಡು ಓಣಿಯಾಚೆಗಿರುವ ದೊಡ್ಡ ಮಸೀದಿಗೆ ಹೋಗು...ಬೋ ದೊಡ್ಡ ಮಿನಾರ ಇರೋ ಮಸೀದಿ ಅದು...’’ ಜಗ್ಗು ದಾರಿ ವಿವರಿಸಿದ.ಪಂಟು ತಲೆಯಾಡಿಸಿದ.***ಅಂದು ಶುಕ್ರವಾರ. ನಮಾಝಿಗೆಂದು ಒಬ್ಬೊಬ್ಬರಾಗಿ ಮಸೀದಿಯ ವರಾಂಡಕ್ಕೆ ಕಾಲಿಡುತ್ತಿದ್ದರು. ಚಪ್ಪಲಿಗಳನ್ನು ಕಳಚಿಟ್ಟು ಅಲ್ಲಿಯೇ ಇರುವ ಸಣ್ಣ ನೀರಿನ ಟ್ಯಾಂಕೊಂದರಲ್ಲಿ ಕಾಲು ತೊಳೆದು, ಮುಖ, ಕೈ ತೊಳೆಯಲು ದೊಡ್ಡ ಟ್ಯಾಂಕಿನ ಬಳಿ ಒಬ್ಬೊಬ್ಬರಾಗಿ ಸಾಗುತ್ತಿದ್ದರು. ‘ಯಾವುದನ್ನು ಬೇಕಾದರೂ ಆರಿಸಿಕೋ’ ಎಂಬಂತೆ ಪಂಟುವಿನ ಮುಂದೆ ಚಪ್ಪಲಿಗಳು, ಶೂಗಳು ಒಂದೊಂದಾಗಿ ಹರಡಿಕೊಳ್ಳುತ್ತಿದ್ದವು. ಕಾಂಪೌಂಡ್ ಕಟ್ಟೆಯ ಮೇಲೆ ನಿಂತು ಅವನು ಆ ಚಪ್ಪಲಿಗಳನ್ನೇ ನೋಡುತ್ತಿದ್ದ. ತುಸು ದೂರದಲ್ಲಿ ಪಂಟು ಬೋರ್ಡೊಂದನ್ನು ನೋಡಿದ.‘‘ನಿಮ್ಮ ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’’ ಪಂಟುವಿಗೆ ಅರ್ಥವಾಗಲಿಲ್ಲ. ದೇವರಿಗೆ ನಮಸ್ಕರಿಸುವುದಕ್ಕಾಗಿ ತಾನೇ ಮಸೀದಿಯ ಒಳಗೆ ಹೋಗುತ್ತಿದ್ದಾರೆ. ಚಪ್ಪಲಿ ಹಾಕ್ಕೊಂಡು ಹೋಗಬಾರದು ಎಂದು ಹೇಳಿರುವುದೂ ದೇವರೇ ತಾನೇ? ಹಾಗಿರುವಾಗ ಚಪ್ಪಲಿಯ ಜವಾಬ್ದಾರಿ ದೇವರದ್ದಲ್ಲವೇೆ? ಜಗ್ಗು ಇದ್ದಿದ್ದರೆ ಉತ್ತರ ಹೇಳುತ್ತಿದ್ದ ಅನ್ನಿಸಿತು. ತುಸು ದೂರದಲ್ಲಿ ಇನ್ನೊಂದು ಬೋರ್ಡ್ ಲಗತ್ತಿಸಲಾಗಿತ್ತು ‘‘ಚಪ್ಪಲಿ ಕಳ್ಳರಿದ್ದಾರೆ, ಎಚ್ಚರಿಕೆ!’’  ಅರೆ! ‘‘ದೇವರಿದ್ದಾನೆ...ಚಪ್ಪಲಿ ಕಳ್ಳರೇ ಎಚ್ಚರಿಕೆ!’’ ಎಂದು ಬೋರ್ಡ್ ಹಾಕಬೇಕಾಗಿತ್ತಲ್ಲ. ಕಳ್ಳರಿಗೆ ಎಚ್ಚರಿಕೆ ಕೊಡದೇ ಭಕ್ತರಿಗೇ ಎಚ್ಚರಿಕೆ ಕೊಡುತ್ತಿದ್ದಾರೆ? ಪಂಟುವಿಗೆ ಅರ್ಥವಾಗಲಿಲ್ಲ. ಹಾಗಾದರೆ ನಾನು ಇಲ್ಲಿ ಹೆದರುವ ಅಗತ್ಯವೇ ಇಲ್ಲ ಅಂದಾಯಿತು. ಎಚ್ಚರಿಕೆಯಿಂದಿರಬೇಕಾದವರು ಕಳ್ಳರಲ್ಲ, ಚಪ್ಪಲಿ ಹೊಂದಿರುವವರು. ದೇವರು ನಮ್ಮ ಜೊತೆಗಿದ್ದಾನೆ ಎನ್ನುವುದು ಬೋರ್ಡ್ ಹಾಕಿದವನಿಗೆ ಚೆನ್ನಾಗಿ ಗೊತ್ತಿರುವಂತಿದೆ. ಚಪ್ಪಲಿಗಳ ಕಡೆಗೆ ಕಣ್ಣಾಯಿಸಿದ. ಬಣ್ಣ ಬಣ್ಣದ ಥರಾವರಿ ಚಪ್ಪಲಿಗಳು. ಜಗ್ಗು ಹೇಳಿದ ಹಾಗೆ ಎಲ್ಲವೂ ಕ್ವಾಸ್ಟ್ಲಿ ಚಪ್ಪಲಿಗಳು. ‘‘ಅವರಲ್ಲೆಲ್ಲ ದುಬಾಯಿಯ ಹಣ ಇರುತ್ತವೆ. ಆದುದರಿಂದಲೇ ಅವರೆಲ್ಲ ದುಬಾರಿ ಚಪ್ಪಲಿಗಳು, ಶೂಗಳನ್ನು ಧರಿಸುತ್ತಾರೆ. ನಿನಗೆ ಬೇಕಾದುದನ್ನು ನೀನು ತೆಗೆದುಕೊಂಡು ಬಾ. ಅವರು ಕಳೆದು ಹೋದುದರ ಬಗ್ಗೆ ತುಂಬಾ ತಲೆಕೆಡಿಸಿಕೊಳ್ಳದೆ ಹೊಸತನ್ನು ತೆಗೆದುಕೊಂಡು ಬರುತ್ತಾರೆ...’’ ಎಂದಿದ್ದ ಜಗ್ಗು.ತಾನೇ ಕೈ ಹಾಕಿ ಬೇಕಾದುದನ್ನು ಆಯ್ಕೆ ಮಾಡಿಕೊಳ್ಳಲೇ ಅಥವಾ ಜಗ್ಗು ಹೇಳಿದಂತೆ ದೇವರೇ ಬಂದು ನನಗೆ ಬೇಕಾದ ಚಪ್ಪಲಿಯನ್ನು ಕೊಡಬಹುದೇೆ? ಎಂಬ ಪ್ರಶ್ನೆಯೂ ಅವನನ್ನು ಕಾಡತೊಡಗಿತು. ಅವನು ನೋಡು ನೋಡುತ್ತಿದ್ದಂತೆಯೇ ಒಂದು ಬಿಳಿ ಕಾರು ಕಾಂಪೌಂಡು ಹೊರಗೆ ಬಂದು ನಿಂತಿತು. ಬಿಳಿ ಪ್ಯಾಂಟು, ಬಿಳಿ ಬಟ್ಟೆ ಧರಿಸಿದ ಒಬ್ಬ ಗಡ್ಡಧಾರಿ ಅದರಿಂದ ಇಳಿದ. ಒಳಬಂದವನೇ ತನ್ನ ಚಪ್ಪಲಿಯ ಬೆಲ್ಟ್‌ನ್ನು ಕಳಚ ತೊಡಗಿದ. ಜಗ್ಗು ಕಣ್ಣು ಬೆಳಗಿತು. ತೆಗೆದುಕೊಳ್ಳುವುದ್ತಿದ್ದರೆ ಮಿರ ಮಿರ ಮಿಂಚುತ್ತಿರುವ ಈ ಚಪ್ಪಲಿಯನ್ನೇ ಎಂದು ನಿರ್ಧರಿಸಿ ಬಿಟ್ಟ. ಕಳಚಿಟ್ಟು ಆತ ಮಸೀದಿಯೊಳಗೆ ಹೋದದ್ದೇ ಕಾಲಿಗೆ ಧರಿಸಿಕೊಂಡು ಹೊರಟು ಬಿಡಬೇಕು. ಆದರೆ ಒಂದು ವಿಚಿತ್ರ ನಡೆಯಿತು.ಚಪ್ಪಲಿಯನ್ನು ಕಳಚಿದ ಆ ಗಡ್ಡಧಾರಿ ಕಟ್ಟೆಯ ಮೇಲೆ ಕುಳಿತಿದ್ದ ಜಗ್ಗುವಿನ ಕಡೆಗೇ ಬಂದ. ಅರೆ! ಇದೇನಿದು ನನ್ನೆಡೆಗೇ ದಾವಿಸಿ ಬರುತ್ತಿದ್ದಾನೆ. ನಾನು ಚಪ್ಪಲಿ ಕದಿಯಲು ಬಂದಿದ್ದೇನೆ ಎನ್ನುವುದು ಆತನಿಗೆ ತಿಳಿದು ಬಿಟ್ಟಿರಬಹುದೇ? ಓಡಿದರೆ ಹೇಗೆ? ಅಥವಾ ಜಗ್ಗು ಹೇಳುವಂತೆ ದೇವರೇ ನನಗೆ ಬೇಕಾದ ಚಪ್ಪಲಿಯನ್ನು ಆರಿಸಿ ನನ್ನ ಕೈಗೆ ಇಡುತ್ತಿದ್ದಾನೆಯೇ? ಈತ ಸಾಬರ ದೇವರಾಗಿರಬಹುದೇ?ಎಂದೆಲ್ಲ ಯೋಚಿಸುವಷ್ಟರಲ್ಲಿ ಗಡ್ಡಧಾರಿ ಹಸನ್ಮುಖನಾಗಿ ಆತನೆಡೆಗೆ ಬಾಗಿದ. ಎರಡೂ ಚಪ್ಪಲಿಗಳನ್ನು ಪಂಟುವಿನ ಪಕ್ಕದಲ್ಲಿ ಇಟ್ಟು ಹೇಳಿದ ‘‘ಜಾಗೃತೆಯಾಗಿ ನೋಡಿಕೊಳ್ಳಿ...ಐದು ಸಾವಿರ ರೂಪಾಯಿ ಬೆಲೆಬಾಳುವ ಚಪ್ಪಲಿ ಇದು...ನಿಮ್ಮ ಧೈರ್ಯದಲ್ಲಿ ಬಿಟ್ಟು ಹೋಗುತ್ತಿದ್ದೇನೆ’’ ಎಂದು ಅವನ ತೋಳನ್ನು ಅಮುಕಿ ಕಿಸೆಯಿಂದ ನೂರು ರೂಪಾಯಿ ನೋಟನ್ನು ತೆಗೆದು ಅವನ ಕೈಗಿಟ್ಟ. ಬಳಿಕ ಆತ ಮಸೀದಿಯೊಳಗೆ ಸರಿದು ಹೋದ. ಪಂಟು ದಿಗ್ಭ್ರಾಂತನಾಗಿದ್ದ. ಯಾವ ಚಪ್ಪಲಿಯನ್ನು ತಾನು ಹೊತ್ತೊಯ್ಯಬೇಕೆಂದು ಭಾವಿಸಿದ್ದೆನೋ ಅದೇ ಚಪ್ಪಲಿಯ ರಕ್ಷಣೆಯನ್ನು ಈತ ನನ್ನ ಕೈಗೆ ವಹಿಸಿ ಹೋಗಿದ್ದಾನೆ. ಅವನು ರೋಮಾಂಚನಗೊಂಡ. ಜೋಡಿ ಚಪ್ಪಲಿಯ ಜೊತೆಗೆ ನೂರು ರೂಪಾಯಿಯೂ ಸಿಕ್ಕಿದೆ. ದೇವರು ಯಾವ ರೂಪದಲ್ಲಿ ಬರುತ್ತಾನೆ ಎಂದು ಯಾರಿಗೆ ಗೊತ್ತು? ಅವನು ದೇವರೇ ಆಗಿರಬಹುದು. ಗಡ್ಡ ಬೇರೆ ಇಟ್ಟಿರುವುದರಿಂದ ಸಾಬರ ದೇವರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ‘ಜಾಗೃತೆಯಾಗಿ ನೋಡಿಕೊಳ್ಳಿ...’ ಎಂದ. ನನ್ನ ಮೇಲೆ ಭರವಸೆ ಇಟ್ಟು ಕೊಟ್ಟು ಹೋದ. ಅದೂ ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು. ಅಷ್ಟರಲ್ಲಿ ಇನ್ನಾವನೋ ಒಬ್ಬ ಬಂದು ತನ್ನ ಚಪ್ಪಲಿಯನ್ನೂ ಇವನ ಮುಂದೆ ಕಳಚಿಟ್ಟ. ಮತ್ತು 20 ರೂಪಾಯಿಯ ನೋಟನ್ನು ಕೈಯಲ್ಲಿಟ್ಟು ‘ಭದ್ರವಾಗಿ ನೋಡಿಕೊಳ್ಳಿ, ಹೊಸ ಚಪ್ಪಲಿ’ ಎಂದ. ಯಾರು? ಎತ್ತ ಎಂದು ಅವನು ನೋಡುವಷ್ಟರಲ್ಲಿ ಹಣ ಕೈಯಲ್ಲಿಟ್ಟವನು ಮಸೀದಿ ಸೇರಿಯಾಗಿತ್ತು. ಇದೀಗ ಒಬ್ಬೊಬ್ಬರೇ ಅವನ ಸುತ್ತ ತಮ್ಮ ಚಪ್ಪಲಿ ಕಳಚಿಟ್ಟು ಹೋಗುತ್ತಿದ್ದರು. ಅವನ ಕೈಗೆ 5 ರೂ., 10 ರೂ. 20 ರೂ., ಹೀಗೆ ಸೇರ್ಪಡೆಯಾಗುತ್ತಲೇ ಇದ್ದವು. ಅವನ ಸುತ್ತ ಈಗ ನೋಡಿದರೆ ನೂರಾರು ಚಪ್ಪಲಿಗಳು ‘ಆರಿಸಿಕೋ...ಬೇಕಾದುದನ್ನು ಆರಿಸಿಕೋ’ ಎನ್ನುತ್ತಿದ್ದವು. ಕಿಸೆ ತುಂಬಾ ಹಣವೂ. ತುಸು ಹೊತ್ತಲ್ಲಿ ಮಸೀದಿಯೊಳಗೆ ಎಲ್ಲರೂ ಜೊತೆಯಾಗಿ ನಮಾಝ್ ಮಾಡ ತೊಡಗಿದ್ದರು. ಈ ಚಪ್ಪಲಿಯನ್ನೆಲ್ಲ ಎತ್ತಿಕೊಂಡು ಹೋದರೆ ಕೇಳುವವರೇ ಇಲ್ಲ. ಪಂಟು ವಿಸ್ಮಿತನಾಗಿದ್ದ. ಜೀವನದಲ್ಲಿ ಮೊತ್ತ ಮೊದಲ ಬಾರಿಗೆ ಅವನಿಗೆ ಅವನ ಮೇಲೆಯೇ ಅಭಿಮಾನವೊಂದು ಬಂದು ಬಿಟ್ಟಿತು. ನಿಜಕ್ಕೂ ಅಷ್ಟೂ ಚಪ್ಪಲಿಗಳನ್ನು ತಾನು ಕಾಯುತ್ತಿದ್ದೇನೆಯೇ ಅಥವಾ ಅಷ್ಟೂ ಚಪ್ಪಲಿಗಳು ನನ್ನನ್ನು ಕಾಯುತ್ತಿವೆಯೇ? ತನಗೆ ತಾನೇ ಗೊಣಗಿಕೊಂಡ. ಐದು ಸಾವಿರ ರೂಪಾಯಿಯ ಚಪ್ಪಲಿಯನ್ನು ನನ್ನ ಬಳಿ ಬಿಟ್ಟು ಹೋದವನು ನನ್ನ ಮೇಲೆ ಭರವಸೆಯಿಟ್ಟು ಅದೆಷ್ಟು ನಿರಾಳವಾಗಿ ಹೋದ. ಅವರೆಲ್ಲರೂ ನನ್ನ ಬಗ್ಗೆ ಭರವಸೆಯಿಟ್ಟಿದ್ದರು. ಎದುರಲ್ಲಿದ್ದ ‘ನಿಮ್ಮ ಚಪ್ಪಲಿಗೆ ನೀವೇ ಜವಾಬ್ದಾರರು’ ‘ಚಪ್ಪಲಿ ಕಳ್ಳರಿದ್ದಾರೆ ಎಚ್ಚರಿಕೆ!’ ಎಂಬ ಬೋರ್ಡ್‌ಗಳನ್ನೇ ಅಣಕಿಸುವಂತೆ. ದೇವರನ್ನು ನಂಬುವಷ್ಟೇ ತನ್ಮಯವಾಗಿ ಅಪರಿಚಿತನಾಗಿರುವ ನನ್ನನ್ನು ನಂಬಿದರು.ಹೀಗೆ ಥರಥರವಾಗಿ ಯೋಚಿಸುತ್ತಾ ಕುಳಿತನೇ ಹೊರತು, ಚಪ್ಪಲಿಯನ್ನು ಹೊತ್ತೊಯ್ಯುವ ಧೈರ್ಯ ಅವನಿಗೆ ಬರುತ್ತಿರಲಿಲ್ಲ. ತುಸು ಹೊತ್ತಲ್ಲೇ ಎಲ್ಲರೂ ಮಸೀದಿಯಿಂದ ಹೊರ ಬರತೊಡಗಿದರು. ಒಬ್ಬೊಬ್ಬರಾಗಿ ಅವರವರ ಚಪ್ಪಲಿಗಳನ್ನು ಕಾಲಲ್ಲಿ ಧರಿಸಿ ಹೊರಟು ಹೋಗ ತೊಡಗಿದರು. ಆ ನೀಳ ಗಡ್ಡಧಾರಿ ಚಪ್ಪಲಿಯನ್ನು ಧರಿಸುತ್ತಿದ್ದಾಗ ತನ್ನ ಕಡೆ ನೋಡಿ ತುಂಟ ನಗು ನಕ್ಕ? ಅರೆ! ಅವನು ನಕ್ಕದ್ದು ಯಾಕೆ? ನಾನು ಕಳ್ಳನೆನ್ನುವುದು ಅವನಿಗೆ ಗೊತ್ತಿತ್ತೇ? ಅಥವಾ ಅವನು ನಿಜಕ್ಕೂ ಸಾಬರ ದೇವರೇ ಆಗಿರಬಹುದೇ? ನನ್ನನ್ನು ಪರೀಕ್ಷಿಸಲೆಂದು ಹೀಗೆ ಗಡ್ಡಧಾರಿಯಾಗಿ ಬಂದಿರಬಹುದೆ? ಅವನಿಗೆ ಅರ್ಥವಾಗಲಿಲ್ಲ. ಎಲ್ಲರೂ ಅವರವರ ಚಪ್ಪಲಿಗಳ ಜೊತೆಗೆ ಹೊರಟು ಹೋದ ಬಳಿಕವೂ ಅವನು ಕಡೆದಿಟ್ಟ ಕಲ್ಲಿನಂತೆ ಕುಳಿತೇ ಇದ್ದ. ಅಲ್ಲೇ ಇದ್ದ ಯಾರೋ ‘‘ಭಾಯಿ ತಗೋ’’ ಎಂದು ಒಂದು ಕಟ್ಟನ್ನು ಅವನ ಮುಂದಿಟ್ಟರು. ಕಟ್ಟು ಬಿಚ್ಚಿದರೆ ಅದರಲ್ಲಿ ಬಿರಿಯಾನಿ ಗಮಗಮಿಸುತ್ತಿತ್ತು.ಆತ ಬಿರಿಯಾನಿ ತಿಂದು, ಪಕ್ಕದಲ್ಲೇ ಇದ್ದ ನೀರಿನ ಟ್ಯಾಪ್‌ನಲ್ಲಿ ಕೈ ತೊಳೆದ. ನೀರು ಕುಡಿದ. ಬಳಿಕ ಕಿಸೆಯಲ್ಲಿದ್ದ ಹಣವನ್ನು ಎಣಿಸಿದ. 350 ರೂಪಾಯಿಯಿತ್ತು. ಹಾಗೆ ಯಾರೋ ಕೀಲಿ ತಿರುಗಿಸಿ ಬಿಟ್ಟ ಗೊಂಬೆಯಂತೆ ಪಂಟು ನಡೆಯ ತೊಡಗಿದ. ದೂರದಲ್ಲೊಂದು ಪುಟ್ಟ ಚಪ್ಪಲಿ ಅಂಗಡಿ ಕಂಡಿತು. ನೇರವಾಗಿ ಅದರ ಒಳ ಹೊಕ್ಕ. ‘‘350 ರೂಪಾಯಿಗೆ ಆಗುವ ಹಾಗೆ ಒಂದು ಚಪ್ಪಲಿ ಕೊಡಿ ಸಾಮಿ...’’ ಎಂದ.ಅಂಗಡಿಯಾತ ಅವನೆಡೆಗೆ ಬಂದ. ಅವನ ಕೈಯಲ್ಲಿ ವಿವಿಧ ಸೈಜಿನ ಚಪ್ಪಲಿಗಳಿದ್ದವು. ಬಾಗಿದವನು ಪಂಟುವಿನ ಪಾದವನ್ನು ತನ್ನ ತೊಡೆಯ ಮೇಲಿಟ್ಟು ಚಪ್ಪಲಿಯನ್ನು ಜೋಡಿಸಿದ. ಪಂಟುವಿನ ಬದುಕಿನಲ್ಲೇ ಅದೊಂದು ವಿಚಿತ್ರ ಅನುಭವ. ತನ್ನ ಪಾದವನ್ನು ಯಾವ ಸಂಕೋಚವೂ ಇಲ್ಲದೆ ತನ್ನ ತೊಡೆಯ ಮೇಲೆ ಇಟ್ಟು ಕೊಂಡು ಚಪ್ಪಲಿಯನ್ನು ಜೋಡಿಸಿದ ಈತ ದೇವರೇ ಯಾಕಾಗಿರಬಾರದು? ಎಂಬ ಆಲೋಚನೆ ತಲೆಯಲ್ಲಿ ಬಂತು. ತನ್ನ ಪಾದಕ್ಕೆ ಹೇಳಿ ಮಾಡಿಸಿದ ಚಪ್ಪಲಿ ಆಗಿತ್ತು. ಧರಿಸಿದ. ಅವನಿಗೆ ಅಳುಬಂದಿತ್ತು. ‘ಇಷ್ಟು ಬೆಲೆ ಬಾಳುವ ಚಪ್ಪಲಿಯನ್ನು ತಾನು ಧರಿಸಿರಲೇ ಇಲ್ಲ’ ಎನ್ನುತ್ತಾ ಆ ಜೋಡಿ ಚಪ್ಪಲನ್ನು ತನ್ನ ಎದೆಗೊತ್ತಿ ಹಿಡಿದ. ಅಂದು ಸಂಜೆ ಜಗ್ಗುವಿನ ಮುಂದೆ ಆ ಚಪ್ಪಲಿಯನ್ನಿಟ್ಟು ಹೇಳಿದ ‘‘ದೇವ್ರೇ ಕೈಯಾರೆ ನನಗೆ ಕೊಟ್ಟ ಚಪ್ಪಲಿ ಇದು...ಇದನ್ನು ಕಾಲಲ್ಲಿ ಧರಿಸೋಕೆ ಮನಸ್ಸೇ ಬರುತ್ತಿಲ್ಲ’’‘‘ಹೇ...ಅಂಗಾರೆ ತಲೆ ಮೇಲೆ ಹೊತ್ಕೊಂಡು ನಡಿ...’’ ಎನ್ನುತ್ತಾ ಜಗ್ಗು ನಕ್ಕ.ಪಂಟು ಮೊದಲ ಬಾರಿಗೆ ಚಪ್ಪಲಿಯನ್ನು ತಲೆಯ ಮೇಲೆ ಇಟ್ಟುಕೊಳ್ಳಬೇಕೋ, ಕಾಲಿಗೆ ಧರಿಸಬೇಕೋ ಎಂಬ ಗೊಂದಲದಲ್ಲಿದ್ದ. ***ಅಂದು ಸಂಜೆ ಪಂಟು ತನ್ನ ಹುಡುಗಿಯನ್ನು ಭೇಟಿಯಾಗಬೇಕಾಗಿತ್ತು ಬೆಳಗ್ಗೆ ಬೇಗನೇ ಎದ್ದು ಹತ್ತಿರದ ಕೆರೆಯಲ್ಲಿ ಮಿಂದು, ಇದ್ದುದರಲ್ಲೇ ಬಿಳಿಯಾದ ಬಟ್ಟೆ ಬರೆ ಧರಿಸಿ ಕಾಲಿಗೆ ಹೊಸ ಚಪ್ಪಲಿ ಸಿಕ್ಕಿಸಿಕೊಂಡ. ಅವನ ಬದುಕಿನಲ್ಲೇ ಅದೇ ಮೊದಲ ಬಾರಿ ಅವನ ಮನಸ್ಸು ಒಂದು ವಿಚಿತ್ರ ಅನುಭೂತಿಗೆ ಸಿಕ್ಕಿತ್ತು. ಈವರೆಗಿನ ತನ್ನ ಬದುಕನ್ನೆಲ್ಲ ತಿರಸ್ಕರಿಸುವ, ಹೊಸ ಬದುಕೊಂದಕ್ಕೆ ತನ್ನನ್ನು ತಳ್ಳುವ ಶಕ್ತಿ ಆ ಅನುಭೂತಿಗಿರುವುದು ಅವನ ಗಮನಕ್ಕೆ ತೆಳುವಾಗಿ ಬರುತ್ತಿತ್ತು. ವಿಚಿತ್ರವೆಂದರೆ ಬೆಳಗ್ಗಿನಿಂದಲೇ ಅವನ ಮನಸ್ಸು ಒಂದು ಹಂಬಲದಲ್ಲಿತ್ತು. ಈ ಚಪ್ಪಲಿ ಧರಿಸಿಕೊಂಡು ಆ ಮಸೀದಿಯ ಕಡೆಗೆ ಮತ್ತೊಮ್ಮೆ ನಡೆಯಬೇಕು. ಅವನಿಗೆ ಇನ್ನಷ್ಟು ಚಪ್ಪಲಿಯ ಆಸೆ ಇರಲಿಲ್ಲ. ತನ್ನ ಕಡೆಗೆ ನೋಡಿ ತುಂಟ ನಗೆ ಬೀರಿದ ಆ ಗಡ್ಡಧಾರಿ ಅಲ್ಲೆಲ್ಲಾದರೂ ಸಿಗುತ್ತಾನೆಯೋ ಎಂಬ ಆಸೆ ಅವನದು. ಬೆಳಗ್ಗಿನಿಂದ ಅದನ್ನೇ ಯೋಚಿಸುತ್ತಾ ಇದ್ದವನು ಇದ್ದಕ್ಕಿದ್ದಂತೆಯೇ ಎದ್ದು ಹೊರಟೇ ಬಿಟ್ಟ. ಮಸೀದಿಯ ಮುಂದೆ ವಿಶೇಷ ಜನರೇನೂ ಕಾಣಲಿಲ್ಲ. ಆಗಾಗ ಬೆರಳೆಣಿಕೆಯ ಜನರು ಒಳಗೆ ಹೊರಗೆ ಬಂದು ಹೋಗುವುದನ್ನು ಮಾಡುತ್ತಿದ್ದರು. ಇವನು ಮಸೀದಿಯ ಆವರಣದೊಳಗೆ ಕಾಲಿಟ್ಟನಾದರೂ ಯಾರೂ ಇವನನ್ನು ಗಮನಿಸಲಿಲ್ಲ. ಆ ಮಸೀದಿಯ ಒಳಗಿನಿಂದ ಯಾರೋ ತನ್ನನ್ನು ಸೆಳೆಯುತ್ತಿದ್ದಾರೆ ಅನ್ನಿಸುವ ಭಾವ. ಹೋಗಿ ಆ ಸಾಬರ ದೇವರಿಗೆ ಒಮ್ಮೆ ಕೈ ಮುಗಿದು ಬಂದರೆ ಹೇಗೆ ಎನ್ನುವ ಅನಿಸಿಕೆ! ಮುಂದಕ್ಕೆ ಹೆಜ್ಜೆಯಿಟ್ಟ. ಅಷ್ಟರಲ್ಲಿ ಒಬ್ಬ ಬಂದು ಪಕ್ಕದ ಕಿರು ಟ್ಯಾಂಕ್‌ನಲ್ಲಿದ್ದ ನೀರನ್ನು ಕಾಲಿಗೆ ಸುರಿದು ಮಸೀದಿಯ ಒಳಗೆ ಹೋಗುವುದನ್ನು ನೋಡಿದ. ಇವನೂ ಅವನನ್ನೇ ಅನುಸರಿಸಿದ. ಅಳುಕುತ್ತಾ ಅವನು ಮಸೀದಿಯ ಒಳಗೆ ಹೆಜ್ಜೆಯಿಟ್ಟ. ಅಮೃತ ಶಿಲೆಗಳನ್ನು ಹಾಸಿದ ವಿಶಾಲವಾದ ಭವನ ಅದು. ದೊಡ್ಡ ದೊಡ್ಡ ಕಿಟಕಿಗಳು. ದೊಡ್ಡ ದೊಡ್ಡ ಕಂಬಗಳು ಆ ಮಸೀದಿಯನ್ನು ಎತ್ತಿ ನಿಲ್ಲಿಸಿದ್ದವು. ಅಪಾರ ಬೆಳಕು. ನೆಲ ಹಾಲಿನಂತೆ ಹೊಳೆಯುತ್ತಿತ್ತು. ನೆತ್ತಿಯ ಮೇಲೆ ದೊಡ್ಡ ಫ್ಯಾನುಗಳು ತಿರುಗುತ್ತಿದ್ದವು. ಪಂಟು ಮುಂದಕ್ಕೆ ಕಣ್ಣಾಯಿಸಿದ. ಒಂದೆರಡು ಜನ ಬಗ್ಗಿ, ಏಳುವ ಕೆಲಸವನ್ನು ಮಾಡುತ್ತಿದ್ದರು. ಪಂಟು ಆ ವಿಶಾಲ ಆವರಣದೊಳಗೆ ಸಾಬರ ದೇವರನ್ನು ಹುಡುಕುತ್ತಿದ್ದ. ಬರೇ ಖಾಲಿ ....ಗೋಡೆಯಲ್ಲಿ ಒಂದು ಫೋಟೋ ಕೂಡ ಇಲ್ಲ. ಹಾಂ...ಗೋಡೆಯಲ್ಲಿ ಒಂದೆರಡು ದೊಡ್ಡ ದೊಡ್ಡ ಗಡಿಯಾರಗಳು ಟಿಕ್ ಟಿಕ್ ಎನ್ನುವ ಸದ್ದು ಮಾಡುತ್ತಿದ್ದವು. ಹಾಗಾದರೆ ದೇವರೆಲ್ಲಿದ್ದಾನೆ? ಅವನಿಗೆ ಆರತಿ ಎತ್ತಿ ಪ್ರಸಾದ ಕೊಡುವವರು ಯಾರು? ಒಂದೂ ಅರ್ಥವಾಗಲಿಲ್ಲ. ನೋಡಿದರೆ ದೂರದ ಮೂಲೆಯೊಂದರಲ್ಲಿ ಕಿಟಕಿಯ ಪಕ್ಕ ಒಬ್ಬ ಗಡ್ಡಧಾರಿ ಮುದುಕ ಕುಳಿತು ಜಪಮಣಿ ಎಣಿಸುತ್ತಿರುವುದನ್ನು ನೋಡಿ ಅವನ ಕಣ್ಣು ಬೆಳಗಿತು. ಅದ್ಯಾರು? ಅವನೇ ಈ ಸಾಬರ ದೇವರು ಇರಬಹುದೇ? ನೇರವಾಗಿ ಅವನ ಬಳಿಗೆ ನಡೆದ. ತನ್ನ ಬಳಿ ನಿಂತ ಆಗಂತುಕನನ್ನು ಜಪಮಣಿ ಎಣಿಸುತ್ತಿದ್ದ ಮುದುಕ ತಲೆಯೆತ್ತಿ ನೋಡಿದ. ಪಂಟುವಿಗೆ ಅವನ ಬಳಿ ಏನು ಕೇಳಬೇಕು ಎಂದೇ ಗೊತ್ತಾಗದೆ ‘‘ಇಲ್ಲಿ ದೇವರು ಎಲ್ಲಿದ್ದಾನೆ?’’ ಎಂದು ಕೇಳಿ ಬಿಟ್ಟ. ಮುದುಕ ದಿಗ್ಭ್ರಾಂತನಾಗಿ ಆಗಂತುಕನನ್ನು ನೋಡಿದ. ಇಂತಹದೊಂದು ಅಧ್ಯಾತ್ಮ ಪ್ರಶ್ನೆಯನ್ನು ಈವರೆಗೆ ಯಾರೂ ಅವನಲ್ಲಿ ಕೇಳಿರಲಿಲ್ಲ. ಆಘಾತದಿಂದ ಆತ ಆಗಂತುಕನ ಮುಖವನ್ನು ನೋಡುತ್ತಲೇ ಇದ್ದ.‘‘ದೇವರಿಗೆ ಕೈ ಮುಗಿದು ಅಡ್ಡ ಬೀಳಬೇಕಾಗಿದೆ. ಇಲ್ಲಿ ನಿಮ್ಮ ದೇವರೆಲ್ಲಿದ್ದಾನೆ ಹೇಳಿ?’’ ಪಂಟು ವಿನೀತನಾಗಿ ಮತ್ತೆ ಕೇಳಿದ.ಮುದುಕ ಮುಗುಳ್ನಕ್ಕ. ‘‘ಸುತ್ತ ಮುತ್ತ ಎಲ್ಲ ದೇವರಿದ್ದಾನೆ. ಈ ಗಾಳಿಯಲ್ಲಿ, ಬೆಳಕಲ್ಲಿ, ಪರಿಮಳದಲ್ಲಿ....ಎಲ್ಲ. ಇಲ್ಲಷ್ಟೇ ಅಲ್ಲ, ಹೊರಗೂ ಇದ್ದಾನೆ....ನಮ್ಮ ಒಳಗೂ ಇದ್ದಾನೆ....ಎಲ್ಲೆಡೆ ದೇವರಿದ್ದಾನೆ....’’‘‘ಹಾಗಾದರೆ ನಾನು ಇಲ್ಲಿ ಯಾರಿಗೆ ಅಡ್ಡ ಬೀಳಲಿ...ಹೇಗೆ ಕೈ ಮುಗಿಯಲಿ...’’‘‘ನಿನಗೇಕೆ ಕೈಮುಗಿಯಬೇಕು ಅನ್ನಿಸಿದೆ?’’ ಮುದುಕ ಕೇಳಿದ.‘‘ನನಗವನು ಚಪ್ಪಲಿ ಕೊಟ್ಟ’’ ಪಂಟು ಉತ್ತರಿಸಿದ.ಮುದುಕ ಮುಗುಳ್ನಕ್ಕ. ‘‘ನಿನಗವನು ಕೊಟ್ಟದ್ದು ಬರೀ ಚಪ್ಪಲಿ ಮಾತ್ರವೇ?’’ ಮುದುಕ ಕೇಳಿದ.‘‘ಹೌದು. ಅವನೇ ಕೈಯಾರೆ ತಂದು ಕೊಟ್ಟ. ನಾನು ಅವನನ್ನು ನೋಡಿದೆ. ಅವನು ನನ್ನನ್ನು ನೋಡಿ ತುಂಟ ನಗೆ ನಕ್ಕ...’’  ‘‘ನೀನು ಹೇಳಿದ್ದನ್ನು ನಾನು ನಂಬುತ್ತೇನೆ. ಅವನ ಕೈಯಿಂದ ನೀನು ಚಪ್ಪಲಿ ತೆಗೆದುಕೊಂಡದ್ದು ನಿಜವೇ ಆಗಿದ್ದರೆ ಅವನು ಅದಕ್ಕಾಗಿ ನಗಲೇ ಬೇಕಾಗುತ್ತದೆ....’’ ಎಂದವನು ಒಂದು ಕ್ಷಣ ವೌನವಾದ. ‘‘ಆದರೆ ಅವನಿಂದ ನೀನು ಪಡೆದದ್ದು ಚಪ್ಪಲಿ ಮಾತ್ರವೇ ಅಲ್ಲ... ಅದರ ಜೊತೆಗೆ ಅವನು ಇನ್ನೇನೋ ಕೊಟ್ಟಿರಬೇಕು....ಸರಿಯಾಗಿ ನೋಡಿಕೋ....’’ ಎಂದ ಮುದುಕ ಪಕ್ಕದಲ್ಲೇ ಇದ್ದ ಅದೇನೋ ಮರದ ಪುಟ್ಟ ಹಲಗೆಯಂತಹ ವಸ್ತುವನ್ನು ಎಳೆದುಕೊಂಡ. ಆ ಹಲಗೆಗೆ ನಾಲ್ಕು ಚಕ್ರಗಳಿದ್ದವು. ಮತ್ತು ಎರಡೂ ಕೈಗಳನ್ನು ನೆಲಕ್ಕೆ ಒತ್ತಿ ಮುದುಕ ಆ ಹಲಗೆ ಏರಿದ. ಪಂಟು ಬೆಚ್ಚಿದ. ಮುದುಕನಿಗೆ ಎರಡು ಕಾಲುಗಳೇ ಇರಲಿಲ್ಲ. ತನ್ನ ಹಲಗೆಯ ಗಾಡಿಯಲ್ಲಿ ದರದರನೆ ಸಾಗಿ ಮಸೀದಿಯ ಹೊರಬಾಗಿಲು ದಾಟಿದ ಮುದುಕ ಕಾಣೆಯಾಗಿ ಬಿಟ್ಟ. ಪಂಟು ನಿಂತಲ್ಲೇ ಕಲ್ಲಾಗಿ ಬಿಟ್ಟ. ಅವನು ಸಣ್ಣಗೆ ಕಂಪಿಸುತ್ತಿದ್ದ. ಸುಸ್ತಾದವನಂತೆ ಗೋಡೆಯನ್ನು ಆಧರಿಸಿಕೊಂಡ. ಹಾಗೆಯೇ ಕಾಲಿಲ್ಲದವನಂತೆ ಕುಸಿದು ತುಂಬಾ ಹೊತ್ತು ಅಲ್ಲೇ ಕುಳಿತು ಬಿಟ್ಟ. ಒಂದರ್ಧ ಗಂಟೆಯ ಬಳಿಕ ಅವನು ಎದ್ದು ಹೊರಟ. ಮಸೀದಿಯ ಹೆಬ್ಬಾಗಿಲು ದಾಟಿದವನೇ ಅಂಗಳಕ್ಕೆ ಬಂದ. ಹೊರಾಂಗಣದ ಮೂಲೆಯಲ್ಲಿ ಇಟ್ಟಿರುವ ತನ್ನ ಚಪ್ಪಲಿಯ ಕಡೆಗೆ ನಡೆದ. ನೋಡಿದರೆ ಅವನ ಚಪ್ಪಲಿ ಅಲ್ಲಿ ಕಾಣಲಿಲ್ಲ.ಅದನ್ನು ಹುಡುಕುವ ಪ್ರಯತ್ನವನ್ನೇ ಮಾಡದ ಪಂಟು ಮಸೀದಿಯ ಕಾಂಪೌಂಡ್ ಕಟ್ಟೆಯನ್ನೇರಿ ಕುಳಿತು ಆಕಾಶವನ್ನು ಚುಚ್ಚುವ ಪ್ರಯತ್ನದಲ್ಲಿದ್ದ ಮಿನಾರವನ್ನೊಮ್ಮೆ ನೋಡಿದ. ಅವನೊಳಗೀಗ ಅದೇನೋ ಕಳೆದು ಕೊಂಡು ಹಗುರಾದ ಭಾವ, ಜೊತೆಗೆ ಅದೇನೋ ಪಡೆದುಕೊಂಡು  ಸುಸ್ತಾದವನ ಸ್ಥಿತಿ. ಇದರಲ್ಲಿ ಯಾವುದು ನಿಜ ಎನ್ನೋದು ಸ್ಪಷ್ಟವಾಗದೆ ತನ್ನ ಮುಂದೆ ಹರಡಿಕೊಳ್ಳುತ್ತಿರುವ ಚಪ್ಪಲಿಗಳನ್ನು ಗಮನಿಸ ತೊಡಗಿದ. 
... ಮುಂದೆ ಓದಿ


ಓ ಮನಸೇ ನೀನೇಕೆ ಹೀಗೆ
ಹೊನಲು - ಶನಿವಾರ ೦೯:೩೦, ಮಾರ್ಚ್ ೧೮, ೨೦೧೭

– ಕೆ.ಚರಣ್ ಕುಮಾರ್. ಓ ಮನಸೇ ನೀನೇಕೆ ಹೀಗೆ ನಿನದು ಎಂದೆಂದೂ ಅರ‍್ತವಾಗದ ಬಾಶೆ ಕಂಡಿದ್ದೆಲ್ಲವ ಬೇಕೆನ್ನುವೆ ಸಿಗದಿದ್ದಾಗ ಪೇಚಾಡುವೆ ಕಾಣದ ಪ್ರೀತಿಯ ಹುಡುಕಾಡುವೆ ನಿನ್ನ ನೀ ಪ್ರೀತಿಸುವುದ ಮರೆತಿರುವೆ ಸೋಲೊಂದು ಎದುರಾದಾಗ ಕುಗ್ಗುವೆ ಅವರಿವರ ಮೊಸಳೆ ಕಣ್ಣೀರಿಗೆ ಕರಗುವೆ ವಂಚನೆಗೆ ಒಳಗಾದಾಗ ಮತ್ತೆ ಮತ್ತೆ ಕೊರಗುವೆ ಕಂಡ ಕಂಡ ದೇವರನು ಶಕ್ತಿ ನೀಡ್ ಎನ್ನುವೆ ನಿನ್ನ... Read More ›... ಮುಂದೆ ಓದಿ


ಕುಡುಕನಿಗೆ ಉಪದೇಶ
ಹೊನಲು - ಶುಕ್ರವಾರ ೦೯:೩೦, ಮಾರ್ಚ್ ೧೭, ೨೦೧೭

– ಶಶಿ.ಎಸ್.ಬಟ್. ಏಕೆ ಕುಡಿವೆ ಅಳತೆಮೀರಿ ಸಾಕು ಮಾಡು ಮನುಜನೆ| ಮನೆಯು ಹೋಗಿ ನರಕವಾಯ್ತು ಸಾಕುಮಾಡು ಕುಡುಕನೆ|| ಹೆಜ್ಜೆ ತಪ್ಪಿ ನಡೆಯುತಿರುವೆ ನಿನಗೆ ದಾರಿ ಕಾಣದು| ಬುದ್ದಿ ಶೂನ್ಯನಾಗಿ ಬದುಕಿ ನಿನಗೆ ಏನು ತೋಚದು|| ನಿನ್ನ ನಂಬಿ ಇರುವವರಿಗೆ ನೀನು ಏನು ಕೊಡುವೆಯಾ| ಅವರ ಕಶ್ಟಸುಕವನೆಲ್ಲ ಏನು ಎಂದು ತಿಳಿದೆಯಾ|| ನಿನ್ನ ಒಂದು ಪ್ರೀತಿಗಾಗಿ ಮನೆಯವರೆಲ್ಲ ಕಾದರೆ|... Read More ›... ಮುಂದೆ ಓದಿ


ಕೊರಳು-ಕೊಳಲು
ಹೊನಲು - ಗುರುವಾರ ೦೯:೩೦, ಮಾರ್ಚ್ ೧೬, ೨೦೧೭

– ಅಜಿತ್ ಕುಲಕರ‍್ಣಿ. ನನ್ನ ಕೊರಳು ನಿನ್ನ ಕೊಳಲು ಇವಕಿಂತ ಏನು ಸೊಗಸಿದೆ? ಕೊರಳ ಬಳಸಿ ಕೊಳಲ ನುಡಿಸು ಇದಕಿಂತ ನಲಿವು ಎಲ್ಲಿದೆ? ನನ್ನೊಲು ಒಲವ ಕೊಡುವರಾರೋ ನೆರೆಯೋ ನನ್ನಯ ಹತ್ತಿರ ಸುತ್ತಿ ಬಳಸಿ ಬಳಸು ಬಾರೋ ಕೊಡುವೆ ಪ್ರಶ್ನೆ ಇರದುತ್ತರ! ಮಾತು ಮುಗಿಯದು ಮೌನ ಕೊನೆಯದು ನಮ್ಮಿಬ್ಬರ ಒಡನಾಟದಲಿ ಹಸೆಯು ಆರದು ಹಾಡು ತೀರದು ನಮ್ಮ... Read More ›... ಮುಂದೆ ಓದಿ


೧೦ ಮುಂದೆ›

“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.