ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!ಓದಿದ್ದು ಕೇಳಿದ್ದು ನೋಡಿದ್ದು - ಮಂಗಳವಾರ ೦೫:೦೧, ಜನವರಿ ೬, ೨೦೦೯
ಮಹತ್ತ್ವಾಕಾಂಕ್ಷೆ ಎಂಬ ರೋಗ
---------------------------------------------------------
ಬಸ್ ಸೀಟು ನಿಮ್ಮ ಬಗ್ಗೆ ಬಹಳಷ್ಟು ಹೇಳುತ್ತದೆ!
-------------------------------------------------------------------------
ಥೈರಾಯ್ಡ್ ಸಮಸ್ಯೆ ಮತ್ತು ಡಯಬಿಟೀಸ್
--------------------------------------------------------------------
ಅಂತಾರಾಷ್ಟ್ರೀಯ ಖಗೋಳ ವಿಜ್ಞಾನ ವರ್ಷ
-----------------------------------------------------------------------
ಕೂಡ್ಲಗಿಯಲ್ಲಿ ನಾಲ್ಕು ಸಾವಿರ ಮೆಗಾವ್ಯಾಟ್ ವಿದ್ಯುತ್ ಸ್ಥಾವರ
----------------------------------------------------------------------
ನೀವಾಗಿದ್ದರೆ ಏನು ಮಾಡುತ್ತಿದ್ದಿರಿ?
----------------------------------------------------------------------
ಸುನಾಮಿಗೆ ಯಾರನ್ನು ಬಯ್ಯೋಣ?
------------------------------------------------------------------
(Asian Age)
------------------------------------------------------------------------
(TOI)
-------------------------------------------------------------------------
(Hindu)
-------------------------------------------------------------------------
ದಕ್ಷಿಣ ಬೆಂಗಳೂರಿನ ಆಹಾರ ಕೇಂದ್ರಗಳುತುಂತುರು ಹನಿಗಳು... - ಮಂಗಳವಾರ ೧೧:೩೨, ಜನವರಿ ೬, ೨೦೦೯
ಬೆಂಗಳೂರಿನ ಪ್ರಸಿದ್ಧ ಹೋಟೇಲುಗಳ ಹೆಸರು ಕೇಳಿದ ತಕ್ಷಣ ಎಲ್ಲರಿಗೂ ಎಂ.ಟಿ.ಆರ್, ವಿದ್ಯಾರ್ಥಿ ಭವನ, ಇತ್ಯಾದಿ ಹಳೆಯ ಹೆಸರುಗಳೇ ನೆನಪಿಗೆ ಬರುತ್ತವೆ. ಆದರೆ ಅದೆಷ್ಟೋ ಪ್ರಚಾರವಿಲ್ಲದ ಹೋಟೇಲುಗಳ ತಿಂಡಿಗಳು ಪ್ರಸಿದ್ಧ ಹೋಟೆಲುಗಳ ದೋಸೆಗಳನ್ನು- ಇಡ್ಲಿ ಗಳನ್ನು ನಿವಾಳಿಸಿ ಎಸೀಬೇಕು ಹಾಂಗಿರುತ್ತದೆ. ಆದರೇನು ಮಾಡೋಣ, ಅವುಗಳನ್ನು ಗುರುತಿಸಿಯೇ ಇಲ್ಲವೇ..
ನಾನು ಕಳೆದ ಮೂರು ವರುಷಗಳಿಂದ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಇರೋದ್ರಿಂದ, ಇಲ್ಲಿನ ಹಲವು ಹೋಟೇಲುಗಳ ಮೇಲೆ ನಂಗೆ ಋಣ ಇದೆ! ಪಾಪ, ಹೊತ್ತು ಹೊತ್ತಿಗೆ ನನ್ನಂತಹವರಿಗೆ ಬೇಕು ಬೇಕಾದ್ದನ್ನ ಮಾಡಿ ಹಾಕುತ್ತಿವೆ, ಈ ಹೋಟೇಲುಗಳು.
ಹಾಗಾಗಿ ಇಲ್ಲಿನ ವಿಶೇಷಗಳ ಕುರಿತ ಮಾಹಿತಿಯನ್ನ ನಿಮ್ಗೆ ಕೊಡೋಣ ಅನ್ನಿಸಿತು.
ಬನಶಂಕರಿ ಬಿಡಿಎ ಕಾಂಪ್ಲೆಕ್ಸ್ ಎಸ್.ಎಲ್.ವಿ:
ಬನಶಂಕರಿ ಬಿ.ಡಿ.ಎ ಕಾಂಪ್ಲೆಕ್ಸ್ ನಿಂದ ಸ್ವಲ್ಪ ಮುಂದೆ ಬಂದ್ರೆ, ಈ ಪುಟ್ಟ ಹೋಟೇಲ್ ಸಿಗತ್ತೆ. ಇಲ್ಲಿನ ಸ್ಪೆಷಲ್ಲ್- ಇಡ್ಲಿ,ವಡೆ ಮತ್ತು ಚಟ್ನಿ. ಬೆಳಗ್ಗಿಂದ ಸಂಜೆ ತನಕಾ ಎಷ್ಟು ಹೊತ್ತಿಗೆ ಬಂದ್ರೂ, ಇಡ್ಲಿ ವಡೆ ಲಭ್ಯ. ಇಲ್ಲಿನ ಮಸಾಲೆ ವಡೇ ಕೂಡ ಚೆನ್ನಾಗಿದೆ. ಈ ಹೋಟೆಲು ಸದಾ ಜನರಿಂದ ತುಂಬಿ ತುಳುಕುತ್ತಿದ್ದಂತೆ ಅನ್ನಿಸಿದರೂ, ಕ್ವಿಕ್ ಸರ್ವೀಸು ಇರೋ ಕಾರಣ, ತೊಂದರೆಯಿಲ್ಲ. ಈ ಕಡೆ ಏನಾದ್ರೂ ಬಂದ್ರೆ, ಖಂಡಿತಾ ಟ್ರೈ ಮಾಡಿ- ಹೊಟ್ಟೆ ತುಂಬಿದ್ದರೂ ತೊಂದರೆಯಿಲ್ಲ.
ಗಾಂಧಿ ಬಜಾರ್ ಮಹಾಲಕ್ಷ್ಮೀ ಟಿಫಿನ್ ಸೆಂಟರ್
ಈ ಹೋಟೇಲು ನಮ್ಮ ಪ್ರಣತಿ ತಂಡದ ಒಂಥರಾ ಅಫೀಷಿಯಲ್ ಮೀಟಿಂಗ್ ಪ್ಲೇಸು. ಗಾಂಧೀ ಬಜಾರು ಸರ್ಕಲ್ನಲ್ಲಿ ಎಡಕ್ಕೆ ಒಂದು ೧೦೦ ಮೀಟರ್ ದೂರ ಹೋದ್ರೆ ಈ ಹೋಟೆಲ್ ಸಿಗತ್ತೆ. ಇಲ್ಲಿನ ಖಾಲಿ ದೋಸೆ ಮತ್ತು ಚಟ್ನಿಯ ರುಚಿ, ಅದ್ಭುತ. ಜೊತೆಗೆ ಕಾಫಿ ಕೂಡ. ಆರಾಮಾಗಿ ಕೂತು ತಿನ್ನಬಹುದಾದ ವ್ಯವಸ್ಥೆ, ಇಲ್ಲಿನ ಪ್ಲಸ್ ಪಾಯಿಂಟು.
ಪುಳಿಯೋಗರೆ ಪಾಯಿಂಟ್- ಡಿ.ವಿ.ಜಿ ರೋಡ್ ಬಸವನಗುಡಿ
ಕಹಳೆಬಂಡೆ ಪಾರ್ಕ್ ಪಕ್ಕದಲ್ಲೇ ಇರುವ ಈ ಹೋಟೆಲ್ ಗೆ, ಡಿ.ವಿ.ಜಿ ರೋಡ್ ನಲ್ಲಿ ಸ್ವಲ್ಪ ದೂರ ಬಂದು ಎಡಗಡೆ ರೋಡಲ್ಲಿ ಬರಬೇಕು. ಹೆಸರೇ ಹೇಳುವ ಹಾಗೆ ಈ ಹೋಟೆಲ್, ಪುಳಿಯೋಗರೆ-ಮೊಸರಿಗೆ ಫೇಮಸ್ಸು. ಜೊತೆಗೆ ಇಲ್ಲಿನ ಸ್ವೀಟ್ ಪೊಂಗಲ್ ಕೂಡ ಸೂಪರ್ರು. ಚಿತ್ರಾನ್ನ, ಬಿಸಿಬೇಳೆ ಬಾತ್ ಕೂಡ ಚೆನ್ನಾಗಿರತ್ತೆ.
ದಾವಣಗೆರೆ ಬೆಣ್ಣೆ ದೋಸೆ-ಎನ್.ಆರ್.ಕಾಲೊನಿ
ನರಸಿಂಹ ರಾಜ ಕಾಲೋನಿಯ, ನೆಟ್ಟಕಲ್ಲಪ್ಪ ಬಸ್ ಸ್ಟ್ಯಾಂಡ್ ನ ಸಮೀಪವೇ ಇರುವ ಒಂದು ಪುಟ್ಟ ದರ್ಶಿನಿ ಶ್ರೀ ಗುರು ಕೊಟ್ಟೂರೇಶ್ವರ ದಾವಣಗೆರೆ ಬೆಣ್ಣೇ ದೋಸೆ ಹೋಟೇಲು. ಇಲ್ಲಿನ ಬೆಣ್ಣೆ ದೋಸೆ, ಬೆಣ್ಣೇ ಖಾಲಿ , ಓಪನ್ ದೋಸೆ, ಪಡ್ಡು ಎಲ್ಲವೂ ಸಖತ್! ತಿಂದು ಕೈತೊಳೆದ ಮೇಲೂ ಅದರ ಘಮ ಹಾಂಗೇ ಇರತ್ತೆ! ಸಂಜೆ ಹೊತ್ತು ಇಲ್ಲಿಗೆ ಬಂದರೆ ಮಂಡಕ್ಕಿ ಒಗ್ಗರಣೆ ಮತ್ತು ಹಲಸಿಂದಿ ವಡೆ ತಿಂದು ನೋಡಿ, ಆಮೇಲೆ ಹೇಳಿ. ಫುಟ್ ಪಾತ್ ನಲ್ಲೇ ನಿಂತುಕೊಂಡು ತಿನ್ನಬೇಕಾಗಿರೋದೊಂದೇ ಮೈನಸ್ ಪಾಯಿಂಟ್- ಅದೇನ್ ಸಮಸ್ಯೆ ಆಗಲ್ಲ ಬಿಡಿ.
ಯುಡಿ ಅಥವಾ ಉಪಹಾರ ದರ್ಶಿನಿ- ನೆಟ್ಕಲ್ಲಪ್ಪ ಸರ್ಕಲ್
ದಾ.ಬೇ.ದೋ ಹೋಟೇಲ್ ಎದುರಿಗೆ ನಿಲ್ಲೋಕೂ ಜಾಗ ಇಲ್ಲದಷ್ಟು ರಶ್ ಇದೆ ಅಂತಿಟ್ಟುಕೊಳ್ಳಿ. ಹಾಂಗೇ ಒಂದು ಸ್ವಲ್ಪ ಮುಂದೆ ಬಂದು ಡಿ.ವಿ.ಜಿ. ರೋಡ್ ಕಡೇ ಹೊರಳಿದರೆ ಅಲ್ಲಿ ಇನ್ನೊಂದು ರುಚ್ ರುಚಿಯಾದ್ ತಿಂಡಿ ಸಿಗೋ ಉಪಹಾರ ದರ್ಶಿನಿ ಇದೆ. ಇಲ್ಲಿನ ರವಾ ದೋಸೆ ಫೇಮಸ್ಸು.
ಹಳ್ಳಿ ತಿಂಡಿ, ಆಶ್ರಮ ಸರ್ಕಲ್
ಹೆಸರೇ ಹೇಳುವ ಹಾಗೆ ಹಳ್ಳಿ ತಿಂಡಿ- ಪತ್ರೊಡೆ, ಅಕ್ಕಿರೊಟ್ಟಿ, ಹಲಸಿನ ಹಣ್ಣಿನ ಕಡುಬು(ಸೀಸನಲ್ ಮತ್ತೆ!), ಸುಕ್ಕಿನುಂಡೆ, ಹಾಲ್ಬಾಯಿ, ಒಂದಾ ಎರಡಾ... ಇಲ್ಲಿನ ಬನ್ಸ್ ನ ರುಚಿ ಇಡೀ ಬೆಂಗಳೂರಲ್ಲಿ ಎಲ್ಲೂ ಸಿಗದು. ದೊಡ್ಡ ಗಣಪತಿ ದೇವಸ್ಥಾನದ ಸಮೀಪವೇ ಇದೆ ಈ ಹೋಟೆಲು.
ಎಸ್.ಎಲ್.ವಿ. ಆಶ್ರಮ
ಆಶ್ರಮ ಸರ್ಕಲ್ಲಿನಲಿರುವ ಈ ಹೋಟೇಲಿನ ಇಡ್ಲಿವಡೆ ಸಾಂಬಾರು ಸಖತ್! ಕಾಪೀನೂ ಅಷ್ಟೆ.
ಕೂಲ್ ಕಾರ್ನರ್- ಜೈನ್ ಕಾಲೇಜ್ ಹತ್ರ.
ಇಲ್ಲಿನ ಅಕ್ಕಿರೊಟ್ಟಿ ಸೂಪರ್ ಟೇಸ್ಟ್. ಜ್ಯೂಸ್ ಗಳೂ ಚೆನ್ನಾಗಿರುತ್ತವೆ. .
ಇವುಗಳನ್ನು ಬಿಟ್ಟರೆ ಚಾಮರಾಜಪೇಟೆಯ ಬ್ರಾಹ್ಮಿನ್ಸ್ ಕೆಫೆ, ಎನ್.ಆರ್ ಕಾಲನಿಯ ಐಯರ್ಸ್ ಮೆಸ್ಸು, ಮನೆಊಟ, ವಿ.ವಿ ಪುರಂ ನ ಫುಡ್ ಸ್ಟ್ರೀಟು... ಆಹಾರಪ್ರಿಯರಿಗೆ ಇನ್ನೊಂದಿಷ್ಟು ಉತ್ತಮ ಜಾಗಗಳು.
ಎಲ್ಲರಿಗೂ ಶುಭವಾಗಲಿ:)
ಮನಸ್ಸಿನಲ್ಲಿರುವುದುಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೧೦:೩೨, ಜನವರಿ ೬, ೨೦೦೯
ಮನಸ್ಸಿನಲ್ಲಿರುವುದು
ಕನಸಿನಲ್ಲಿ ಬರುವುದು
ಕನಸಿನಲ್ಲಿ ಕಂಡದ್ದು
ನೆನೆಪಿನಲ್ಲಿ ಉಳಿಯುವುದು
ನೆನಪಿನಲ್ಲಿರುವುದು ಎಂದೂ ಮರೆಯಲಾಗದು
ಎಂದು ಮರೆಯಲಾಗದ ನಿನ್ನ ಮುಖ
ನನ್ನ ಹೃದಯದಲ್ಲಿರುವುದು
ನನ್ನ ಹೃದಯದಲ್ಲಿರುವ
ಪ್ರೀತಿ ನಿನಗಾಗಿರುವುದು
ಸತ್ತಾಗಲೂ ಲಾಭ ಲೆಕ್ಕಿಸಿದ ನಾಡಕೋಣಗಳು!ಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೧೦:೧೪, ಜನವರಿ ೬, ೨೦೦೯
‘ಕರುಮದವತಾರಗಳು’.
ಕಳಸನಕೊಪ್ಪದ ಮಟ್ಟಿಮಾಡ ಹಳ್ಳದ ಶಾನುಭೋಗರ ಕೆರೆಯ ದಂಡೆಯ ಮೇಲೆ ೫ ದಿನಗಳ ಹಿಂದೆ ಸತ್ತು ಬಿದ್ದಿದ್ದ ಕಾಡುಕೋಣದ ವಿಷಯ ನಿಮಗೆ ತಿಳಿದಿದೆ. ಇಂದು (ಮಂಗಳವಾರ) ಕಾಡುಕೋಣದ ಶವ ಪರೀಕ್ಷೆ ನಡೆದ ರೀತಿ ನೋಡಿ ನನಗೆ ಈ ಮನುಷ್ಯರ ಬಗ್ಗೆ ಅಸಹ್ಯ ಮೂಡಿತು. ಸತ್ತಾಗಲೂ ಲಾಭಲೆಕ್ಕಿಸುವ ನಾಡಕೋಣಗಳ ಮನಸ್ಸಿನ ಪರಿ ಹೃದಯಹಿಂಡಿತು. ಮುಂದೆ ಓದಿ »
silhouette ಚಿತ್ರಗಳುಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೦೯:೫೨, ಜನವರಿ ೬, ೨೦೦೯
'ಬೆಳಕನ್ನು ಗಮನಿಸು' ಇದು ಛಾಯಾಗ್ರಹಣದ ಮೊದಲ ಪಾಠ. ಬೆಳಕಿನ ಮೂಲ ಛಾಯಾಗ್ರಾಹಕನ ಹಿಂದೆ ಇರಬೇಕು, ಇನ್ನೊಂದು ಮಾತಿನಲ್ಲಿ ಹೇಳುವುದಾದರೆ ಬೆಳಕಿಗೆ ಅಭಿಮುಖವಾಗಿ ಚಿತ್ರ ತೆಗೆಯುವುದು ಸಾಮನ್ಯ ಅಭ್ಯಾಸವಲ್ಲ. ಕೆಲವೊಂದು ಬಾರಿ ಸೂರ್ಯಾಸ್ಥಮಾನ, ಸೂರ್ಯೋದಯ ಮೊದಲಾದ ಹಿನ್ನೆಲೆಯನ್ನು ಬಳಸಿ, ಮುನ್ನೆಲೆಯಲ್ಲಿ ನಮ್ಮನ್ನಿರಿಸಿ ಚಿತ್ರ ತೆಗೆಯುವಾಗ ಸರಿಯಾದ ಬೆಳಕು ಬೀಳಲು ಫ್ಲಾಷ್ ಬಳಸುವುದು ಸಾಮಾನ್ಯ. ಇಲ್ಲಿ ಮುನ್ನೆಲೆಯ ವಿಷಯ ಸ್ಪಷ್ಟವಾಗಿ ಕಾಣಿಸಿ, ವರ್ಣಮಯ ಹಿನ್ನೆಲೆ ಬರೀ ಕತ್ತಲೆಯಂತೆ ಕಾಣಿಸುತ್ತದೆ. ಇಂತಹ ಸಂದರ್ಭದಲ್ಲಿ ಫ್ಲಾಷ್ ಉಪಯೋಗಿಸದೆ, ಮುನ್ನೆಲೆಯನ್ನು ಅಂಡರ್ ಎಕ್ಸ್ಪೋಸ್ ಮಾಡಿ ವರ್ಣಮಯ ಹಿನ್ನೆಲೆಯನ್ನು ಸಂಯೋಜಿಸಬಹುದು. ಪಕ್ಕದ ಚಿತ್ರದಲ್ಲಿ ಮಂಟಪದ ಆಕಾರ ಮಾತ್ರ ಗುರುತಿಸುವಂತಿದ್ದು ಅದರ ವಿವರಗಳು ಕತ್ತಲೆಯಲ್ಲಿ ಕಾಣಿಸದಂತಿದೆ ಹಾಗೂ ಹಿನ್ನೆಲೆಯಲ್ಲಿ ಸೂರ್ಯಾಸ್ಥಮಾನದ ಬಣ್ಣ ಚಿತ್ರಿತವಾಗಿದೆ. ಈ ರೀತಿಯ ಚಿತ್ರಗಳೇ silhouettes. ಮುಂದೆ ಓದಿ »
ಮನದಾಳದ ಮಾತುಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೦೯:೪೪, ಜನವರಿ ೬, ೨೦೦೯
ಒಂದರೆಗಳಿಗೆ ನಮ್ಮ ರಾಜಕಾರಣಿಗಳು ತಾವು ರಾಜಕಾರಣಿಗಳಲ್ಲಾ,ಎಂದುಭಾವಿಸಲಿ; ಸಾಹಿತಿಗಳು ತಮ್ಮ ಪೂರ್ವಾಗ್ರಹ ಮರೆತು ಚಿಂತಿಸಲಿ, ಸರ್ಕಾರಿ ನೌಕರರು/ಅಧಿಕಾರಿಗಳು ಯಾರಿಗೂ ಅಂಜದೆ ತಮ್ಮ ಆತ್ಮಸಾಕ್ಷಿಗನುಗುಣವಾಗಿ ಕರ್ತವ್ಯ ನಿರ್ವಹಿಸಲು ನಿರ್ಧರಿಸಲಿ, ನ್ಯಾಯವಾದಿಗಳು/ಪೋಲೀಸರು ತಮ್ಮ ಆತ್ಮಸಾಕ್ಷಿಯನ್ನು ನೆನಪು ಮಾಡಿಕೊಳ್ಳಲಿ.................. ಮುಂದೆ ಓದಿ »
ಕಾಯುತಿದೆ ನನ್ನೀ ಮನಸು..ಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೦೮:೨೪, ಜನವರಿ ೬, ೨೦೦೯
ಈ ಪುಟ್ಟ ಹೃದಯದ ಬಾಗಿಲಲಿ ಅವಳಿಗಾಗಿ
ಕಾಯುತಿದೆ ನನ್ನೀ ಮನಸು
ಅವಳಿಗಾಗಿ ಹೂವಿನ ಹಾಸಿಗೆಯನ್ನು ಹಾಸಿ ಕುಳಿತು
ಕಾಯುತಿದೆ ನನ್ನೀ ಮನಸು
ಲೇಖನಿಯ ಶಾಹಿಯು ತನ್ನಲ್ಲಿ ಮೂಡಿಸುವ ಸುಂದರ
ಶಬ್ಧಗಳನ್ನೊಳಗೊಂಡ ಕವಿತೆ ಗಾಗಿ ಹಾತೊರೆಯುತ್ತಿರುವ
ಶುಭ್ರ ಬಿಳಿಹಾಳೆಯಂತೆ ಕಾಯುತಿದೆ ನನ್ನೀ ಮನಸು
ಮುಂದೆ ಓದಿ »
ಇದೀಗ ಬಂದ ಸುದ್ದಿ...........ಮೌನ ಮಾತಾದಾಗ - ಮಂಗಳವಾರ ೦೭:೩೫, ಜನವರಿ ೬, ೨೦೦೯
ಇದೀಗ ಬಂದ ಸುದ್ದಿ....................ಏನಪ್ಪಾಂದ್ರೆ ವೈಕುಂಠ ಏಕಾದಶಿಯ ಪ್ರಯುಕ್ತ ಸರ್ಕಾರದಿಂದ ಲಾಡು ಹಂಚಿಕೆ. ಇದು ಮುಗ್ಧತೇನೋ , ಮೂರ್ಖತನಾನೋ, ಜನರನ್ನು ಸೆಳೆಯುವ ತಂತ್ರಾನೋ, ಭಕ್ತಿನೋ ನನಗೆ ಅರ್ಥ ಆಗುತ್ತಿಲ್ಲ. ಧಾರ್ಮಿಕ ದತ್ತಿ ಇಲಾಖೆಗೆ ಲಾಡು ಹಂಚುವ ಅಧಿಕಾರ ಇರಬಹುದು. ಇದು ಖಜಾನೆಯ ದುಡ್ಡನ್ನು ಪ್ರಸಾದ ವಿನಿಯೋಗಕ್ಕೆ ಹಂಚುವ ಸಮಯವೇ? ದೇವರ ಬಗ್ಗೆ, ದೇವಸ್ಥಾನಗಳ ಬಗ್ಗೆ, ಸರ್ಕಾರದ ಬಗ್ಗೆ ನನಗೆ ದ್ವೇಷವಿಲ್ಲ. ನಾನೂ ಜನತೆಯ ಭಾಗವಾಗಿದ್ದೇನೆ. ಇಲ್ಲಿ ಪ್ರಶ್ನೆ ಏಳೋದು ಇದರ ಅಗತ್ಯ ಇತ್ತೇ ಎನ್ನುವುದು? ಅದೇ ದುಡ್ಡನ್ನು ಶಿಥಿಲಗೊಂಡ ದೇವಸ್ಥಾನಗಳ ಜೀರ್ಣೋದ್ಧಾರಕ್ಕೋ, ಅರ್ಚಕರ ಸಂಬಳ ಹೆಚ್ಚು ಮಾಡುವುದಕ್ಕೋ, ಅಥವ ಇದಕ್ಕೆ ಸಂಬಂಧಿಸಿದ ಇನ್ನಿತರ ಕಾರ್ಯಗಳಿಗೆ ಉಪಯೋಗಿಸಬಹುದಲ್ಲವೇ? ಲಾಡು ತಯಾರಿಸಲು ಮತ್ತು ಹಂಚಲು ಕೆಲವೇ ಲಕ್ಷಗಳು ಬೇಕಾಗಿರಬಹುದು. ಆ ಕೆಲವೇ ಲಕ್ಷಗಳನ್ನು ಉಪಯುಕ್ತ ರೀತಿಯಲ್ಲಿ ಉಪಯೋಗಿಸಬಹುದಲ್ಲವೇ? ಧಾರ್ಮಿಕ ದತ್ತಿ ಇಲಾಖೆ ಅಡಿಯಲ್ಲಿ ಬರುವ ಎಲ್ಲ ದೇವಸ್ಥಾನಗಳಲ್ಲಿ ಭಕ್ತರಿಗೆ ಪ್ರಸಾದ ನೀಡಲಾಗದಷ್ಟು ಹಣದ ಸಂಗ್ರಹಣೆ ಇರಲಿಕ್ಕಿಲ್ಲ. ಹಾಗೆಂದು ಸರ್ಕಾರ ಲಾಡು ವಿತರಣೆಗೆ ತೊಡಗುವುದೇ ? ನಿಜವಾದ ಭಕ್ತನಿಗೆ ಭಕ್ತಿಯೇ ಮುಖ್ಯ. ಪ್ರಸಾದ ವಿತರಣೆ ನಮ್ಮ ಆಚರಣೆಯ ಒಂದು ಭಾಗ ಎಂದು ನಾನು ಒಪ್ಪುತ್ತೇನೆ. ಅದರ ಬಗ್ಗೆ ಸರ್ಕಾರ ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ. ಸರ್ಕಾರದ ಸಹಾಯವಿಲ್ಲದೆ ದೇವಸ್ಥಾನಗಳು ಹಬ್ಬ ಹರಿದಿನಗಳನ್ನು ಆಚರಿಸಿಲ್ಲವೇ? ಜನರು ಅಥವಾ ಭಕ್ತರು ಅದರ ಬಗ್ಗೆ ಚಿಂತಿಸುತ್ತಾರೆ. ಸರ್ಕಾರಕ್ಕೆ ತಲೆಕೆಡಿಸಿಕೊಳ್ಳಲು ಬೇರೆ ಸಮಸ್ಯೆಗಳಿಲ್ಲವೇ? ವೈಕುಂಠ ಏಕಾದಶಿಗೆ ಲಾಡು, ಶಿವರಾತ್ರಿಗೆ ಫಲಹಾರ, ಗಣೇಶನ ಹಬ್ಬಕ್ಕೆ ಮೋದಕ/ಕಡಬು ಹಂಚುತ್ತ ಕುಳಿತರೆ ನಮ್ಮ ರಾಜ್ಯದ ಭವಿಷ್ಯವೇನು? ಸರ್ಕಾರ ಜಪಿಸಬೇಕಾದದ್ದು ಅಭಿವೃದ್ಧಿಯ ಮಂತ್ರ; ತೋರಿಸಬೇಕಾಗಿದ್ದು ಕೆಲಸದಲ್ಲಿ ಶ್ರದ್ಧೆ ಮತ್ತು ಭಕ್ತಿ; ಹಂಚಬೇಕಾಗಿದ್ದು ಸಮೃದ್ಧ ಕರ್ನಾಟಕವೆಂಬ ಪ್ರಸಾದ. ಇನ್ನಾದರೂ ಎಚ್ಚೆತ್ತು ಕೊಳ್ಳುತ್ತೀರ ಯಡ್ಯುರಪ್ಪನವರೆ.
ಮನದ ಸೋಲುಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೦೭:೨೯, ಜನವರಿ ೬, ೨೦೦೯
ಹಿಮಾಲಯದಿ ಹಬ್ಬಿರುವ
ಪರ್ವತ ಶ್ರೇಣಿಗೂ,
ನಾ ಮನಸೋಲಲಿಲ್ಲ
ಬಾನಲ್ಲಿ ಮೂಡಿದ
ಆ ಕಾಮನಬಿಲ್ಲಿಗೂ,
ನಾ ಮನಸೋಲಲಿಲ್ಲ
ಕಡಲ ತೀರಕೂ ಹಬ್ಬಿರುವ
ಆ ಸಹ್ಯಾದ್ರಿಗೂ,
ನಾ ಮನಸೋಲಲಿಲ್ಲ
ನಿನ್ನ ಸೊಂದರ್ಯಕ್ಕೆ
ನಾ ಎಂದೆಂದು, ಮನಸೋಲಲಿಲ್ಲ
ಗೆಳತಿ,
ನಿನ್ನ ಮಾತಿನ ಶೈಲಿಗೆ
ನಾ ಮೆಚ್ಚಿಕೊಂಡೆ
ನಿನ್ನ ನಯ ವಿನಯದಿ
ನನ್ನ ನಾ ಕಳಕೊಂಡೆ
ನಿನ್ನೀ ವಿಶಾಲ ಹೃದಯದಿ
ಕತ್ತಲ ಕನಸುಸಂಪದ - 'ಹೊಸ ಚಿಗುರು, ಹಳೆ ಬೇರು' - ಮಂಗಳವಾರ ೦೭:೨೭, ಜನವರಿ ೬, ೨೦೦೯

ಆಹಾ! ಎಂತಹ ಕನಸು
ನಾನು ನೀನು ಇಬ್ಬರೇ
ಬೆಚ್ಚಗೆ ಮರದ ಕೆಳಗೆ
ಪಚ್ಚೆತಳಿರ ನೆಳಲೊಳಗೆ
ಆಹಾ! ಆ ತಂಗಾಳಿಗೆ
ಹಾರುವ ನಿನ್ನಾ ಕೂದಲು
ಮುಂಗುರುಳು ಹಾಗು
ನನ್ನಾ ತೇಲುವ ಮನಸ್ಸು
ಆಹಾ! ನಿನ್ನಾ ಸವಿನುಡಿಗೆ
ತುಡಿದು ಮಿಡಿದ
ತುಂಬುಒಲುಮೆಯ
ನನ್ನೀ ಪುಟ್ಟಎದೆ
ಹಾ ಹ! ಕನಸು ಬರೀ ಅದು
ಹುಸಿ ಹಗಲುಗನಸು ಮುಂದೆ ಓದಿ »
ಏಳು ಸೂತ್ರ ಸೂಪರ್! ಇನ್ನೈದು ಯಾವಾಗ?ಏನ್ ಗುರು | ಬನವಾಸಿ ಬಳಗ | EN GURU | BANAVASI BALAGA - ಮಂಗಳವಾರ ೦೬:೪೧, ಜನವರಿ ೬, ೨೦೦೯
ಈ ವರ್ಷಾನ ಕನ್ನಡ ಜಾಗೃತಿ ವರ್ಷವಾಗಿ ಆಚರಿಸಲು ಭಾರತೀಯ ಜನತಾ ಪಕ್ಷದ ಸರ್ಕಾರ ಏಳು ಆಡಳಿತ ಸೂತ್ರಗಳನ್ನು ಘೋಷಿಸಿದ ಸುದ್ದಿ ವಿಜಯ ಕರ್ನಾಟಕದ 02.01.2009ರ ಸಂಚಿಕೆಯ ಮುಖಪುಟದಲ್ಲಿ ಬಂದಿರೋ ಸುದ್ದಿ ನೋಡಿ ಭಾಳಾ ಖುಷಿ ಆಯ್ತು ಗುರು! ಇಂಥಾ ಗಟ್ಟಿ ನಿಲುವು ತೋರಿಸಿದ ಸರ್ಕಾರಕ್ಕೆ ನಮ್ಮ ಅಭಿನಂದನೆಗಳು.
ಕನ್ನಡ ಜಾಗೃತಿ ವರ್ಷಾಚರಣೆಗೆ ಏಳು ಸೂತ್ರಗಳು!
ಕರ್ನಾಟಕ ಸರ್ಕಾರ ಘೋಷಿಸಿರೋ ಈ ಏಳು ಸೂತ್ರಗಳು ಆಡಳಿತ, ಶಿಕ್ಷಣ, ನಾಮಫಲಕ, ಗಡಿ ಕಾವಲು, ನೀರು, ಉದ್ಯೋಗ, ಸಂಸ್ಕೃತಿ ಮತ್ತು ಮುಖ್ಯವಾಹಿನಿಗೆ ವಲಸಿಗರು ಎನ್ನುವ ಅಂಶಗಳನ್ನು ಒಳಗೊಂಡಿದೆ. ಈ ಸೂತ್ರಗಳು ಸರಿಯಾಗಿ ಜಾರಿಯಾದರೆ ಬಹಳ ದೊಡ್ಡ ಕ್ರಾಂತಿಯೇ ಆದ ಹಾಗಾಗುತ್ತೆ ಗುರು! ಈ ಏಳು ಸೂತ್ರಗಳ ಅಡಿಯಲ್ಲಿ ಏನೆಲ್ಲಾ ಮಾಡ್ತೀರಾ ಅಂತ ಸರ್ಕಾರಾನ ಕೇಳೋ ಬದಲು ’ಇಂಥಿಂಥಾ ಕೆಲಸಗಳು ಆಗಬೇಕು, ಇವೆಲ್ಲಾ ಮಾಡ್ತೀರಾ?’ ಅಂತ ಕೇಳಬೇಕಾಗಿದೆ.
1. ಆಡಳಿತದಲ್ಲಿ ಕನ್ನಡ : ಕರ್ನಾಟಕ ರಾಜ್ಯದಲ್ಲಿ ಕೆಲಸ ಮಾಡೋ ಎಲ್ಲ ಕಛೇರಿಗಳಲ್ಲಿ ಆಡಳಿತ ಕನ್ನಡದಲ್ಲಿ ಮಾಡಬೇಕು ಅನ್ನೋ ಸರ್ಕಾರದ ನಿಲುವು ಕೇಂದ್ರ ಸರ್ಕಾರಿ ಕಛೇರಿಗಳಿಗೆ ಅನ್ವಯವಾಗುತ್ತದೆಯೇ? ಇಲ್ಲಿನ ತೆರಿಗೆ ಇಲಾಖೆ, ಸುಂಕ ಇಲಾಖೆ, ಪಾಸ್ ಪೋರ್ಟ್ ಕಛೇರಿ, ವಿಮಾನ ನಿಲ್ದಾಣಗಳು... ಹೀಗೆ ಎಲ್ಲೆಡೆ ಕನ್ನಡದಲ್ಲಿ ಆಡಳಿತವನ್ನು ನಡೆಸಲು ಕ್ರಮ ತೆಗೆದುಕೊಳ್ಳಲಾಗುವುದೇ?
2. ಕಲಿಕೆಯಲ್ಲಿ ಕನ್ನಡ : ಕನ್ನಡ ಮಾಧ್ಯಮದಲ್ಲಿನ ಕಲಿಕೆಯ ಗುಣಮಟ್ಟ ಹೆಚ್ಚಿಸಲು ಯಾವ ಕ್ರಮ ತೆಗೆದುಕೊಳ್ಳುವಿರಿ? ತಾಂತ್ರಿಕ ಶಿಕ್ಷಣ, ವೈದ್ಯಕೀಯ ಶಿಕ್ಷಣ, ಉನ್ನತ ಶಿಕ್ಷಣವೂ ಸೇರಿದಂತೆ ಎಲ್ಲೆಡೆ ಕನ್ನಡದಲ್ಲಿ ಕಲಿಕೆ ಸಾಧ್ಯವಾಗಿಸಲು ಯಾವ ಯೋಜನೆ ಹೊಂದಿದ್ದೀರಿ? ಐ.ಸಿ.ಎಸ್.ಇ ಮತ್ತು ಸಿ.ಬಿ.ಎಸ್.ಇ ಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ ಮಾಡ್ತೀರಾ?
3. ನಾಮಫಲಕದಲ್ಲಿ ಕನ್ನಡ : ಇದರ ಜೊತೇಲಿ ಗ್ರಾಹಕಸೇವೆಯನ್ನು ಕನ್ನಡದಲ್ಲಿ ನಿರಾಕರಿಸುವುದು ಶಿಕ್ಷಾರ್ಹ ಅಪರಾಧ ಎನ್ನುವ ಕಾಯ್ದೆ ಮಾಡಲು ಸಿದ್ಧರಾಗಿದ್ದೀರಾ? ಗ್ರಾಹಕ ಸೇವೆಯ ವ್ಯಾಪ್ತಿಗೆ ಕನ್ನಡದಲ್ಲಿನ ಸೇವೆಯನ್ನು ತರಲು ಮುಂದಾಗುವಿರಾ?
4. ಕನ್ನಡ ಗಡಿ ಕಾಯೋಣ : ಹೇಗೆ? ಸರ್ಕಾರ ಗಡಿ ಭಾಗಗಳಲ್ಲಿ ಕನ್ನಡ ವಾತಾವರಣ ಕಟ್ಟಲು ಏನೇನು ಯೋಜನೆ ಹೊಂದಿದೆ? ಹೇಗೆ ಅಲ್ಲಿನ ಮಕ್ಕಳ ಕಲಿಕೆ, ಅಲ್ಲಿನ ಜನರ ಬದುಕಲ್ಲಿ ಕನ್ನಡವನ್ನು ಅಡಕಗೊಳಿಸಲಾಗುತ್ತದೆ?
5. ನೆಲ, ಜಲ, ಉದ್ಯೋಗ ಕನ್ನಡಿಗರಿಗೆ : ಸೂಪರ್... ರಾಷ್ಟ್ರೀಯ ಜಲನೀತಿ ರೂಪಿಸಲು ಏನುಮಾಡ್ತೀರಾ? ಮಹಾಜನ್ ವರದಿ ಜಾರಿಗಾಗಿ ಹೇಗೆ ಮುಂದಾಗ್ತೀರಾ? ಡಾ. ಸರೋಜಿನಿ ಮಹಿಷಿ ವರದಿ ಜಾರಿ ಎಂದು?
6. ನಮ್ಮ ಸಂಸ್ಕೃತಿ ಕನ್ನಡ : ಕನ್ನಡಿಗರದ್ದಲ್ಲದ ಸಾಂಸ್ಕೃತಿಕ ದಾಳಿಗಳಾದ ಅಯ್ಯಪ್ಪ, ಛತ್ ಪೂಜಾ, ಕರುಮಾರಿಯಮ್ಮರ ಹಾವಳಿ ತಡೆಗೆ ಏನುಮಾಡ್ತೀರಾ? ಹಂಪಿ ಉತ್ಸವಗಳಲ್ಲಿ, ಬೆಂಗಳೂರು ಹಬ್ಬಗಳಲ್ಲಿ, ಮೈಸೂರು ದಸರಾ ಕಾರ್ಯಕ್ರಮಗಳಲ್ಲಿ ಕನ್ನಡ ಸಂಸ್ಕೃತಿಯನ್ನು ಬಿಂಬಿಸಲು ಕ್ರಮ ಕೈಗೊಳ್ತೀರಾ? ನಮ್ಮ ಸಂಸ್ಕೃತಿಯ ಪ್ರಚಾರಕ್ಕೆ ಯಾವ ಕ್ರಮ ತೊಗೋತೀರಾ?
7. ಎಲ್ಲಿಂದಾದ್ರೂ ಬಂದಿರಿ, ಕನ್ನಡಿಗರಾಗಿರಿ : ಎಲ್ಲಿಂದಲೋ ಬಂದವರಿಗೆ ಕನ್ನಡ ಕಲಿಸೋಕೆ ಏನು ಕ್ರಮ ತೊಗೋತೀರಾ? ಪರಭಾಷಿಕರಿಗೆ ಕನ್ನಡ ಕಲಿಕೆ ಕಡ್ಡಾಯ ಮಾಡೊಕೆ ಏನು ಕ್ರಮಕ್ಕೆ ಮುಂದಾಗ್ತೀರಾ?
ಕನ್ನಡ ಜಾಗೃತಿಗೆ ಹನ್ನೆರಡು ಸೂತ್ರಗಳು : ಇನ್ನೈದು ಇಲ್ಲಿವೆ!
8. ಅಂತರ ರಾಜ್ಯ ವಲಸೆ ನಿಯಂತ್ರಣಕ್ಕೆ ಮುಂದಾಗ್ತೀರಾ?
9. ತ್ರಿಭಾಷಾ ಸೂತ್ರಕ್ಕೆ ತಿಲಾಂಜಲಿ ಕೊಟ್ಟು ಕನ್ನಡದ ಮಕ್ಕಳಿಗೆ ಹಿಂದಿ ಕಲಿಕೆಯೆಂಬ ಶಾಪದಿಂದ ಮುಕ್ತಿ ಕೊಡುಸ್ತೀರಾ?
10. ಕನ್ನಡ ನಾಡಿನ ಮೇಲಾಗುತ್ತಿರುವ ಹಿಂದಿ ಹೇರಿಕೆಯನ್ನು ನಿವಾರಿಸಲು ಮುಂದಾಗಿ 'ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ' ಎನ್ನಲು ಮುಂದಾಗ್ತೀರಾ? ಕನ್ನಡದ ಸಾರ್ವಭೌಮತ್ವ ಸ್ಥಾಪಿಸಲು ಮುಂದಾಗ್ತೀರಾ?
11. ನಿಮ್ಮ ಪಕ್ಷದ ವತಿಯಿಂದ (ಕಡೇ ಪಕ್ಷ!) ಮುಂಬರುವ ಚುನಾವಣೆಗಳಲ್ಲಿ ಕನ್ನಡಿಗರನ್ನು ಮಾತ್ರಾ ಕಣಕ್ಕಿಳುಸ್ತೀರಾ?
12. ನಾಡು ನುಡಿಗೆ ಹಾನಿ ಮಾಡುವ ನಿಲುವು ಹೊಂದಿರುವ ದ್ರಾವಿಡ ಪಕ್ಷಗಳಾಗಲೀ, ಎಂ.ಇ.ಎಸ್ ಥರದ ಪಕ್ಷಗಳಾಗಲೀ ತಲೆ ಎತ್ತಲು ಸಹಾಯವಾಗುವಂತೆ ಅವರೊಂದಿಗೆ ರಾಜಕೀಯ ಸಖ್ಯಕ್ಕೆ ಮುಂದಾಗುವುದಿಲ್ಲ ಎಂದು ಘೋಷಣೆ ಮಾಡ್ತೀರಾ?
ಹದಿನಾರಾಣೆ ಪ್ರಶ್ನೆಗಳು!
ಈ ಕೆಲಸಗಳೆಲ್ಲಾ ಕನ್ನಡ ನಾಡಿನಲ್ಲಿ ಕನ್ನಡಕ್ಕೆ ಸಿಗಬೇಕಾದ ಸ್ಥಾನ ಸಿಗಲು ಅತ್ಯಗತ್ಯವಾಗಿದೆ. ಆದರೆ ಈ ನಿಲುವುಗಳೆಲ್ಲಾ ಭಾಜಪ ಪ್ರತಿಪಾದುಸ್ತಾ ಇರೋ ರಾಷ್ಟ್ರೀಯತೆ(?)ಯ ಪರಿಕಲ್ಪನೆಗೆ ಹೊಂದಿಕೆಯಾದೀತೇ? ಕರ್ನಾಟಕದಲ್ಲಿ ಕನ್ನಡದ ಸಾರ್ವಭೌಮತ್ವ ಸ್ಥಾಪನೆಯಾಗೋದ್ರಿಂದಲೇ ಕನ್ನಡಿಗರ ಬದುಕು ಹಸನಾಗೋದು, ಬಲಿಷ್ಟ ಕರ್ನಾಟಕ ಹುಟ್ಟೋದು... ಇಂತಹ ಕ್ರಮಗಳಿಂದಲೇ ಬಲಿಷ್ಟ ತಮಿಳುನಾಡು, ಬಲಿಷ್ಟ ಗುಜರಾತುಗಳನ್ನು ಕಟ್ಟಲು ಸಾಧ್ಯವಾಗೋದು ಅನ್ನೋದನ್ನು ಇವರು ಅರ್ಥ ಮಾಡ್ಕೊಳ್ಳಬಲ್ಲರೇ? ಬಲಿಷ್ಟವಾದ ರಾಜ್ಯಗಳೇ ಭಾರತವನ್ನು ಬಲಿಷ್ಟಗೊಳಿಸೋದು ಅನ್ನೋದನ್ನು ಇವರು ಅರಿಯಬಲ್ಲರೇ?ನಿಜವಾದ ಏಳಿಗೆಗೆ ಬೇಕಾದ ಈ ಕ್ರಮಗಳನ್ನು ಇವತ್ತಿನ ಭಾಜಪಾ ಒಪ್ಪೀತಾ? ಅನ್ನೋದು ಹದಿನಾರಾಣೆ ಉತ್ತರವಿಲ್ಲದ ಪ್ರಶ್ನೆಗಳು ಗುರು!
I will come back!!Maanasa Sarovara - ಮಂಗಳವಾರ ೦೫:೫೯, ಜನವರಿ ೬, ೨೦೦೯
I am taking leave of you
In search of something new
You may not love me thou
I shall always love you thee
You might forget me through the times
But shall be remembered through my heartbeat rhymes
One day I will come back to you
Just to say I still love you!!
೧ ೨ ೩ ೪ ೫ ೬ ೭ ೮ ೯ ೧೦ ಮುಂದೆ› ಕೊನೆ»
|
“ಕನ್ನಡಲೋಕ” ದಲ್ಲಿ ಕಾಣಿಸಿಕೊಳ್ಳುವ ಲೇಖನಗಳ ಹಕ್ಕು ಮತ್ತು ಹೊಣೆ ಆಯಾ ತಾಣಗಳ ಲೇಖಕರು/ನಿರ್ವಾಹಕರಿಗೆ ಸೇರಿದ್ದು. ನಿಮ್ಮ ಅಂತರ್ಜಾಲ ತಾಣವನ್ನು “ಕನ್ನಡಲೋಕ” ದಲ್ಲಿ ಸೇರಿಸಲು ನಮಗೆ ಮಿಂಚೆ ಮಾಡಿ.
|