ಕಣ್ಣಾಡಿಸು | ಸಹಾಯ

ಜಿ.ವಿ. ಕನ್ನಡ ಜಿ.ವಿ. ಇಂಗ್ಲಿಷ್ ಶಂಕರ ಭಟ್ ನಿಮ್ಮದೇ ನಿಘಂಟು ದಾಸ ಸಾಹಿತ್ಯ ಪಪಕಪ ಬುಕ್ಕಾಂಬುಧಿ
ಇಂಗ್ಲಿಷ್ ಕನ್ನಡ ಎಲ್ಲೆಡೆ ಹುಡುಕು
ಉದಾ: ಅಭಿಜ್ಞಾನ - ಅಭಿ% - %ಜ್ಞಾನ

ಜಿ.ವಿ. ಕನ್ನಡ ನಿಘಂಟು

    ಎಡೆ ಹೆಸರುಪದ

      (<ಸಂ. ಇಡಾ) ೧ ಭೂಮಿ ೨ ಸ್ವರ್ಗ ೩ ದೇಹದ ಎಡಭಾಗದ ನಾಡಿಯ ಹೆಸರು; (ದೇ) ೧ ಪ್ರದೇಶ, ಜಾಗ ೨ ನಡುವೆ, ಮಧ್ಯ ೩ ಅವಕಾಶ, ಸಂದರ್ಭ ೪ ಸಮಾನ, ಸಮ ೫ ಹತ್ತಿರ, ಸಮೀಪ ೬ ನೈವೇದ್ಯ ೭ ಊಟ, ಆಹಾರ ೮ ಊಟಕ್ಕೆ ಬಡಿಸುವ ಎಲೆ

    ಎಡೆ ಎಸಕಪದ

      (ದೇ) ೧ (ಸಿಪ್ಪೆಯನ್ನು) ಸುಲಿ, ತೆಗೆ ೨ ಬಿಚ್ಚಿ ತೋರು, ಸ್ಪಷ್ಟವಾಗಿ ಕಾಣು

    ಎಡೆ ಅವ್ಯಯ

      (ದೇ) ಬಹಳವಾಗಿ, ಹೆಚ್ಚಾಗಿ

    ಎಡೆಗೆಡೆ ಎಸಕಪದ

      (ದೇ) ೧ ನಡುವೆ ಬೀಳು, ಕೆಳಕ್ಕೆ ಬೀಳು ೨ ನಮಸ್ಕರಿಸು

    ಎಡೆತಾಕು ಎಸಕಪದ

      (ದೇ) ಪದೇಪದೇ ಬಂದು ಹೋಗು

    ಎಡೆಮಡಗು ಎಸಕಪದ

      (ದೇ) ೧ ನಿಧಾನಿಸು, ಸಾವಕಾಶ ಮಾಡು ೨ ಅವಕಾಶವನ್ನು ನೀಡು

    ಎಡೆಮಾಡು ಎಸಕಪದ

      (ದೇ) ೧ ಅವಕಾಶ ಕೊಡು, ಸ್ಥಳ ಮಾಡು ೨ ನೈವೇದ್ಯ ಮಾಡು ೩ ಊಟಕ್ಕೆ ಬಡಿಸು

    ಎಡೆಯ ಹೆಸರುಪದ

      (ದೇ) ೧ ಹತ್ತಿರದವನು, ಜೊತೆಯವನು ೨ ದನಕಾಯುವವನು, ಗೊಲ್ಲ

    ಎಡೆವರಿಸು ಎಸಕಪದ

      (<ದೇ. ಎಡೆ + ಪರಿ + ಇಸು) ೧ ನಡುವೆ ಬರು ೨ ಹಿಮ್ಮೆಟ್ಟು

    ಎಡ್ಡ ಹೆಸರುಪದ

      (ದೇ) ಸುಂದರ, ಮನೋಹರ